ಅಂಬಿ ಕಂಡು ಬಿಕ್ಕಿ ಬಿಕ್ಕಿ ಅತ್ತ ಮೋಹನ್ಬಾಬು
Team Udayavani, Nov 26, 2018, 11:40 AM IST
ತೆಲುಗು ನಟ ಮೋಹನ್ಬಾಬು ಮತ್ತು ಅಂಬರೀಷ್ ಅವರ ಗೆಳೆತನ ಹಲವು ದಶಕಗಳದ್ದು. ಅಂಬರೀಷ್ ಅವರ ಮನೆಯ ಯಾವುದೇ ಸಮಾರಂಭವಿರಲಿ, ಅಲ್ಲಿ ಮೋಹನ್ಬಾಬು ಹಾಜರಾಗುತ್ತಿದ್ದರು. ಪರಸ್ಪರ ಅದೆಷ್ಟೋ ಖುಷಿಯ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು.
ಅಂಬರೀಷ್ ಅವರ ಗೆಳೆತನ ಬಗ್ಗೆ ಸಾಕಷ್ಟು ಸಲ ಹೇಳಿಕೊಳ್ಳುತ್ತಿದ್ದ ಮೋಹನ್ಬಾಬು, ಇಂದು ಅಂಬರೀಷ್ ಅವರ ಮುಖ ನೋಡುತ್ತಿದ್ದಂತೆಯೇ, ಬಿಕ್ಕಿ ಬಿಕ್ಕಿ ಅತ್ತರು. ದುಃಖ ತಡೆಯಲಾರದೆ, ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರನ್ನು ತಬ್ಬಿ ಜೋರಾಗಿ ಅಳುವ ಮೂಲಕವೇ ಅಭಿಷೇಕ್ ಅವರಿಗೆ ಸಾಂತ್ವನ ಹೇಳಿದರು.
ಕ್ಷಣಕಾಲ ಮೌನಗೊಂಡು, ಅಂಬರೀಷ್ ಅವರ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರು. ತಮ ಹಿಂದಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಮೋಹನ್ಬಾಬು, ಒಳ್ಳೆಯ ಹೃದಯವಂತನನ್ನು ಕಳೆದುಕೊಂಡೆ ಎಂದು ದುಃಖ ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.