ಬುಲ್ ಬುಲ್ ಮಾತಾಡಕಿಲ್ವ


Team Udayavani, Nov 25, 2018, 11:40 AM IST

bul-bul.jpg

ದಕ್ಷಿಣ ಭಾರತದಲ್ಲಿ ಚಿತ್ರರಂಗ ಮತ್ತು ರಾಜಕೀಯದಲ್ಲಿ ಏಕಕಾಲಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಬಂದ ನಟರು ಅನೇಕರಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಅಂಬರೀಶ್‌ ಅವರು ಮಾತ್ರ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ನಟರೆಂದು ಹೇಳಬಹುದು. ಸಾಮಾನ್ಯವಾಗಿ ಯಾರೇ ಆಗಲಿ ತಮ್ಮನ್ನು ತಾವು ಚಿತ್ರರಂಗಕ್ಕೆ ಪರಿಚಯಿಸಿಕೊಳ್ಳ ಬಯಸುವುದು ನಾಯಕನ ಪಾತ್ರದ ಮೂಲಕ. ಆದರೆ, ಅಂಬರೀಶ್‌ ಚಿತ್ರರಂಗಕ್ಕೆ ಕಾಲಿರಿಸಿದ್ದೇ ಪೋಷಕ ನಟರಾಗಿ.

ಪುಟ್ಟಣ್ಣರಂಥ ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿ, ಬೆಳೆದು ಬಂದ ಅವರಿಗೆ ಯಾವುದೇ ಪಾತ್ರವಾಗಲಿ- ಸಲೀಸು. ನಟನೆಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿರುವ ಅಂಬರೀಶ್‌ ಕನ್ನಡ ಚಿತ್ರರಂಗದ ಪಾಲಿಗೆ ಇಂದಿನ ಸಂದರ್ಭದಲ್ಲಿ ಹಿರಿಯಣ್ಣ. ಚಿತ್ರರಂಗ, ಕನ್ನಡದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುವ ನಾಯಕ-ನಟ, ತಮ್ಮ ಕ್ಷೇತ್ರದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಜನಾನುರಾಗಿ. ಅಂಬರೀಷ್‌ ಅವರ ಸಿನಿ ಬದುಕಿನ 46 ವರ್ಷಗಳ ಒಂದು ವಿಶ್ಲೇಷಣಾತ್ಮಕ ನೋಟ ಇಲ್ಲಿದೆ.

ಅಂಬರೀಶ್‌ ಅಭಿನಯದಲ್ಲಿ ಸುದೀಪ್‌ ಒಂದು ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ ಮತ್ತು ಆ ಚಿತ್ರಕ್ಕೆ “ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಹೆಸರನ್ನು ಇಡಲಾಗಿದೆ ಎಂಬ ಮಾತು ಕಳೆದ ವರ್ಷದ ಕೊನೆಯಲ್ಲಿ ಕೇಳಿ ಬಂದಿತ್ತು. ಆದರೆ, ಅಂಬರೀಶ್‌ ಮಾತ್ರ ಎಲ್ಲೂ ತಾವು ಚಿತ್ರದಲ್ಲಿ ನಟಿಸಿರುವ ಬಗ್ಗೆ ಹೇಳಿಕೊಂಡಿರಲಿಲ್ಲ. ಅದೊಂದು ಪತ್ರಿಕಾಗೋಷ್ಠಿಯಲ್ಲಿ ಸುದೀಪ್‌ ಅವರು ಸಿಕ್ಕಾಗ, ಅಂಬರೀಶ್‌ ಅಭಿನಯದಲ್ಲಿ ಒಂದು ಚಿತ್ರ ಮಾಡುತ್ತಿರುವುದಾಗಿ ಘೋಷಿಸಿದರು. ಆ ಚಿತ್ರಕ್ಕೆ “ಅಂಬಿ ನಿಂಗೆ ವಯಸ್ಸಾಯ್ತೋ’ ಎಂಬ ಹೆಸರನ್ನು ಸುದೀಪ್‌ ಇಟ್ಟಿದ್ದಾಗಿ ಹೇಳಿದ್ದರು.

