ಇಂದಿನಿಂದ ಅಂತಾರಾಷ್ಟ್ರೀಯ ಮಟ್ಟದ ಮೀನಿಗೆ ಗಾಳ ಸ್ಪರ್ಧೆ
Team Udayavani, Nov 24, 2018, 10:38 AM IST
ಮಂಗಳೂರು; ಮಂಗಳೂರು ಮೂಲದ ಗಿಫ್ಟೆಡ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ಎನ್‌ಎಂಪಿಟಿ, ಮಂಗಳೂರು ಆ್ಯಂಗ್ಲರ್ ಕ್ಲಬ್, ಅಖೀಲ ಭಾರತೀಯ ಗೇಮ್ ಫಿಶಿಂಗ್ ಅಸೋಸಿಯೇಶನ್ ಸಹಯೋಗದೊಂದಿಗೆ ಮೀನಿಗೆ ಗಾಳ ಹಾಕುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ನ. 24 ಹಾಗೂ 25ರಂದು ಎನ್‌ಎಂಪಿಟಿಯ ದಕ್ಷಿಣ ಬ್ರೇಕ್‌ವಾಟರ್
ನಲ್ಲಿ ನಡೆಯಲಿದೆ. ನಗರದ ಭಾರತ್‌ಮಾಲ್‌ನ ಡೆಕತ್ಲಾನ್ ಶೋರೂಂನಲ್ಲಿ ಗುರುವಾರ ಶಾಸಕ ವೇದವ್ಯಾಸ್ ಕಾಮತ್ ಸ್ಪರ್ಧೆಯನ್ನು ಉದ್ಘಾಟಿಸಿದರು.
ಕಳೆದ ವರ್ಷ ಮಂಗಳೂರಿನಲ್ಲಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಗಾಳ ಹಾಕುವ ಸ್ಪರ್ಧೆಗೆ ಅನೇಕ ರಾಜ್ಯ
ಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಇದರ ಸ್ಫೂರ್ತಿಯೊಂದಿಗೆ ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಆಯೋಜನೆಗೊಂಡಿರುವುದು ಮಂಗಳೂರಿಗೆ ಹೆಮ್ಮೆ ತಂದಿದೆ ಎಂದವರು ಶ್ಲಾಘಿಸಿದರು.
ಸಮ್ಮಾನ
ಸರ್ಫಿಂಗ್‌ನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ತನ್ವಿ ಜಗದೀಶ್ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಶರಣ್ಯ ಮಹೇಶ್ ಅವರನ್ನು ಇದೇ ವೇಳೆ ಸಮ್ಮಾನಿಸಲಾಯಿತು. ಎನ್‌ಎಂಪಿಟಿ ಟ್ರಾಫಿಕ್ ಮ್ಯಾನೇಜರ್ ವೈ.ಆರ್. ಬೆಳಗಲ್, ಡೋಕ್ ಮಾಸ್ಟರ್ ಕ್ಯಾ| ಗೌರವ್ ಮಥೂರ್, ಪ್ರಮುಖರಾದ ಡಾ| ಶಿವಕುಮಾರ್ ಮಗದ, ನಿತಿನ್ ಮ್ಯಾಥ್ಯೂಸ್, ಡೇವಿಡ್, ಆಲ್ ಇಂಡಿಯಾ ಗೇಮ್ ಫಿಶಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ಡೆರೆಕ್ ಡಿ’ಸೋಜಾ, ಮಂಗಳೂರು ಆ್ಯಂಗ್ಲರ್ ಕ್ಲಬ್ ಅಧ್ಯಕ್ಷ ಶಮೀರ್ ಕೋಟೆಕಾರ್, ಗಿಫ್ಟೆಡ್ ಇಂಡಿಯಾ ಆಯೋಜಕರಾದ ಅನೂಪ್ ಕಾಂಚನ್, ಕೇತನ್ ಕಾಂಚನ್ ಉಪಸ್ಥಿತರಿದ್ದರು.
ಗುರುಪ್ರಸಾದ್ ಪಡುಬಿದ್ರಿ ಮಾತನಾಡಿ, ಪೋರ್ಚ್‌ಗಲ್, ಮಸ್ಕತ್, ದುಬಾೖ ಸೇರಿದಂತೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳಿಂದ ನೂರಾರು ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಸ್ಪರ್ಧಾಳುಗಳು ಬ್ರೇಕ್‌ವಾಟರ್‌ನ ಕಲ್ಲಿನ ಮೇಲೆ ನಿಂತು ಸಮುದ್ರಕ್ಕೆ ಗಾಳಿ ಹಾಕಿ ಮೀನು ಹಿಡಿಯಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾ ನಿಯಮಕ್ಕೆ ಅನುಗುಣವಾಗಿ ಸ್ಪರ್ಧೆಯಲ್ಲಿ ಹಿಡಿಯಲಾಗುವ ಮೀನನ್ನು ಜೀವಂತವಾಗಿ ಮರಳಿ ಸಮುದ್ರಕ್ಕೆ ಬಿಡಲಾಗುತ್ತದೆ ಎಂದರು.
ಮುಂಜಾನೆಯಿಂದ ಸಂಜೆಯವರೆಗೆ!
ಗುರುಪ್ರಸಾದ್ ಪಡುಬಿದ್ರಿ ಮಾತನಾಡಿ, ಸ್ಪರ್ಧೆ ಎರಡು ವಿಭಾಗಗಳಲ್ಲಿ ನಡೆಯಲಿದೆ. ಅತೀ ಹೆಚ್ಚು ತೂಕದಲ್ಲಿ ಪ್ರಥಮ 50,000ರೂ, ದ್ವಿತೀಯ 25,000, ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರಥಮ 10,000ರೂ, ದ್ವಿತೀಯ 5,000 ರೂ.ಗಳ ನಗದು ಬಹುಮಾನವಿರುತ್ತದೆ. ನ. 24ಮತ್ತು 25ರ ಎರಡೂ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 5ರ ವರೆಗೆ ಎನ್‌ಎಂಪಿಟಿಯ ದಕ್ಷಿಣ ಬ್ರೇಕ್‌ವಾಟರ್‌ನಲ್ಲಿ ಸ್ಪರ್ಧೆ ನಡೆಯಲಿದೆ. ನ. 25ರಂದು ಸಂಜೆ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.