ಬಾಲಕರ ಪ್ರಾಣ ಉಳಿಸಿದರು…
Team Udayavani, Nov 25, 2018, 6:35 AM IST
ಮಂಡ್ಯ: ಕನಗನಮರಡಿ ಸಮೀಪ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಂಟು ಮಂದಿ ಯುವಕರ ತಂಡ ರಭಸದಿಂದ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯಕ್ಕಿಳಿಯಿತು. ಕನಗನಮರಡಿಯ ಚಿನ್ನಿರಾಜು,ಅಭಿ, ಮೂರ್ತಿ, ಮಂಜು, ಚೇತನ್, ರವಿಕಿರಣ್,ಚಂದ್ರಕಾಂತ್, ಅಂಗಡಿ ರಾಜು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯದಲ್ಲಿ ತೊಡಗಿ ಇಬ್ಬರು ಮಕ್ಕಳನ್ನು ಪ್ರಾಣಾಪಾಯದಿಂದ ಪಾರು ಮಾಡಿದರು.
ಬಸ್ ನಾಲೆಗೆ ಉರುಳುತ್ತಿದ್ದಂತೆ ಪ್ರಯಾಣಿಕರ ಚೀರಾಟ ಕಂಡು ನಾಲೆಯ ಅಕ್ಕಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಸ್ಥಳಕ್ಕೆ ಓಡಿ ಬಂದರು.
ಅದೇ ಸಮಯಕ್ಕೆ ಬಾಲಕರಿಬ್ಬರು ಬಸ್ಸಿನ ಕಿಟಕಿ ಗಾಜು ಒಡೆದು ಮೇಲೆ ಬರುತ್ತಿದ್ದಂತೆ ಹಗ್ಗ ಕೊಟ್ಟು ನಾಲೆಯ ಮೇಲಕ್ಕೆ ಎಳೆದುಕೊಂಡು ರಕ್ಷಣೆ ಮಾಡಿದರು.
ನಂತರ, ಬಸ್‌ನ ಒಳಗೆ ಸಿಲುಕಿದ್ದವರನ್ನು ಎಳೆಯಲು ಮುಂದಾದರು. ಈ ವೇಳೆ, ಕೆಲವರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ತಕ್ಷಣ ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುವ ಮುನ್ನವೇ ಬಸ್‌ನಲ್ಲಿ ಸಿಲುಕಿ ಮೃತಪಟ್ಟಿದ್ದವರ ಹಲವರ ಮೃತದೇಹಗಳನ್ನು ಹೊರ ತೆಗೆದಿದ್ದರು. ಈ ನಡುವೆ, ಕೆಲ ಶವಗಳು ನಾಲೆಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡು, ಅವುಗಳನ್ನು ನಾಲೆಯಿಂದ ಮೇಲೆ ತೆಗೆದರು. ಅಷ್ಟರಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಈಜುಗಾರರು, ಸ್ಥಳೀಯರ ನೆರವಿನಿಂದ ನೀರಿನ ರಭಸಕ್ಕೆ ಬಸ್ಸು ಮುಂದೆ ಸಾಗದಂತೆ ಕಂಬಿಗಳಿಗೆ ಹಗ್ಗದಿಂದ ಬಿಗಿದು ಎಳೆದು ನಿಲ್ಲಿಸಿದರು. ನಂತರ, ಬಸ್ಸಿನ ಕಿಟಕಿ ಹಾಗೂ ಬಾಗಿಲುಗಳಿಂದ ಪ್ರಯಾಣಿಕರ ಒಂದೊಂದೇ ಶವಗಳನ್ನು ಹೊರಕ್ಕೆ ತೆಗೆದರು. ಬಸ್ಸಿನಿಂದ ಹೊರ ತೆಗೆದ ಶವಗಳನ್ನು ಹಗ್ಗದ ಸಹಾಯದಿಂದ ನಾಲೆಯ ದಡಕ್ಕೆ ಸಾಗಿಸಿದರು. ವಿಷಯ ತಿಳಿದು ನೀರಾವರಿ ಇಲಾಖೆಯ ಅಧಿಕಾರಿಗಳು ಶವಗಳನ್ನು ಮೇಲೆತ್ತಲು ಅನುಕೂಲವಾಗುವಂತೆ ನಾಲೆಯಲ್ಲಿ ಹರಿಯುತ್ತಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.