ಮುಂದಿನ ವಿಶ್ವಕಪ್‌ಗೆ ಆಸ್ಟ್ರೇಲಿಯ ಆತಿಥ್ಯ
Team Udayavani, Nov 26, 2018, 6:50 AM IST
ಮೆಲ್ಬರ್ನ್: ಆಸ್ಟ್ರೇಲಿಯದ ವನಿತಾ ತಂಡ ದಾಖಲೆ 4ನೇ ಸಲ ಟಿ20 ವಿಶ್ವಕಪ್ ಕಪ್ ಜಯಿಸಿದ ಬೆನ್ನಲ್ಲೇ 2020ರ ವನಿತಾ ಹಾಗೂ ಪುರುಷರ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ಆತಿಥ್ಯ ವಹಿಸುವುದನ್ನು “ಕ್ರಿಕೆಟ್ ಆಸ್ಟ್ರೇಲಿಯ’ ಅಧಿಕೃತವಾಗಿ ಘೋಷಿಸಿದೆ.
ಇನ್ನು ಹದಿನೈದೇ ತಿಂಗಳಲ್ಲಿ 7ನೇ ಟಿ20 ವನಿತಾ ವಿಶ್ವಕಪ್ ನಡೆಯಲಿದೆ. 10 ತಂಡಗಳ ನಡುವಿನ ಈ ಪಂದ್ಯಾವಳಿ 2020ರ ಫೆ. 21ರಿಂದ ಮಾ. 8ರ ತನಕ ಸಾಗಲಿದೆ. ಒಟ್ಟು 23 ಪಂದ್ಯಗಳನ್ನು ಆಡಲಾಗುವುದು. ಅದೇ ವರ್ಷದ ಅ. 18ರಿಂದ ನ. 15ರ ತನಕ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, 45 ಪಂದ್ಯಗಳನ್ನು ಆಡಲಾಗುವುದು. ಆಸ್ಟ್ರೇಲಿಯದ 8 ನಗರಗಳ 13 ಸ್ಟೇಡಿಯಂಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲಾಗುವುದು. ಒಂದೇ ವರ್ಷ, ಒಂದೇ ದೇಶದ ಆತಿಥ್ಯದಲ್ಲಿ ಈ 2 ವಿಶ್ವಕಪ್ ಪಂದ್ಯಾವಳಿಗಳನ್ನು ಪ್ರತ್ಯೇಕವಾಗಿ ನಡೆಸುವುದು ಇದೇ ಮೊದಲು.
ಪಂದ್ಯಾವಳಿಗೆ ನೂತನ ಹೆಸರು
ಇಲ್ಲಿಯ ತನಕ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ “ವರ್ಲ್ಡ್ ಟಿ20′ ಎಂಬ ಹೆಸರನ್ನು ಹೊಂದಿತ್ತು. 2020ರಿಂದ ಇದು “ಟಿ20 ವರ್ಲ್ಡ್ ಕಪ್’ ಎಂದು ಕರೆಯಲ್ಪಡಲಿದೆ ಎಂಬುದಾಗಿ ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.