ಚತುಷ್ಪಥ ಕಾಂಕ್ರೀಟ್‌ ರಸ್ತೆಯ ಕಾಮಗಾರಿಗೆ ಗ್ರಹಣ?


Team Udayavani, Nov 26, 2018, 9:13 AM IST

2211btlph1.jpg

ಬಂಟ್ವಾಳ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್‌ -ಅಡ್ಡಹೊಳೆ ಚತುಷ್ಪಥ ಕಾಂಕ್ರೀಟ್‌ ರಸ್ತೆ ಕಾಮಗಾರಿ ತಾತ್ಕಾಲಿಕ ನಿಲುಗಡೆ ಆಗಿದೆಯೇ ಎಂಬ ಸಂದೇಹ ಮೂಡಿದೆ. ಗುತ್ತಿಗೆದಾರ ಕಂಪೆನಿಯು ಶೇ.60ರಷ್ಟು ಯಂತ್ರೋಪಕರಣ, ಸರಕು ಸಾಮಗ್ರಿ ಗಳನ್ನು ಸ್ಥಳಾಂತರಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತಿರುವ ಅಂಶ.

ಎಲ್‌ ಆ್ಯಂಡ್‌ ಟಿ ಕಂಪೆನಿಯು ಈ ಕಾಮಗಾರಿ ವಹಿಸಿಕೊಂಡ ಬಳಿಕ ಪಾಣೆಮಂಗಳೂರು ಸೇತುವೆ ಸನಿಹ ಪರಕೇರಿಯ ಸುಮಾರು ಹತ್ತು ಎಕರೆಯಲ್ಲಿ ಸರಕು ಸಾಮಗ್ರಿಗಳ ಸಂಗ್ರಹ ಮಾಡಿತ್ತು. ಈಗ ಅಲ್ಲಿನ ಬಹು
ತೇಕ ಕಾರ್ಮಿಕರು, ಯಂತ್ರೋಪಕರಣಗಳನ್ನು ತೆರವುಗೊಳಿಸಲಾಗಿದೆ.

