ಮೂಲ್ಕಿಯಲ್ಲಿ  ಚೈಲ್ಡ್‌ ಲೈನ್‌ ಘಟಕ ಸ್ಥಾಪನೆಗೆ ಆಗ್ರಹ


Team Udayavani, Nov 25, 2018, 12:26 PM IST

25-november-9.gif

ಹಳೆಯಂಗಡಿ: ದೂರದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮಕ್ಕಳ ಸಂರಕ್ಷಣಾ ವ್ಯವಸ್ಥೆಯ ಉಪಕೇಂದ್ರ ಮೂಲ್ಕಿ ಹೋಬಳಿ ಮಟ್ಟದಲ್ಲಿಯೂ ಸ್ಥಾಪನೆಯಾಗಬೇಕು ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಮಕ್ಕಳ ಗ್ರಾಮ ಸಭೆಯಲ್ಲಿ ಕೇಳಿಬಂತು.

ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಂಚಾಯತ್‌ ಮಟ್ಟದ ಮಕ್ಕಳ ಗ್ರಾಮ ಸಭೆಯಲ್ಲಿ ಹಳೆಯಂಗಡಿ ಯುಬಿಎಂಸಿ ಶಾಲೆಯ ನಿತ್ಯಾನಂದ ಈ ಬಗ್ಗೆ ಸಭೆಯಲ್ಲಿ ಆಗ್ರಹಿಸಿ, ಬಾಲ ಕಾರ್ಮಿಕರ, ಲೈಂಗಿಕ ಶೋಷಣೆಯ ವಿರುದ್ಧ, ಶೀಘ್ರವಾಗಿ ಸ್ಪಂದಿಸಲು ಮಕ್ಕಳ ಚೈಲ್ಡ್‌ಲೈನ್‌ ಕೇಂದ್ರವನ್ನು ಮೂಲ್ಕಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಿದಲ್ಲಿ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಚೈಲ್ಡ್‌ಲೈನ್‌ ಕೇಂದ್ರದ ಪ್ರತಿನಿಧಿ ದೀಕ್ಷಿತ್‌, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಏಕೈಕ ಕೇಂದ್ರವನ್ನು ಮಂಗಳೂರಿನಲ್ಲಿ ನಿರ್ವಹಿಸಲಾಗುತ್ತಿದೆ. ಮಾಸಿಕವಾಗಿ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ತಾಲೂಕು ಮಟ್ಟದಲ್ಲಿಯೂ ಕೇಂದ್ರದ ಬೇಡಿಕೆ ಇದೆ. ಈ ಬಗ್ಗೆ ಈ ಗ್ರಾಮಸಭೆ ಸಹಿತ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಇಲಾಖೆಗೆ ನೀಡಿದಲ್ಲಿ ಅದನ್ನು ಮೇಲಾಧಿಕಾರಿಗಳಿಗೆ ರವಾನಿಸಿ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದರು.

ಪಂಚಾಯತ್‌ ಅಧ್ಯಕ್ಷೆ ಜಲಜಾ ಮಾತನಾಡಿ, ಶಾಲಾ ಮೈದಾನದ ಬಗ್ಗೆ ಸ್ಥಳೀಯ ಮಸೀದಿ ಸಮಿತಿಯವರಲ್ಲಿ ಚರ್ಚಿಸಲಾಗುವುದು. ಯುಬಿಎಂಸಿ ಶಾಲಾ ಶಿಕ್ಷಕರ ಬಗ್ಗೆ ಇಲಾಖೆಯೊಂದಿಗೆ ಮಾಹಿತಿ ಪಡೆಯಲಾಗುವುದು ಎಂದರು. ಹಳೆಯಂಗಡಿ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಹೆದರಿಕೆಯಾಗುತ್ತದೆ. ಶಾಲೆಯಲ್ಲಿ ಖಾಯಂ ಶಿಕ್ಷಕರನ್ನು ನಿಯೋಜಿಸಿರಿ.

ಪೋಷಕರಿಲ್ಲದ ಒಂಟಿ ಮಕ್ಕಳಿಗೆ ಸಿಗುವ ಮಾಸಿಕ ಹಣವು ಬಂದಿಲ್ಲ, ಮಕ್ಕಳ ರಕ್ಷಣೆಗೆ ಸ್ಥಳೀಯವಾಗಿರುವವರು ಯಾರು, ಮಕ್ಕಳ ಲೈಂಗಿಕ ಶೋಷಣೆ ಹೇಗೆ, ಚೈಲ್ಡ್‌ ಲೈನ್‌ ಕರೆ ಹೇಗೆ ಮಾಡುವುದು, ಬಾಲ ಕಾರ್ಮಿಕರು ಯಾರು, ಸರಕಾರಿ ಮತ್ತು ಖಾಸಗಿ ಶಾಲೆಗಳು ಎಂಬ ಭೇದ ಬೇಡ ಇತ್ಯಾದಿ ಪ್ರಶ್ನೆಗಳು ಮಕ್ಕಳಿಂದ ಕೇಳಿ ಬಂತು.

