ರಸ್ತೆ ಬದಿ ಬೃಹತ್ ಸ್ವತ್ಛತೆ ಆಂದೋಲನ
Team Udayavani, Nov 26, 2018, 9:22 AM IST
ಬೆಳ್ತಂಗಡಿ: ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬ ಹಾಗೂ ಕ್ಷೇತ್ರದ ಲಕ್ಷದೀಪೋತ್ಸವದ ಅಂಗವಾಗಿ ರವಿವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ಬೃಹತ್ ಸ್ವತ್ಛತಾ ಆಂದೋಲನ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 11 ವಲಯಗಳ ಸದಸ್ಯರಿಂದ ತಾಲೂಕಿನ ವಿವಿಧೆಡೆ ಸ್ವತ್ಛತಾ ಕಾರ್ಯ
ಕ್ರಮವೂ ಇದೇವೇಳೆ ನೆರವೇರಿತು.
ಮುಂಜಾನೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಉಜಿರೆ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಪ್ರತಾಪ್‌ಸಿಂಹ ನಾಯಕ್, ಮಹಾವೀರ ಅಜ್ರಿ ಪಾಲ್ಗೊಂಡಿದ್ದರು.
ಉಜಿರೆಯಿಂದ ಧರ್ಮಸ್ಥಳದ ವರೆಗೆ ರಸ್ತೆ ಬದಿ ಕಸ ಹಾಕದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆಂದೋಲನ ಆಯೋಜಿಸ ಲಾಗಿದ್ದು, ಶೂನ್ಯ ಕಸ ವಲಯ ಎಂಬ ಫಲಕಗಳನ್ನು ಹಾಕಿ ನಿರಂತರ ಅಭಿಯಾನ ನಡೆಸುವ ಕುರಿತು ಅಭಿಪ್ರಾಯಗಳು ವ್ಯಕ್ತವಾಗಿವೆ.
ಗಣ್ಯರಿಂದ ಗೌರವ
ಡಾ| ಹೆಗ್ಗಡೆ ಅವರ ಅಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು. ಕೆ. ಪ್ರತಾಪಸಿಂಹ ನಾಯಕ್, ಎಸ್‌ಬಿಐ ಮಹಾಪ್ರಬಂಧಕ ಇಂದು ಶೇಖರ್, ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಸ್ವಾತಂತ್ರ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ, ಪ್ರೊ| ಎಂ. ರಾಮಚಂದ್ರ, ಬಿಳಿಯೂರು ಧನ್ಯಕುಮಾರ್ ರೈ ಶುಭ ಹಾರೈಸಿದರು. ಜತೆಗೆ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಕಲಿಯುತ್ತಿರುವ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಡಾ| ಹೆಗ್ಗಡೆ ಅವರಿಗೆ ಕೇಕ್ ನೀಡಿ ಶುಭಾಶಯ ಕೋರಿದರು.
408 ಚೀಲ ಕಸ ಸಂಗ್ರಹ
ಸ್ವತ್ಛತಾ ಕಾರ್ಯದಲ್ಲಿ ಡಾ| ಹೆಗ್ಗಡೆ ಅವರ ಅಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಯವರು, ಕಾಲೇಜಿನ ವಿದ್ಯಾರ್ಥಿಗಳು, ಗ್ರಾ.ಪಂ. ಸದಸ್ಯರು, ತಾಲೂಕಿನ ಸ್ವತ್ಛತಾ ಸೇನಾನಿಗಳು, ಜನಜಾಗೃತಿ ವೇದಿಕೆ ಸದಸ್ಯರು, ಪ್ರಗತಿ ಬಂಧು ಒಕ್ಕೂಟ ಸದಸ್ಯರು ಸೇರಿ 350ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಒಟ್ಟು 408 ಗೋಣಿಚೀಲಗಳಲ್ಲಿ ಕಸ ಸಂಗ್ರಹವಾಗಿದ್ದು, ಎರಡು ಕಸ ಸಂಗ್ರಹ ವಾಹನಗಳ ಮೂಲಕ ವಿಲೇವಾರಿ ಮಾಡಲಾಯಿತು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯವರು 400 ಕೈಚೀಲ (ಗ್ಲೌಸ್)ಗಳನ್ನು ನೀಡಿದ್ದು, ಉಜಿರೆ ರಾಮಚಂದ್ರ ಶೆಟ್ಟಿ ಅವರು ಗೋಣಿಚೀಲಗಳ ವ್ಯವಸ್ಥೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.