ನನೆಗುದಿಗೆ ಬಿದ್ದ ಕಾಮಗಾರಿ
ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಈ ರಸ್ತೆ ಕಾಮಗಾರಿ ನಿರ್ವಹಿಸಲು ಎನ್‌ಎಚ್‌
ಎಐ ಜತೆಗೆ 2017ರಲ್ಲಿ ಒಪ್ಪಂದ ಆಗಿತ್ತು. ಎಂಜಿನಿಯರಿಂಗ್‌, ಪ್ರೊಕ್ಯೂರ್‌ವೆುಂಟ್‌ ಮತ್ತು ಕನ್‌ಸ್ಟ್ರಕ್ಷನ್‌ (ಇಪಿಸಿ) ಮಾದರಿಯಲ್ಲಿ 30 ತಿಂಗಳ ಒಳಗೆ ನಾಲ್ಕು ಲೇನ್‌ ಕಾಂಕ್ರೀಟ್‌ ರಸ್ತೆಯನ್ನು ಪೂರ್ಣಗೊಳಿಸಬೇಕಿತ್ತು. ಅದು ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ 20 ತಿಂಗಳು ಮುಕ್ತಾಯ ಆಗಿದ್ದು, ಇನ್ನುಳಿದ ಹತ್ತು ತಿಂಗಳಲ್ಲಿ ಕೆಲಸ ನಿರ್ವಹಿಸುವುದು ಅಸಾಧ್ಯ ಎಂಬ ನೆಲೆಯಲ್ಲಿ ಕಂಪೆನಿಯು ಒಪ್ಪಂದ
ದಿಂದ ನಿರ್ಗಮಿಸಲು ಯೋಜಿಸಿರುವು
ದಾಗಿ ಮಾಹಿತಿ ಲಭ್ಯವಾಗಿದೆ.
ಹೊಂದಾಣಿಕೆ ಕೊರತೆ?
ಯೋಜನೆಗೆ ಜಿಲ್ಲಾಡಳಿತ, ಎನ್‌ಎಚ್‌ಎಐ ಸಹಕಾರ ನೀಡುತ್ತಿಲ್ಲ. ಆರಂಭದಲ್ಲಿದ್ದ ಟೆಂಡರ್‌ನಲ್ಲಿ ಕೆಲವು ಬದಲಾವಣೆ ತಂದಿದ್ದು, ಗುಂಡ್ಯದಲ್ಲಿ ಅರಣ್ಯ ಇಲಾಖೆ ನಿರಾಕ್ಷೇಪಣ ಪತ್ರ ನೀಡಿಲ್ಲ. ಇದರಿಂದ ಸುಮಾರು 145 ಕೋಟಿ ರೂ. ಹೆಚ್ಚುವರಿ ವೆಚ್ಚ ಆಗಲಿದ್ದು, ನಷ್ಟವಾಗುತ್ತದೆ ಎಂಬುದು ಕಂಪೆನಿ ಹಿಂದೆ ಸರಿಯಲು ಕಾರಣ ಎನ್ನಲಾಗಿದೆ. ಅಲ್ಲದೆ, ಕಲ್ಲಡ್ಕದಲ್ಲಿ ಬೈಪಾಸ್‌ ಅಥವಾ ಮೇಲ್ಸೇತುವೆ ನಿರ್ಮಾಣ ಗೊಂದಲ ಇರುವುದರಿಂದ ಎನ್‌ಎಚ್‌ಎಇ 1.2 ಕಿ.ಮೀ. ರಸ್ತೆಯನ್ನು ಒಪ್ಪಂದದ ಬಳಿಕ ಕಡಿತ ಮಾಡಿದೆ.
ಮಳೆಗಾಲದಲ್ಲಿ ಗುಡ್ಡ ಪ್ರದೇಶದಲ್ಲಿ ರಸ್ತೆ ಅಗಲಗೊಳಿಸುವಾಗ ಕುಸಿದು ತೊಂದರೆಯಾಗಿತ್ತು. ಬಹುತೇಕ ಖಾಸಗಿ ಜಮೀನಾಗಿದ್ದು, ಭೂ ಸ್ವಾಧೀನಕ್ಕೆ ಸಮಸ್ಯೆಗಳು ಎದುರಾಗಿದ್ದವು. ಇನ್ನಷ್ಟು
ಜಮೀನು ಸ್ವಾಧೀನ ಆಗಬೇಕಾಗಿರು
ವುದು ಅಡ್ಡಿಯನ್ನು ಕ್ಲಿಷ್ಟವಾಗಿಸಿದೆ.
ಪೆರಿಯಶಾಂತಿಯಲ್ಲಿ ಸೇತುವೆ ಹೆಚ್ಚು ಅಗಲಗೊಳಿಸುವುದು, ಮೂರು ಸಣ್ಣ ಸೇತುವೆಗಳ ವಿಸ್ತರಣೆ, ನೆಲ್ಯಾಡಿಯಲ್ಲಿ ಅಂಡರ್‌ಪಾಸ್‌ ನಿರ್ಮಾಣ, ವಾಹನ ದಟ್ಟಣೆಯ ಪ್ರದೇಶಗಳಾದ ನರಿಕೊಂಬು ಪಾಣೆಮಂಗಳೂರು ಕ್ರಾಸ್‌, ಮೆಲ್ಕಾರ್‌ ಕ್ರಾಸ್‌, ಪುತ್ತೂರು ಕ್ರಾಸ್‌ ಮತ್ತು ಸುಬ್ರಹ್ಮಣ್ಯ ಕ್ರಾಸ್‌ಗಳಲ್ಲಿ ಜಂಕ್ಷನ್‌ ಪರಿವರ್ತನೆಗೆ ಸಂಸದರು ಬಯಸಿದಂತೆ ಅಂದಾಜು ಪ್ರಸ್ತಾವನೆ ಸಲ್ಲಿಸಿದ್ದರೂ ಸ್ಪಂದನೆ ದೊರೆಯದಿರುವುದು ಕಂಪೆನಿ ಹಿಂದೆ ಸರಿಯುವುದಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ.

