ಅಂಬಿ ಕೊನೆಯದಾಗಿ ನೋಡಿದ್ದು ಪತ್ನಿಯ ಚಿತ್ರ
Team Udayavani, Nov 26, 2018, 11:40 AM IST
ಅಂಬರೀಷ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೇ ತಮ್ಮ ಅಭಿನಯದ ಕೊನೆಯ ಚಿತ್ರವನ್ನು ನೋಡಿದ್ದರು. ಹೌದು, ಆಸ್ಪತ್ರೆಯಲ್ಲಿರುವಾಗಲೇ ಅವರಿಗೆ ತಮ್ಮ ನಟನೆಯ “ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ನೋಡುವ ಆಸೆಯಾಗಿತ್ತು. ವೈದ್ಯರು ವಿಶ್ರಾಂತಿಯಲ್ಲಿರಬೇಕು ಅಂದರೂ, ಅವರು ಅವರ ಮಾತನ್ನು ಲೆಕ್ಕಿಸದೆ, ಅಂಬ್ಯುಲೆನ್ಸ್ ಮೂಲಕ ತೆರಳಿ ಚಿತ್ರ ನೋಡಿ ಖುಷಿಪಟ್ಟಿದ್ದು ಗೊತ್ತೇ ಇದೆ.
ಆ ಚಿತ್ರದ ಬಳಿಕ ಅಂಬರೀಷ್ ನೋಡಿದ ಕೊನೆಯ ಚಿತ್ರ, ಅವರ ಪತ್ನಿ ಸುಮಲತಾ ಅಂಬರೀಷ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರ. ಹೌದು. ಇತ್ತೀಚೆಗಷ್ಟೇ “ತಾಯಿಗೆ ತಕ್ಕ ಮಗ’ ಚಿತ್ರ ಬಿಡುಗಡೆಯಾಗಿತ್ತು. ಆ ಚಿತ್ರತಂಡ ಏರ್ಪಡಿಸಿದ್ದ ಪೂರ್ವಭಾವಿ ಪ್ರದರ್ಶನದಲ್ಲಿ ಅಂಬರೀಷ್ ಚಿತ್ರ ವೀಕ್ಷಿಸಿದ್ದರು.
ಸುಮಲತಾ ಅಂಬರೀಷ್ ಅವರು ವಿದೇಶದಲ್ಲಿದ್ದ ಕಾರಣ, ಅಂಬರೀಷ್ ಒಬ್ಬರೇ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಸುಮಲತಾ ಅವರ ನಟನೆ ಬಗ್ಗೆ ಮೆಚ್ಚಿಕೊಂಡಿದ್ದಲ್ಲದೆ, ತೆರೆಯ ಮೇಲೆ ಮುದ್ದಾಗಿ ಕಾಣುತ್ತಾರೆ. ಅವರು ಮುದ್ದಾಗಿದ್ದಕ್ಕೇ ನಾನು ಮದುವೆ ಆಗಿದ್ದು, ಎಂದು ನಗೆಚಟಾಕಿ ಹಾರಿಸಿದ್ದರು ಅಂಬರೀಷ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.