ಮೂರು ದಿನಗಳ ಸರಣಿ ರಜೆ: ದೇಗುಲಗಳಲ್ಲಿ ಜನಸಂದಣಿ
Team Udayavani, Nov 26, 2018, 9:40 AM IST
ಮಣಿಪಾಲ: ಮೂರು ದಿನಗಳ ಸರಣಿ ರಜೆಯ ಹಿನ್ನೆಲೆಯಲ್ಲಿ ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ಸೋಮವಾರವೂ ರಜಾದಿನವಾದುದರಿಂದ ಜನಸಂದಣಿ ಮುಂದುವರಿಯುವ ಸಾಧ್ಯತೆ ಇದೆ.
ರವಿವಾರ ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು, ಉಡುಪಿ, ಧರ್ಮಸ್ಥಳ, ಕಟೀಲು, ಸುಬ್ರಹ್ಮಣ್ಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು. ಮೂಲಗಳ ಪ್ರಕಾರ ರವಿವಾರ ಸುಮಾರು 40 ಸಾವಿರದಷ್ಟು ಭಕ್ತರು ಧರ್ಮಸ್ಥಳ ಮತ್ತು ಉಡುಪಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲೂರಿನಲ್ಲಿ ರವಿವಾರ ನಾಲ್ಕು ಸಾವಿರದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ.
ನ. 24ರಂದು ನಾಲ್ಕನೇ ಶನಿವಾರ, 25ಕ್ಕೆ ರವಿವಾರ ಹಾಗೂ 26ಕ್ಕೆ ಸೋಮವಾರ ಕನಕ ಜಯಂತಿಯ ಹಿನ್ನೆಲೆಯಲ್ಲಿ ರಜೆ ಇದ್ದು, ಮೂರು ಸರಣಿ ರಜೆಗಳ ಹಿನ್ನೆಲೆಯಲ್ಲಿ ಭಕ್ತರು ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದಾರೆ.
ಸೋಮವಾರ ದಿನ ರಜೆ ಬಂದಾಗ ಬಹುತೇಕ ಅಧಿಕಾರಿ ವರ್ಗದವರೇ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಶನಿವಾರದಿಂದಲೇ ಕ್ಷೇತ್ರದ ವಸತಿ ಗೃಹಗಳು ತುಂಬಿದ್ದು, ಧರ್ಮಸ್ಥಳದಲ್ಲಿ ಪ್ರಮುಖ ಸೇವೆಯಾಗಿರುವ ತುಲಾಭಾರ ಸೇವೆಯೂ ಭರ್ತಿಯಾಗಿದೆ. ಆಗಮಿಸಿದ ವಾಹನಗಳ ಸಂಖ್ಯೆಯೂ ಹೆಚ್ಚಿದೆ.
ಸಮುದ್ರ ತೀರದಲ್ಲಿ ಜನಜಾತ್ರೆ
ಮಲ್ಪೆ, ಮರವಂತೆ, ಕಾಪು, ಸುರತ್ಕಲ್ ಹಾಗೂ ಉಳ್ಳಾಲ ಸಮುದ್ರ ತೀರದಲ್ಲೂ ರವಿವಾರ ಸಾಕಷ್ಟು ಜನ ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.