ಯಕ್ಷಗಾನದಿಂದ ಕನ್ನಡ ಭಾಷೆ ಉಳಿವು
Team Udayavani, Nov 24, 2018, 5:50 PM IST
ಹೊನ್ನಾವರ: ಹೊಸಾಕುಳಿ ಉಮಾಮಹೇಶ್ವರ ಯಕ್ಷಗಾನ ಕಲಾವರ್ಧಕ ಸಂಘದ 39ನೇ ವರ್ಷದ ಚಾತುರ್ಮಾಸ್ಯ ಏಕಾದಶಿ ಸರಣಿ ತಾಳಮದ್ದಲೆ ಕೂಟಗಳ ಸಮಾರೋಪ ಸಮಾರಂಭ ನಡೆಯಿತು.
ಯಕ್ಷಗಾನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ ನಾಯ್ಕ ಮುಗ್ವಾರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ| ಎನ್. ಆರ್. ನಾಯಕ ಮಾತನಾಡಿ ಕನ್ನಡ ಭಾಷೆ ಶುದ್ಧವಾಗಿ ಉಳಿದದ್ದು ಯಕ್ಷಗಾನದಲ್ಲಿ ಮಾತ್ರ. ಯಕ್ಷಗಾನ ಇರುವ ತನಕ ಕನ್ನಡ ಉಳಿಯುತ್ತದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘದ ಪ್ರಯತ್ನ ಪ್ರಶಂಸನೀಯ ಎಂದರು. ಮುಖ್ಯಅತಿಥಿ ಎಂ.ಆರ್. ಹೆಗಡೆ ಕಾನಗೋಡ, ಕಲಾವಿದರು ಯಕ್ಷಗಾನ ಪಾವಿತ್ರ್ಯತೆ ಉಳಿಸಿಕೊಂಡು ಹೋಗಬೇಕು ಎಂದರು. ಕ್ಷಗಾನ ಕಲಾವಿದ ಈಶ್ವರ ಭಟ್ಟ ಅಂಸಳ್ಳಿ ಸನ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ಎಸ್.ಎಂ. ಹೆಗಡೆ ಮುಡಾರೆ ಮಾತನಾಡಿದರು. ಸಂಘದ ಅಧ್ಯಕ್ಷ ಡಾ| ಜಿ.ಕೆ. ಹೆಗಡೆ ಹರಿಕೇರಿ ಸ್ವಾಗತಿಸಿದರು. ಸಂಸ್ಥಾಪಕ ಅಧ್ಯಕ್ಷ ಯು.ಎಸ್. ಹೆಗಡೆ ತಗಟಗೇರಿ ವಂದಿಸಿದರು.
ಪಾದುಕಾ ಕಿರೀಟಿ ತಾಳಮದ್ದಳೆಯಲ್ಲಿ ಭಾಗವತರಾಗಿ ಸುಬ್ರಾಯ ಭಾಗವತ ಕಪ್ಪೇಕೇರಿ, ಮದ್ದಲೆ ವಾದಕರಾಗಿ ಪಿ.ಕೆ. ಹೆಗಡೆ ಹರಿಕೇರಿ, ಮಂಜುನಾಥ ಭಂಡಾರಿ ಕರ್ಕಿ, ಚಂಡೆ ವಾದಕರಾಗಿ ಕೃಷ್ಣಯಾಜಿ ಇಡಗುಂಜಿ, ಶ್ರೀರಾಮನ ಪಾತ್ರದಲ್ಲಿ ವಿಷ್ಣು ಭಟ್ಟ ನೀಲಕೋಡ, ಲಕ್ಷ್ಮಣನಾಗಿ ಈಶ್ವರ ಭಟ್ಟ ಅಂಸಳ್ಳಿ, ಭರತನಾಗಿ ಡಾ| ಜಿ.ಕೆ. ಹೆಗಡೆ ಹರಿಕೇರಿ, ವಸಿಷ್ಠನಾಗಿ ಪ್ರಭಾಕರ ಹೆಗಡೆ ಚಿಟ್ಟಾಣಿ ಭಾಗವಹಿಸಿ ರಂಜಿಸಿದರು. ಗೋವಿಂದ ಭಟ್ಟ ನೀಲಕೋಡ ನಿರೂಪಿಸಿದರು. ಸಂಘದ ಆಡಳಿತ ಸದಸ್ಯರಾದ ಜಿ.ಎಂ. ಹೆಗಡೆ, ಶಿವಪ್ಪನ್ ಹೆಬ್ಟಾರ್ತಕೇರಿ ಹಾಗೂ ಗಜಾನನ ಹೆಗಡೆ ಗುಡ್ಡೇಬಾಳ ಸಂಯೋಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
Gokarna ಬೀಚಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ಸಾವು
Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.