ಆಕರ್ಷಕ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮ
ಮಕ್ಕಳಿಂದ ಸಭೆಯ ಆರಂಭದಲ್ಲಿ ಶಾಲಾ ವಠಾರದಲ್ಲಿ ವಿವಿಧ ಘೋಷಣೆಗಳ ಫಲಕಗಳೊಂದಿಗೆ ಆಕರ್ಷಕ ಜಾಥಾ ನಡೆಸಲಾಯಿತು. ಹಾಡು, ನೃತ್ಯ, ಪ್ರಹಸನ, ಜಾಗೃತಿ ಕಿರು ನಾಟಕದ ಜತೆಗೆ ಮಕ್ಕಳೇ ಸಂಪೂರ್ಣ ಕಾರ್ಯಕ್ರಮ ನಿರ್ವಹಿಸಿದರು. ಕಟೀಲು ಪದವಿ ಪೂರ್ವ ಕಾಲೇಜಿನ ಉಮೇಶ್‌ ಉದ್ಘಾಟಿಸಿದರು. ಬೊಳ್ಳೂರು ಶಾಲೆಯ ವಿದ್ಯಾರ್ಥಿ ನಾಯಕ ಸನತ್‌ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್‌ನ ಅಧ್ಯಕ್ಷೆ ಜಲಜಾ ಶುಭ ಹಾರೈಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಶೋಧಾ, ಮಂಗಳೂರು ಚೈಲ್ಡ್ ಲೈನ್‌ನ ದೀಕ್ಷಿತ್‌, ಆರೋಗ್ಯ ಸಹಾಯಕಿ ಗೀತಾ, ಮೂಲ್ಕಿ ಪೊಲೀಸ್‌ ಸಿಬಂದಿ ಸಿದ್ದು ಎಸ್‌.ಬಿ., ಶಾಲಾ ಮುಖ್ಯ ಶಿಕ್ಷಕ ಜಯರಾಂ, ಪಂಚಾಯತ್‌ ಪ್ರಭಾರ ಪಿಡಿಒ ಅನಿತಾ ಕ್ಯಾಥರಿನ್‌, ಕಾರ್ಯದರ್ಶಿ ಶ್ರೀಶೈಲಾ ಮಾಹಿತಿ ನೀಡಿದರು. ಮಕ್ಕಳ ಸಂವಹನಕಾರರಾಗಿ ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್‌ ನಿರ್ವಹಿಸಿದರು.

ಪಂಚಾಯತ್‌ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್‌ ಖಾದರ್‌, ಚಿತ್ರಾ ಸುರೇಶ್‌, ಅಬ್ದುಲ್‌ ಅಜೀಜ್‌, ಚಂದ್ರ ಕುಮಾರ್‌ ಸಸಿಹಿತ್ಲು, ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್‌ ಸೆಂಟರ್‌ನ ಕಾವ್ಯಾ, ಜೋಯ್ಲಿನ್‌, ಹಳೆಯಂಗಡಿ ಶಾಲೆಯ ಧನುಶ್‌, ಉರ್ದು ಶಾಲೆಯ ಬೀಫಾತುಮ್ಮಾ, ಯುಬಿಎಂಸಿ ಶಾಲೆಯ ಜನ್‌ಸಿನ್‌ ಮಿರೋಲ್‌, ಸಿಎಸ್‌ಐ ಶಾಲೆಯ ದಿಶಾ, ಸಸಿಹಿತ್ಲು ಶಾಲೆಯ ಪ್ರಣಮ್ಯಾ ಉಪಸ್ಥಿತರಿದ್ದರು. ಬೊಳ್ಳೂರು ಶಾಲೆಯ ಸಬ್ರಿನಾ ನಿರೂಪಿಸಿದರು.

ಸಮಸ್ಯೆಗಳನ್ನು ತೆರೆದಿಟ್ಟ ಮಕ್ಕಳು
ನಮ್ಮ ಶಾಲೆಯ ಕಟ್ಟಡದ ಪ್ರಥಮ ಮಹಡಿಯಿಂದ ಸಿಮೆಂಟ್‌ನ ಗೆಟ್ಟಿಗಳು ಕೆಳಗೆ ಬೀಳುತ್ತಿದೆ, ಕಿಟಕಿಗಳಿಲ್ಲ, ಚರಂಡಿಯಿಂದ ಕೆಟ್ಟ ವಾಸನೆ ಬರುತ್ತಿದೆ, ತ್ಯಾಜ್ಯವನ್ನು ಶಾಲೆಯ ಪಕ್ಕದಲ್ಲಿಯೇ ಸುರಿಯಲಾಗುತ್ತಿದೆ, ಸೂಕ್ತ ಆಟದ ಮೈದಾನ ಇಲ್ಲ ಎಂದು ಬೊಳ್ಳೂರು ಶಾಲೆಯ ಶಬ್ರಿನಾ, ಸೂರಜ್‌, ರಂಜಿತ್‌, ಜಾಹಿದ್‌ ಮಹಮದ್‌ ದೂರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅನಿತಾ ಕ್ಯಾಥರಿನ್‌, ಚರಂಡಿಗೆ ಮನೆಯ ನೀರು ಅದಕ್ಕೆ ಬಿಡಬಾರದು ಅವರವರ ಜಮೀನಿನಲ್ಲಿಯೇ ಇಂಗು ಗುಂಡಿ ರಚಿಸಿಕೊಳ್ಳಬೇಕು. ಇಂತಹ ಮನೆಯವರಿಗೆ ಸಭೆಯಲ್ಲಿ ಚರ್ಚಿಸಿ ನೋಟಿಸು ನೀಡಲಾಗುವುದು. ಶಾಲೆ ಸ್ವಚ್ಛವಾಗಿಡಲು ಮಕ್ಕಳೂ ಶ್ರಮಿಸುವಂತೆ ಶಿಕ್ಷಕರು ಸಹಕರಿಸಬೇಕು ಎಂದರು.

ಟಾಪ್ ನ್ಯೂಸ್

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.