“ಅಂಬರೀಶ್‌ ಅವರಿಗೆ ಈ ಸಿನಿಮಾ ಮಾಡಬೇಕು ಅಂತ ತುಂಬಾ ಆಸೆ. ಅವರ ಎನರ್ಜಿ ನೋಡಿದೆ. ಬಹಳ ಫ್ರೆಶ್‌ ಆಗಿ ಕಾಣುತ್ತಾರೆ. ಅಷ್ಟೇ ಅಲ್ಲ, ಚರ್ಚೆಗಳಿಗೆ ಬಂದು ಕೂರುತ್ತಾರೆ. ಬಹಳ ಕಡಿಮೆ ನಾನು ಆತರ ನೋಡಿದ್ದು. ಎಷ್ಟೋ ಸರಿ, ಅವರೇ ಚರ್ಚೆಗೆ ಕರೀತಾರೆ. ಹೆಸರು ಬಹಳ ಚೆನ್ನಾಗಿದೆ ಅನಿಸ್ತು. ಟ್ರೈಲರ್‌ ಇನ್ನೂ ಚೆನ್ನಾಗಿರುತ್ತೆ. ಸಾಮಾನ್ಯವಾಗಿ ನಾವು ನಮಗೆ ವಯಸ್ಸಾಗಿರುವುದನ್ನು ಒಪ್ಪುವುದಿಲ್ಲ. ಅಂತಹ ಪಾತ್ರವದು. ಆ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿದೆ. ಅದನ್ನು ಅವರೇ ಮಾಡಬೇಕು’ ಎಂದಿದ್ದರು ಸುದೀಪ್‌. ಅದಾದ ಮೇಲೆ ಆ ಚಿತ್ರ ಸೆಟ್ಟೇರಿದ್ದೂ ಆಯ್ತು, ಚಿತ್ರೀಕರಣದಲ್ಲಿ ಅಂಬರೀಶ್‌ ಭಾಗವಹಿಸಿದ್ದೂ ಆಯಿತು. ಈಗ ಆ ಚಿತ್ರ ರಿಲೀಸ್‌ ಆಗಿ ಹೋಗಿದೆ.

ಚಿತ್ರ ಹೇಗೆ ಮೂಡಿ ಬರುತ್ತಿದೆ, ಅಂಬರೀಶ್‌ ಹೇಗೆ ತೊಡಗಿಸಿಕೊಂಡಿದ್ದಾರೆ ಮತ್ತು ಚಿತ್ರದ ಬಗ್ಗೆ ಅವರು ಏನನ್ನುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇತ್ತು. ಈ ಕುರಿತು ಅಂಬರೀಶ್‌ ಅವರನ್ನು ಮಾತಾಡಿಸುವ ಪ್ರಯತ್ನವೂ ಆಯಿತು. ಆದರೆ, ಅಂಬರೀಶ್‌ ಅವರು ಮಾತನಾಡಲಿಲ್ಲ. “ಏನಿದೆ ಮಾತಾಡೋದು. ಯಾಕೆ ಮಾತಾಡಬೇಕು. ಮಾತಾಡೋದರಿಂದ ಏನಾಗತ್ತೆ. ಹೇಳಿದ್ದೇ ಹೇಳಬೇಕು. ಅದಕ್ಕೊಂದು ಸಂದರ್ಭ, ಕಾಲ ಅಂತ ಬರಬೇಕು. ಆಗ ಮಾತಾಡಬೇಕು. ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಮಾತನಾಡಿದರಾಯಿತು.

ಆಗ ಅದಕ್ಕೊಂದು ಅರ್ಥ ಇರುತ್ತದೆ ‘ ಎಂಬುದು ಅವರ ನಿಲುವು.
“ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವು ಇನ್ನು ಕೆಲವು ತಿಂಗಳಲ್ಲಿ ಬಿಡುಗಡೆಯಾಗುತ್ತದೆ. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಾರೆ. ಅದರಿಲಿ. ಆದರೆ, ಚಿತ್ರತಂಡದವರು ಹೇಳುವಂತೆ ಅಂಬರೀಶ್‌ ಬಹಳ ಪ್ರೀತಿಯಿಂದ ತೊಡಗಿಸಿಕೊಂಡಿದ್ದಾರಂತೆ. ಹಗಲು-ರಾತ್ರಿ ಎನ್ನದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ. ಈ ಚಿತ್ರದಲ್ಲಿ ಅವರು ಎರಡೆರೆಡು ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರಂತೆ.

ಯಮ, ಕೆಂಪೇಗೌಡ, ಗೊಂಬೆ ಆಡ್ಸೋನು: ಅಂಬರೀಶ್‌ ಅವರು ನಟನಾಗಿ ಯಾವುದೇ ಮಹತ್ವಾಕಾಂಕ್ಷೆ ಹೊತ್ತವರೇ ಅಲ್ಲ. ಇಂಥ ಪಾತ್ರ ಒಮ್ಮೆ ಮಾಡಬೇಕು ಅಂತ ಅಂಬಿ ಯಾವತ್ತೂ ಹೇಳಿದವರಲ್ಲ, ನಟನಾಗಿ ಅಷ್ಟೊಂದು ಪ್ಯಾಷಿನೇಟ್‌ ಆಗಿ ಅವರು ತೊಡಗಿಕೊಂಡವರಲ್ಲ. ತಮ್ಮ ಸಮಯಕ್ಕೆ ಬಂದು, ಬಣ್ಣ ಹಚ್ಚಿ, ಭಾರವಾದ ಕಾಸ್ಟೂಮ್‌ ಹೊತ್ತು ಅದರ ಹೊರುವಿಕೆಗೆ ಬೈದುಕೊಳ್ಳುತ್ತಾ ಹೊರೆ ಇಳಿಸಿ ಹೊರನಡೆದುಬಿಡುವ ಅವಸರದಲ್ಲೇ ಇರುವ ಅಂಬರೀಶ್‌ ಅವರು ಇನ್ಯಾವ ಪಾತ್ರದಲ್ಲಿ ನಮ್ಮೆದುರು ಎದುರಾದಾರು?

