ಎತ್ತಿನಹೊಳೆ ದ್ವಿತೀಯ ಹಂತ: ಅಂತರ್ಜಲ ಕುಸಿತ ಭೀತಿ


Team Udayavani, Nov 24, 2018, 10:04 AM IST

yeetu.jpg

ಸುಬ್ರಹ್ಮಣ್ಯ: ಎತ್ತಿನಹೊಳೆ ಯೋಜನೆಯ ದ್ವಿತೀಯ ಹಂತ ಆರಂಭಗೊಂಡಿರುವ ಸಕಲೇಶಪುರ ಭಾಗದಲ್ಲಿ ಕಾಮಗಾರಿಯಿಂದಾಗಿ ಅಂತರ್ಜಲ ಕುಸಿಯುವ ಸಾಧ್ಯತೆಯ ಬಗ್ಗೆ ಅಲ್ಲಿನ ಜನರು ಆತಂಕಗೊಂಡಿದ್ದು, ಪ್ರತಿಭಟನೆ ಮತ್ತು ಕಾನೂನು ಹೋರಾಟಕ್ಕೆ ಅಣಿಯಾಗಿದ್ದಾರೆ.

ಬೆಳಗೋಡು ವ್ಯಾಪ್ತಿಯ ಹೆಬ್ಬನಹಳ್ಳಿಯಿಂದ ಮೂಗಲಿ, ಕೂಡನಹಳ್ಳಿ, ಬೆಳಗೋಡು ಹಾಗೂ ಬೆಳಮೆ ಗ್ರಾಮದ ವರೆಗೆ 7 ಕಿ.ಮೀ. ವ್ಯಾಪ್ತಿಯಲ್ಲಿ ಸುರಂಗ ಮತ್ತು ನಾಲೆ ಕಾಮಗಾರಿ ನಡೆಯುತ್ತಿದೆ. ಈ ಪೈಕಿ 1.156 ಕಿ.ಮೀ. ಸುರಂಗ ಮಾರ್ಗ. ಉಳಿದಂತೆ 1.157 ಕಿ.ಮೀ.ನಿಂದ 7 ಕಿ.ಮೀ. ವರೆಗೆ ತೆರೆದ ನಾಲೆ. ಜತೆಗೆ ಬೇಲೂರು, ಬಸವಾಪುರ, ಮಾದೀಹಳ್ಳಿ ಮತ್ತು ಬೆಟ್ಟದಾಲೂರು ವ್ಯಾಪ್ತಿಯಲ್ಲಿ 29 ಕಿ.ಮೀ.ನಿಂದ 31 ಕಿ.ಮೀ. ವರೆಗೆ ಸುರಂಗ ಮತ್ತು ತೆರೆದ ನಾಲೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಇಲ್ಲಿ ಸುಮಾರು 7 ಕಿ.ಮೀ. ಹಾಗೂ ಆಲೂರು ತಾಲೂಕಿನಲ್ಲಿ ಸುಮಾರು 2 ಕಿ.ಮೀ. ಉದ್ದದ ತೆರೆದ ಕಾಲುವೆ ನಿರ್ಮಾಣವನ್ನು ಬೆಂಗಳೂರು ಮೂಲದ ಖಾಸಗಿ ಕಂಪೆನಿಯೊಂದು ಸುಮಾರು 335.7 ಕೋಟಿ ರೂ.ಗೆ ವಿಶ್ವೇಶ್ವರಯ್ಯ ಜಲನಿಗಮದಿಂದ ಗುತ್ತಿಗೆ ಪಡಕೊಂಡಿದೆ. ಕಾಮಗಾರಿ ವೇಳೆ ಸ್ಫೋಟಕ ಬಳಕೆಗೆ ಹಾಸನ ಜಿಲ್ಲಾಧಿಕಾರಿಯಿಂದ ಅನುಮತಿ ಕೋರಿದೆ.

