ಜಿಗಜಿಣಗಿ ವಿರುದ್ಧಬಂಜಾರಾ ಆಕ್ರೋಶ


Team Udayavani, Nov 25, 2018, 11:48 AM IST

vij-2.jpg

ವಿಜಯಪುರ: ಜಿಲ್ಲೆಯಿಂದ ದುಡಿಯಲು ಬೇರೆ ಕಡೆಗೆ ಹೋಗಿರುವ ಬಡ ಪರಿಶಿಷ್ಟ ಜಾತಿ ಮತದಾರರನ್ನು ಆಯಾ ಗ್ರಾಮಗಳ ಮತಗಟ್ಟೆಯಿಂದ ಕೈ ಬಿಡುವಂತೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಪತ್ರ ಬರೆದಿರುವ ಕ್ರಮ ಖಂಡಿಸಿ ಜಿಲ್ಲಾ ಬಂಜಾರಾ ಹಿತರಕ್ಷಣಾ ಸಮಿತಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಅರ್ಜು ರಾಠೊಡ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಬರಗಾಲ ತಾಂಡವವಾಡುತ್ತಿದೆ. ಈ ಕಾರಣಕ್ಕಾಗಿ ಬಡ ಜನರು ಅದರಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಿದ ಛಲವಾದಿ, ಬಂಜಾರಾ ಹಾಗೂ ಅಲ್ಪಸಂಖ್ಯಾತ ಸಮುದಾಯವರು ಹೊರ ರಾಜ್ಯಗಳಿಗೆ ಗುಳೆ ಹೋಗಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ. ನಂತರ ಮಳೆಗಾಲದ ಸಂದರ್ಭದಲ್ಲಿ ಅಥವಾ ಕೆಲಸವಿರದ ಸಂದರ್ಭದಲ್ಲಿ (ಬಿನ್‌ ಸೀಸನ್‌) ಮರಳಿ ತಮ್ಮ ಸ್ವಗ್ರಾಮಕ್ಕೆ ಬರುವುದು ವಾಡಿಕೆಯಾಗಿದೆ. ಈ ಬಗ್ಗೆ ಎಲ್ಲವೂ ಗೊತ್ತಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಚುನಾವಣಾ ಆಯೋಗಕ್ಕೆ ಪತ್ರ ನೀಡಿ ದುಡಿಯಲು ಹೋಗಿರುವ ಕಡು ಬಡವರ, ಪರಿಶಿಷ್ಟ ಜಾತಿಯವರ ಮತದಾತನದ ಹಕ್ಕನ್ನು ಕಸಿದುಕೊಳ್ಳುವಂತೆ ಪತ್ರ ಬರೆದು
ಸಂವಿಧಾನ ಮೂಲ ಆಶಯಕ್ಕೆ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. 

ಇದು ನಮ್ಮ ಜಿಲ್ಲೆಯ ನಮ್ಮ ಜನರನ್ನು ಕಳ್ಳರಂತೆ ನೋಡುವ ಹಾಗೂ ನಮ್ಮ ಬಡತನವನ್ನು ಅವಮಾನಿಸುವ ಪ್ರಕ್ರಿಯೆಯಾಗಿದೆ. ನಾವು ಈ ಜಿಲ್ಲೆಯ ಮೂಲ ನಿವಾಸಿಗಳಾಗಿದ್ದು, ನಮ್ಮ ಮತದಾನದ ಹಕ್ಕನ್ನು ಇಲ್ಲಿಯೇ ಹೊಂದಿರುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಮತದಾನದ ಹಕ್ಕನ್ನೂ ಮೊಟಕುಗೊಳಿಸಿದರೆ ಅಥವಾ ಪಟ್ಟಿಯಿಂದ ಕೈ ಬಿಟ್ಟರೆ, ಸಚಿವರ ವಿರುದ್ಧ ನಾವು ನಮ್ಮ ಜನಾಂಗದ ಪರವಾಗಿ ಹಾಗೂ ಸಮಸ್ತ ಬಡವರ ಪರವಾಗಿ ಹಾಗೂ ದುಡಿಯುವವರ ಪರವಾಗಿ ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಕೇಂದ್ರ ಸಚಿವರಾಗಿ ನಮ್ಮ ಜಿಲ್ಲೆಯಿಂದ 50 ವರ್ಷ ರಾಜಕಾರಣದಲ್ಲಿ ಸುಖ ಅನುಭವಿಸಿರುವ ರಮೇಶ ಜಿಗಜಿಣಗಿ ಅವರು ಈ ಹಿಂದೆ ರಾಜ್ಯದ ಸಚಿವರಾಗಿ, ಸದ್ಯ ಕೇಂದ್ರದ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿ ಮಾಡದೇ ಇರುವುದರಿಂದ ನಾವು ಬೇರೆ ಕಡೆ ದುಡಿಯಲು ಹೋಗುವ ಅನಿವಾರ್ಯ ಪ್ರಸಂಗ ಬಂದಿದೆ. ಇದಕ್ಕೆ ಕಾರಣವಾಗಿರುವ ಇವರು ಮತದಾರರನ್ನು ಮತದಾರ ಪಟ್ಟಿಯಿಂದ ಕೈ ಬಿಡುವಂತೆ ಪತ್ರದ ಮೂಲಕ ಒತ್ತಾಯಿಸಿರುವುದು ವಿಪರ್ಯಾಸ ಎಂದರು.

ಜಗನು ಮಹಾರಾಜ, ರಾಜಪಾಲ ಚವ್ಹಾಣ, ಬಿ.ಬಿ. ನಾಯಿಕ, ಇಂದುಮತಿ ಲಮಾಣಿ, ಡಿ.ಎಚ್‌. ಜಾಧವ, ರಾಮು ಚವ್ಹಾಣ, ಅಶೋಕ ರಾಠೊಡ, ರಘುವೀರ ನಾಯಿಕ, ಮಲ್ಲಿಕಾರ್ಜುನ ನಾಯಿಕ, ಸಂತೋಷ ರಾಠೊಡ, ಪಿಂಟು ರಾಠೊಡ, ಅರವಿಂದ ರಾಠೊಡ, ಅಶೋಕ ರಾಠೊಡ, ಶಾರದಾ ಚವ್ಹಾಣ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ವಿಶಿಷ್ಟ ವಿಚಾರ ಚಿಂತನ ಮಂಥನ : ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

ವಿಶಿಷ್ಟ ವಿಚಾರ ಚಿಂತನ ಮಂಥನ: ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

Donald-Trumph

US; ನೀಲಿತಾರೆ ಹಣ ಪ್ರಕರಣ: ಟ್ರಂಪ್‌ ಬೇಷರತ್‌ ರಿಲೀಸ್‌

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ವಿಶಿಷ್ಟ ವಿಚಾರ ಚಿಂತನ ಮಂಥನ : ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

ವಿಶಿಷ್ಟ ವಿಚಾರ ಚಿಂತನ ಮಂಥನ: ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

Donald-Trumph

US; ನೀಲಿತಾರೆ ಹಣ ಪ್ರಕರಣ: ಟ್ರಂಪ್‌ ಬೇಷರತ್‌ ರಿಲೀಸ್‌

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.