ಕಬ್ಬು ಬೆಳೆಯ ಭಾರೀ ಗದ್ದಲದಲ್ಲಿ ಒಣಗಿದ ತೊಗರಿ
Team Udayavani, Nov 24, 2018, 6:15 AM IST
ಕಲಬುರಗಿ: ಕಬ್ಬು ಬೆಳೆಗಾರರ ಹೋರಾಟದ ನಡುವೆ ತೊಗರಿ ಬೆಳೆಗಾರರ ಕಣ್ಣೀರು ಗೌಣವಾಗಿದೆ. ಮುಂಗಾರು, ಹಿಂಗಾರು ಎರಡೂ ಹಂಗಾಮಿನ ಮಳೆ ಕೈ ಕೊಟ್ಟ ಬೆನ್ನಲ್ಲೇ ಅಲ್ಪ ಪ್ರಮಾಣದಲ್ಲಿ ಇಳುವರಿಗೆ ಬಂದಿರುವ ತೊಗರಿ ಮಾರುಕಟ್ಟೆಗೆ ಪ್ರವೇಶಿಸಲಾರಂಭಿಸಿದೆ. ಆದರೂ ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಇನ್ನೂ ನಿರ್ಧಾರ ತೆಗೆದುಕೊಳ್ಳದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಕಳೆದ ವರ್ಷ ಮಳೆ ಭರಪೂರ ಆದ ಹಿನ್ನೆಲೆಯಲ್ಲಿ ತೊಗರಿ ಬೆಳೆ ಬಂಪರ್ ಬಂದಿತ್ತಲ್ಲದೇ ತೊಗರಿ ರಾಶಿ ಡಿಸೆಂಬರ್ ಮಧ್ಯದ ಅವಧಿಯಲ್ಲಿ ಆರಂಭವಾಗಿತ್ತು. ಜನವರಿ ಮೊದಲನೇ ವಾರ ಜಿಲ್ಲೆಯ 117 ಖರೀದಿ ಕೇಂದ್ರಗಳು ಸೇರಿ ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಕೇಂದ್ರಗಳ ಸ್ಥಾಪನೆ ಮೂಲಕ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಚಾಲನೆ ನೀಡಲಾಗಿತ್ತು. ಆದರೆ ಈ ವರ್ಷ ಮಳೆ ಕೊರತೆಯಾದ್ದರಿಂದ ತೊಗರಿ ಸಮರ್ಪಕವಾಗಿ ಬೆಳೆದಿಲ್ಲ. ಹೀಗಾಗಿ ತೊಗರಿ ಈಗಲೇ ಕಟಾವಿಗೆ ಬಂದಿದೆ. ಕಳೆದ ವರ್ಷ ಎಕರೆಗೆ ಆರರಿಂದ ಏಳು ಕ್ವಿಂಟಲ್ ಇಳುವರಿ ಬಂದಿದ್ದರೆ ಈಗ ಕೇವಲ ಒಂದರಿಂದ ಎರಡು ಕ್ವಿಂಟಲ್ ಮಾತ್ರ ಇಳುವರಿ ಬರಲಾರಂಭಿಸಿದೆ.
ಮಾರುಕಟ್ಟೆಯಲ್ಲಿ ದರ ಎಷ್ಟು?: ರೈತರು ಬೆಂಬಲ ಬೆಲೆಗಿಂತ ಕಡಿಮೆ ಇರುವ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ 4,400ದಿಂದ 4,900 ದರದಲ್ಲಿ ಮಾರಾಟ ಮಾಡಲಾರಂಭಿಸಿದ್ದಾರೆ. ತೊಗರಿಗೆ ಕೇಂದ್ರ ಸರ್ಕಾರ ಪ್ರಸಕ್ತ ಕ್ವಿಂಟಲ್‌ಗೆ 5,675ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಕನಿಷ್ಠ 500ರೂ. ಪ್ರೋತ್ಸಾಹ ಧನ ಸೇರಿಸಿದರೆ 6,200 ರೂ. ಬೆಂಬಲ ಬೆಲೆ ನಿಗದಿ ಮಾಡಬಹುದಾಗಿದೆ. ಬರಗಾಲ ಇದ್ದ ಪರಿಣಾಮ ರಾಜ್ಯ ಸರ್ಕಾರ ಕ್ವಿಂಟಲ್‌ಗೆ ಸಾವಿರ ರೂ. ಇಲ್ಲವೇ 800 ರೂ. ಗಳನ್ನಾದರೂ ಪ್ರೋತ್ಸಾಹ ಧನ ನೀಡಿದ್ದರೆ 6,500ರೂ. ದರದಲ್ಲಿ ಖರೀದಿ ಮಾಡಬಹುದಾಗಿದೆ.
ಸಭೆಯೇ ಆಗಿಲ್ಲ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಬೇಕೆಂದರೆ ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಅಧ್ಯಕ್ಷತೆಯ ಕೃಷಿ ಉತ್ಪನ್ನ ಬೆಲೆ ನಿಗದಿ ಹಾಗೂ ಖರೀದಿ ಸಮಿತಿ ಸಭೆ ನಡೆದು ಕೇಂದ್ರಕ್ಕೆ ತೊಗರಿ ಖರೀದಿ ಪ್ರಮಾಣ ಕುರಿತಾಗಿ ಪತ್ರ ಬರೆಯಬೇಕು. ಆ ಪತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ತದನಂತರ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹ ಧನ ನಿರ್ಧಾರ ತೆಗೆದುಕೊಳ್ಳಬೇಕು. ಬಳಿಕ ಖರೀದಿ ಕೇಂದ್ರ ಸ್ಥಾಪಿಸಬಹುದಾಗಿದೆ. ಈ ಎಲ್ಲ ಪ್ರಕ್ರಿಯೆ ತಡವಾಗದೇ ಆಗಬೇಕೆಂದರೆ ಕನಿಷ್ಠ 1 ತಿಂಗಳು ಸಮಯ ಹಿಡಿಯುತ್ತದೆ.
ಈಗಾಗಲೇ ಶೇ.60 ಪ್ರಮಾಣದಷ್ಟು ತೊಗರಿ ಬೆಳೆ ಹಾನಿಯಾಗಿದೆ ಎಂಬುದಾಗಿ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಸರ್ಕಾರದಿಂದ ತೊಗರಿ ಖರೀದಿಗೆ ನಿರ್ದೇಶನ ಬಂದಲ್ಲಿ ಜಿಲ್ಲಾಡಳಿತ ತಕ್ಷಣವೇ ಖರೀದಿ ಪ್ರಕ್ರಿಯೆಗೆ ಮುಂದಾಗಲಿದೆ.
– ಆರ್. ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಸಂಬಂಧ ಸಚಿವ ಸಂಪುಟದ ಕೃಷಿ ಉತ್ಪನ್ನ ಬೆಲೆ ನಿಗದಿ ಹಾಗೂ ಖರೀದಿ ಉಪ ಸಮಿತಿ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಬೇಕಿತ್ತು. ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಈಗಾಗಲೇ ರೈತರು ಆಗ್ರಹಿಸುತ್ತಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘದಿಂದ ಶನಿವಾರ ಡೀಸಿ ಕಚೇರಿ ಎದುರು ತೊಗರಿ ಖರೀದಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
– ಮಾರುತಿ ಮಾನ್ಪಡೆ, ಕೆಪಿಆರ್‌ಎಸ್, ರಾಜ್ಯ ಉಪಾಧ್ಯಕ್ಷರು
– ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.