ಇದಕ್ಕೆ 40 ಅಡಿಗಳಷ್ಟು ಆಳಕ್ಕೆ ಭೂಮಿ ಕೊರೆಯಬೇಕಿದೆ. ಇದನ್ನು ನಡೆಸಿದಲ್ಲಿ ಬೆಳಗೋಡು ಹೋಬಳಿ ಮತ್ತು ಆಸುಪಾಸಿನ ಹಲವು ಹಳ್ಳಿಗಳಲ್ಲಿ ಅಂತರ್ಜಲ ಬತ್ತುವ ಸಾಧ್ಯತೆ ಜನರನ್ನು ಚಿಂತೆಗೀಡು ಮಾಡಿದ್ದು, ಜನಾಂದೋಲನ ಹಾಗೂ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ಮೊದಲ ಹಂತ ಬಹುತೇಕ ಪೂರ್ಣ
ಮೊದಲ ಹಂತದಲ್ಲಿ, ಯೋಜನೆ ಜಾರಿಯಾದ ಸಕಲೇಶಪುರ ಭಾಗದಲ್ಲಿ ನದಿಯನ್ನು ಅಡ್ಡಗಟ್ಟಿ ವಿತರಣ ತೊಟ್ಟಿ, ಪಂಪ್‌ಹೌಸ್‌ ನಿರ್ಮಿಸಿ ಪೈಪ್‌ಲೈನ್‌ ಅಳವಡಿಸಲಾಗಿದೆ. ಹೊಂಗಡ ಹಳ್ಳ, ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಂಬತ್ತು ಕಡೆ ಒಡ್ಡುಗಳನ್ನು ನಿರ್ಮಿಸಿ ಮೋಟರ್‌ ಅಳವಡಿಸಿ ಅರಣ್ಯದೊಳಗೆ 129 ಕಿ.ಮೀ. ಉದ್ದಕ್ಕೆ ಭಾರೀ ಪೈಪುಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲೂಕಿನ ಹರವನಹಳ್ಳಿ ಬಳಿ ದೊಡ್ಡ ತೊಟ್ಟಿಗೆ ಬಿಡುವ ಕಾಮಗಾರಿ ನಡೆಸಲಾಗಿದೆ. ಅರಣ್ಯದೊಳಗೆ ಭೂಗತ ಪೈಪ್‌ ಅಳವಡಿಕೆ ಅರ್ಧದಷ್ಟು ನಡೆದಿದ್ದು, ಆಗಸ್ಟ್‌ನಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದೆ. ಈ ಹಂತದಲ್ಲಿ ಪೈಪ್‌ ಬದಲಿಗೆ ತೆರೆದ ಕಾಲುವೆಯ ಮೂಲಕ ನೀರು ಹರಿಸಲಾಗುತ್ತದೆ. ಆದರೆ ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಅವೈಜ್ಞಾನಿಕ ಕಾಮಗಾರಿ
ಎತ್ತಿನಹೊಳೆ ಯೋಜನೆ ಎಂಬುದೇ ಅವೈಜ್ಞಾನಿಕ. ಕಾಮಗಾರಿ ವೇಳೆ ಸ್ಫೋಟಕಗಳನ್ನು ಬಳಸಲಿದ್ದಾರೆ ಎಂಬ ಮಾಹಿತಿ ಇದೆ. ಯೋಜನೆಯಿಂದ ಪರಿಸರಕ್ಕೆ ಹಾನಿ ಆಗುವುದು ನಿಸ್ಸಂಶಯ. ಇದನ್ನು ವಿರೋಧಿಸಿ ದೊಡ್ಡ ಮಟ್ಟದ ಜನಾಂದೋಲನ, ಕಾನೂನು ಹೋರಾಟ ನಡೆಸಲಾಗುವುದು.
ಕವನ್‌ ಗೌಡ, ವಕೀಲರು ಮತ್ತು ಎಪಿಎಂಸಿ ಸದಸ್ಯ, ಸಕಲೇಶಪುರ

ಮೊದಲ ಹಂತ ಬಹುತೇಕ ಪೂರ್ತಿಗೊಂಡಿದೆ. ಎರಡನೇ ಹಂತಕ್ಕೆ ಚಾಲನೆ ದೊರಕಿದೆ. ಯೋಜನೆಯೊಂದು ಜಾರಿಗೆ ಬಂದಾಗ ವಿರೋಧಗಳು ಸಹಜ. ಸಾಧಕ-ಬಾಧಕಗಳು ಇರುತ್ತವೆ. ಕಾನೂನಿನ ಚೌಕಟ್ಟಿನಲ್ಲಿ ಅನುಮತಿ ಪಡೆದು ಪೂರ್ಣಗೊಳಿಸುತ್ತೇವೆ.
ಜಯಣ್ಣ, ಎಂಜಿನಿಯರ್‌, ಎತ್ತಿನಹೊಳೆ ಯೋಜನೆ

ತಜ್ಞರ ಸಭೆ ಕರೆದು ಚರ್ಚೆ
ಸಕಲೇಶಪುರ ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ವೇಳೆ ತೆರೆದ ಕಾಲುವೆ ನಿರ್ಮಿಸಲು ಅಲ್ಲಿನ ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಿಯಮಗಳನ್ನು ರೂಪಿಸಿಕೊಂಡೇ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಈ ಕುರಿತು ತಜ್ಞರ ಸಮಿತಿ ಮತ್ತೂಮ್ಮೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ.
ಆರ್‌. ಶಂಕರ್‌, ಅರಣ್ಯ ಸಚಿವರು

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ

GPS-hori

New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.