ಹಾಗೆ ನೋಡಿದರೆ, ಕೆಲವು ವರ್ಷಗಳ ಹಿಂದೆ ಅವರು ಊರ ಗೌಡನಾಗಿ “ವೀರ ಪರಂಪರೆ’ ಮಾಡಿದರು. ಯಮನ ಕಾಸ್ಟೂಮ್‌ನಲ್ಲಿ “ಕಠಾರಿ ವೀರ ಸುರಸುಂದರಾಂಗಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಪಂಕಜ್‌ ಜೊತೆ “ರಣ’ ಎಂಬ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದರು. ಗೊಂಬೆ ಶಾಸ್ತ್ರ ಹೇಳುವ ವಿಶಿಷ್ಟ ಪಾತ್ರದಲ್ಲಿ “ಡ್ರಾಮಾ’ದಲ್ಲಿ ಎದುರಾದರು. ಫ್ಯಾಮಿಲಿ ಸೆಂಟಿಮೆಂಟ್‌ ಇರುವ “ಬುಲ್‌ಬುಲ್‌’ ಮಾಡಿದರು. “ಅಂಬರೀಶ’ ಚಿತ್ರದಲ್ಲಿ ಕೆಂಪೇಗೌಡನಾದರು.

ಇತ್ತೀಚಿನಷ್ಟು ವೈವಿಧ್ಯಮಯ, ಪೋಷಕ ಪಾತ್ರಗಳು ಹಿಂದೆಂದೂ ಅಂಬರೀಶ್‌ ಅವರಿಗೆ ಸಿಕ್ಕಿಯೇ ಇರಲಿಲ್ಲವೆನ್ನಬೇಕು. ಈಗೊಂದೈದು ವರ್ಷಗಳಿಂದಿತ್ತೀಚೆಗೆ ಮೈಚಳಿಬಿಟ್ಟು ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡ ಅಂಬರೀಶ್‌, ನಿರ್ದೇಶಕರು ಹೇಳಿದಂತೆ ಅಭಿನಯಿಸಿದರು. ಇನ್ನೂ ಸಾಕಷ್ಟು ಪಾತ್ರವನ್ನು ತಲೆಯಲ್ಲಿಟ್ಟುಕೊಂಡು ನಿರ್ದೇಶಕರು ಅಂಬಿ ಮನೆಯನ್ನು ಸಂಕೋಚದಿಂದ ಪ್ರವೇಶಿಸುತ್ತಿದ್ದರೇನೋ? ಅಂಬರೀಶ್‌ ಮತ್ತೂಂದು ಇನ್ನಿಂಗ್ಸ್‌ನಲ್ಲಿ ಅಮಿತಾಭ್‌ ಬಚ್ಚನ್‌ ರೀತಿ ಬಿಡುವಿಲ್ಲದಷ್ಟು ತೊಡಗಿಕೊಳ್ಳುತ್ತಿದ್ದರೋ ಏನೋ? ಅಷ್ಟರಲ್ಲಿ ಚುನಾವಣೆ ಬಂತು, ಚುನಾವಣೆ ನಂತರ ರಾಜಕೀಯ ಜವಾಬ್ದಾರಿಯೂ ಅರಸಿ ಬಂದವು.

ಕಳೆದ ಐದು ವರ್ಷಗಳಲ್ಲಿ ಅವರು ನಟಿಸಿದ್ದು ಬೆರಳಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ. “ದೊಡ್ಮನೆ ಹುಡುಗ’ ಮತ್ತು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಗಳನ್ನು ಬಿಟ್ಟರೆ, ಅವರು ನಟಿಸಿದ್ದು ಅತಿಥಿ ಪಾತ್ರಗಳಲ್ಲೇ ಹೆಚ್ಚು. “ಅಂಬರೀಶ’, “ಹ್ಯಾಪಿ ಬರ್ಥ್ಡೇ’, “ರಾಜಸಿಂಹ’, “ಕುರುಕ್ಷೇತ್ರ’ ಮುಂತಾದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ನಂತರವೇನು ಎಂದು ಗೊತ್ತಿಲ್ಲ. ಏಕೆಂದರೆ, ಅಂಬರೀಶ್‌ ಮತ್ತೆ ಚುನಾವಣೆ ಎದುರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವುದು, ಈ ಚುನಾವಣೆಯ ಮೇಲೆ ಅವಲಂಬಿತವಾಗಿದೆ.

ಟಾಪ್ ನ್ಯೂಸ್

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.