ಬಿ.ಸಿ.ರೋಡ್‌- ಅಡ್ಡಹೊಳೆ:  821 ಕೋಟಿ ರೂ. ಯೋಜನೆ
ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯ ವರೆಗೆ 821 ಕೋಟಿ ರೂ. ವೆಚ್ಚದಲ್ಲಿ 63 ಕಿ.ಮೀ. ಉದ್ದದಲ್ಲಿ ಸುಸಜ್ಜಿತ ಚತುಷ್ಪಥ ಕಾಂಕ್ರೀಟ್‌ ರಸ್ತೆಗೆ 2016ರ ಮಾ.28ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದರು. ರಸ್ತೆ ನಿರ್ಮಾಣದ ಜತೆಗೆ 14.5 ಕಿ.ಮೀ. ಸರ್ವೀಸ್‌ ರಸ್ತೆ, ಎರಡು ಮೇಲ್ಸೇತುವೆ, ಎರಡು ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್‌ಪಾಸ್‌, 1 ಟೋಲ್‌ ಗೇಟ್‌ ನಿರ್ಮಿಸಲು ಟೆಂಡರ್‌ ನೀಡಲಾಗಿತ್ತು. 
ಕಾಮಗಾರಿಗಾಗಿ ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯ ವರೆಗೆ 270.65 ಹೆಕ್ಟೇರ್‌ ಜಮೀನಿನ ಆವಶ್ಯಕತೆ ಇದ್ದು, 251.54 ಹೆಕ್ಟೇರ್‌ ಜಾಗ ಭೂಸ್ವಾಧೀನವಾಗಿದೆ, 15.02 ಹೆಕ್ಟೇರ್‌ ಭೂಸ್ವಾಧೀನ ಬಾಕಿ ಇದೆ. ಈವರೆಗೆ 122 ಕೋಟಿ ರೂ. ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ಅರಣ್ಯ ವಲಯದಿಂದ 10,196 ಮರಗಳನ್ನು ಕಡಿಯಲು ಅನುಮತಿ ಸಿಕ್ಕಿದೆ. ಗುತ್ತಿಗೆದಾರರು ಸುಮಾರು 7 ಸಾವಿರ ಮರಗಳನ್ನು ಕಡಿದು 45 ಕಿ.ಮೀ.ಗಳಷ್ಟು ಭೂಮಿಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.

ಎಲ್‌ಆ್ಯಂಡ್‌ ಟಿ ಕಂಪೆನಿ ಹೆಚ್ಚುವರಿ 47 ಹೆಕ್ಟೇರ್‌ ಭೂ ಸ್ವಾಧೀನ ಕೇಳಿದೆ. ಕೇಂದ್ರ ಸರಕಾರದ ಮಟ್ಟದಲ್ಲಿ ಇದರ ಬಗ್ಗೆ ಸಮಾಲೋಚನೆ ನಡೆದು ಒಪ್ಪಿಗೆ ಸಿಕ್ಕಿದೆ. ಕಾಮಗಾರಿ ನಿಲುಗಡೆ ಆಗಿಲ್ಲ. ಹಾಸನದಲ್ಲಿರುವ ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರನ್ನು ಈ ಬಗ್ಗೆ 2 ದಿನದಲ್ಲಿ ಕರೆಸಿಕೊಂಡು ಕಾಮಗಾರಿ ತ್ವರಿತ ಮಾಡುವಂತೆ ಸೂಚಿಸಲಾಗುವುದು. ಪ್ರಾಕೃತಿಕ, ಅರಣ್ಯ ಪ್ರದೇಶ ಭೂ ಸ್ವಾಧೀನ, ಸ್ಥಳೀಯ ಅಡಚಣೆಗಳಿಂದ ಆಗಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು.
ನಳಿನ್‌ ಕುಮಾರ್‌ ಕಟೀಲು ಸಂಸದರು.

ಆರಂಭವಾಗಿದ್ದ ಸೇತುವೆ ಕಾಮಗಾರಿ
ನೇತ್ರಾವತಿ ನದಿಯ ನೂತನ ಸೇತುವೆಗೆ ಪಿಲ್ಲರ್‌ ನಿರ್ಮಾಣ ಆರಂಭವಾಗಿತ್ತು. ಆದರೆ ಎನ್‌ಎಚ್‌ಎಐ ಮತ್ತು ಕಂಪೆನಿ ನಡುವಣ ಭಿನ್ನಾಭಿಪ್ರಾಯ ಅಥವಾ ಹೊಂದಾಣಿಕೆಯ ಕೊರತೆಯಿಂದ ಇಡೀ ಕಾಮಗಾರಿಯೇ ಸ್ಥಗಿತಗೊಳ್ಳುವ ಹಂತ ತಲುಪಿದೆ. ಮುಂದಿನ ಆರ್ಥಿಕ ವರ್ಷಾಂತ್ಯಕ್ಕೆ ಬಹುತೇಕ ಕಾಮಗಾರಿ ಮುಗಿಸಿ ಬಳಕೆಗೆ ತೆರೆದುಕೊಳ್ಳಬೇಕಿದ್ದ, ಮಂಗಳೂರು -ಬೆಂಗಳೂರು ಪ್ರಯಾಣ ಅವಧಿಯನ್ನು 3 ಗಂಟೆಗಳಷ್ಟು ಕಡಿಮೆ ಮಾಡಬಹುದಾಗಿದ್ದ ಯೋಜನೆಗೆ ಈಗ ಗ್ರಹಣ ಹಿಡಿದಿದೆ. 

ರಾಜಾ ಬಂಟ್ವಾಳ

ಟಾಪ್ ನ್ಯೂಸ್

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

1-SL

Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್‌

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.