ಉಡುಪಿ ಶ್ರೀಕೃಷ್ಣ ಮಠ : ಚಿನ್ನದ ಗೋಪುರ: ಹಲವು ಪರಿಷ್ಕಾರಗಳು
Team Udayavani, Nov 25, 2018, 6:00 AM IST
ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡು ಹೊದೆಸುವ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ಒಟ್ಟು 100 ಕೆ.ಜಿ. ಚಿನ್ನದಿಂದ ತಗಡು ತಯಾರಿಸುವ ಯೋಜನೆಗೆ ಇದುವರೆಗೆ ಸುಮಾರು 60 ಕೆ.ಜಿ. ಚಿನ್ನವನ್ನು ಭಕ್ತರು ನೀಡಿದ್ದಾರೆ. ಇದರಲ್ಲಿ ಚಿನ್ನವೂ ಇದೆ, ಹಣದ ರೂಪದ ಕೊಡುಗೆಯೂ ಇದೆ. ಒಟ್ಟು 2,500 ಚದರಡಿಯ ಗರ್ಭಗುಡಿಯ ಗೋಪುರಕ್ಕೆ ಹಿಂದೆ ತಾಮ್ರದ ತಗಡಿನ ಮೇಲೆ ಚಿನ್ನದ ತಗಡನ್ನು ಹೊದೆಸುವುದು ಎಂಬ ಯೋಜನೆ ಇತ್ತು. ಈಗ ಇದನ್ನು ಪರಿಷ್ಕರಿಸಲಾಗಿದೆ. ಪ್ರಸ್ತುತ ಬೆಳ್ಳಿಯ ತಗಡಿನ ಮೇಲೆ ಚಿನ್ನದ ತಗಡನ್ನು ಮಡಾಯಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸುಮಾರು 500 ಕೆ.ಜಿ. ಬೆಳ್ಳಿ ಹೆಚ್ಚುವರಿಯಾಗಿ ಬೇಕಾಗಿದೆ. ಗುಣಮಟ್ಟದ ಕಾರಣಕ್ಕಾಗಿ ಯೋಜನೆಯನ್ನು ಪರಿಷ್ಕರಿಸಲಾಗಿದೆ. ಸುಮಾರು 32 ಕೋ.ರೂ. ವೆಚ್ಚದ ಯೋಜನೆ ಇದು.
ಪಾದರಸದ ಮೂಲಕ, ರ್ಯಾಕರಿ ತಂತ್ರಜ್ಞಾನದಿಂದ ಕಾಮ ಗಾರಿ ನಡೆಸಿದರೆ ಬಹಳಷ್ಟು ಚಿನ್ನ ಲುಪ್ತವಾಗುತ್ತದೆ ಎಂಬ ಕಾರಣಕ್ಕೆ ಬಂಗಾರವನ್ನು ಎರಕ ಹೊಯ್ದು ಯಂತ್ರದ ಮೂಲಕ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಗರಿಷ್ಠ ಶೇ. 98ರಷ್ಟು ಚಿನ್ನ ಕಾಮಗಾರಿಗೆ ಸಿಗು ತ್ತದೆ ಎಂಬ ವಿಶ್ವಾಸವಿದೆ. ಹಿಂದೆ ಚಪ್ಪಟೆಯ ತಗಡನ್ನು ಹೊದೆಸುವ ಗುರಿ ಹೊಂದಿದ್ದರೆ ಈಗ ಕುಶಲಕಲೆಯನ್ನು ಹೊಂದಿದ ಹೆಂಚಿನ ಆಕಾರದಲ್ಲಿ ತಗಡು ಹೊದೆಸಲು ನಿರ್ಧರಿಸಲಾಗಿದೆ. ಕಾಮಗಾರಿಯನ್ನು ಗೋಶಾಲೆ ಎದುರು ಸಾರ್ವಜನಿಕ ರಿಗೆ ಕಾಣಿಸುವಂತೆ ನಡೆಸಲು ನಿರ್ಧರಿಸಲಾಗಿದೆ. ಪಾರಂಪರಿಕವಾಗಿ ಚಿನ್ನದ ಕೆಲಸ ಮಾಡಿಕೊಂಡು ಬಂದ ದೈವಜ್ಞ ಸಮಾಜ ಮತ್ತು ವಿಶ್ವಕರ್ಮ ಸಮಾಜದ ಸಹಕಾರ ದಲ್ಲಿ ಕಾಮಗಾರಿಯನ್ನು ನಡೆಸಲಾಗುವುದು ಎಂದು ತಿಳಿದುಬಂದಿದೆ. ವೆಂಕಟೇಶ ಶೇಟ್ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವರು. ಸ್ವರ್ಣ ಗೋಪುರವನ್ನು ರಾಮನವಮಿ ಸಂದರ್ಭ ಸಮರ್ಪಿಸಲು ನಿರ್ಧರಿಸಲಾಗಿದೆ.
ಕೆಳಗಡೆ ನಿಂತು ನೋಡಿದರೆ ಗರ್ಭಗುಡಿಯ ಮೇಲ್ಭಾಗ ಸಂಪೂರ್ಣವಾಗಿ ಗೋಚರಿಸದಿರುವುದರಿಂದ ಮುಂದಿನ ದಿನಗಳಲ್ಲಿ ಗರ್ಭಗುಡಿಯ ಮೇಲ್ಭಾಗ (ಸ್ವರ್ಣಗೋಪುರ)ಕ್ಕೆ ಪ್ರವೇಶ ಕಲ್ಪಿಸುವ ಯೋಜನೆಯೂ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.