ಧೂಮಪಾನ ತ್ಯಜಿಸಿ ಕ್ಯಾನ್ಸರ್‌ನಿಂದ ಪಾರಾಗಿ


Team Udayavani, Nov 26, 2018, 12:26 PM IST

dhoomapana.jpg

ಬೆಂಗಳೂರು: ದೇಶದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ವಿಕ್ರಮ್‌ ಆಸ್ಪತ್ರೆ ಕ್ಯಾನ್ಸರ್‌ ರೋಗತಜ್ಞರು “ಅರ್ಬುದ ರೋಗ ಜಾಗೃತಿ ಮಾಸ’ ಕಾರ್ಯಾಗಾರ ನಡೆಸಿದರು.

ವಿಕ್ರಮ್‌ ಆಸ್ಪತ್ರೆಯ ವೈದ್ಯಕೀಯ ಕ್ಯಾನ್ಸರ್‌ ರೋಗಶಾಸ್ತ್ರದ ಹಿರಿಯ ಸಲಹಾ ತಜ್ಞೆ ಮತ್ತು ರಕ್ತ ಕ್ಯಾನ್ಸರ್‌ ರೋಗತಜ್ಞೆ ಡಾ. ನಿತಿ ರೈಜಾದ ಅವರು ಮಾತನಾಡಿ, ವಿಶ್ವ ವ್ಯಾಪಿಯಾಗಿ ನವೆಂಬರ್‌ ತಿಂಗಳನ್ನು ಶ್ವಾಸಕೋಶದ ಕ್ಯಾನ್ಸರ್‌ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಆರಂಭದಲ್ಲಿ ಕ್ಯಾನ್ಸರ್‌ ಲಕ್ಷಣಗಳು ಕಂಡುಬರುವುದಿಲ್ಲವಾದರೂ ಅಸ್ಪಷ್ಟವಾದ ಲಕ್ಷಣಗಳನ್ನು ಮಾತ್ರ ಹೊಂದಿರುತ್ತಾರೆ.

ಆದರೆ, ರೋಗ ಪತ್ತೆಯಾಗುವ ಹೊತ್ತಿಗೆ ಮೀತಿ ಮೀರಿರುತ್ತದೆ. ಈ ರೋಗದ ಸ್ವಭಾವದ ಕಾರಣದಿಂದ ಇತರೆ ಕ್ಯಾನ್ಸರ್‌ಗಳಿಗಿಂತ ಶ್ವಾಸಕೋಶದ ಕ್ಯಾನ್ಸರ್‌ ರೋಗಿಗಳು ತಡವಾಗಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಶೇ.15ರಷ್ಟು ಪ್ರಕರಣಗಳು ಮಾತ್ರ ಗುಣಪಡಿಸಲು ಯೋಗ್ಯವಾಗಿರುತ್ತವೆ ಎಂದರು.

ಕ್ಯಾನ್ಸರ್‌ ಶಸ್ತ್ರಕ್ರಿಯಾ ಸಲಹಾ ತಜ್ಞ ಡಾ.ಸೂರಜ್‌ ಮಂಜುನಾಥ್‌ ಅವರು ಶ್ವಾಸಕೋಶದ ಕ್ಯಾನ್ಸರ್‌ನಲ್ಲಿ ಅತೀ ಹೆಚ್ಚು ಸಾವುಗಳನ್ನು ಕಾಣುತ್ತೇವೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನ ಪ್ರಮುಖ ಕಾರಣ. ಇದರೊಂದಿಗೆ ಪರೋಕ್ಷ ಧೂಮಪಾನ, ಆಸ್‌ಬೆಸ್ಟೊಸ್‌ ಮತ್ತು ರ್ಯಾಡಾನ್‌, ವಿಕಿರಣ ಹಾಗೂ ವಾಯು ಮಾಲಿನ್ಯಗಳಿಗೆ ತೆರೆದುಕೊಂಡಿರುವುದು ಕೂಡ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಜಾಗತಿಕವಾಗಿ ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್‌ಗಳ ಪೈಕಿ ಶೇ.14.5ರಷ್ಟು ಹಾಗೂ ಮಹಿಳೆಯರ ಪೈಕಿ ಶೇ.8.4ರಷ್ಟು ಶ್ವಾಸಕೋಶದ ಕ್ಯಾನ್ಸರ್‌ ಪ್ರಕರಣಗಳಿರುತ್ತವೆ. ಇತೀ¤ಚಿನ ದಿನಗಳಲ್ಲಿ ಧೂಮಪಾನ ವ್ಯಸನ ಹೊಂದಿರುವ ಮಹಿಳೆಯರ ಪ್ರಮಾಣ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣ ಆಗಬೇಕಾಗಿದೆ. ಶ್ವಾಸಕೋಶ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವತ್ತ ವಿಕ್ರಮ್‌ ಆಸ್ಪತ್ರೆ ಮುಂದಾಗಿದೆ ಎಂದು ವಿವರಿಸಿದರು.

ಶ್ವಾಸಕೋಶ ರೋಗ ಸಲಹಾತಜ್ಞ ಮತ್ತು ಎದೆಭಾಗದ ತಜ್ಞ ವೈದ್ಯ ಡಾ.ಕೆ.ಎಸ್‌.ಸತೀಶ್‌, ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ವಿಕ್ರಮ್‌ ಆಸ್ಪತ್ರೆ, ಶ್ವಾಸಕೋಶದ ಕ್ಯಾನ್ಸರ್‌ ತಪಾಸಣೆ ಕಾರ್ಯಕ್ರಮ ಹಾಗೂ ಧೂಮಪಾನ ತ್ಯಜಿಸುವ ಚಿಕಿತ್ಸೆಯನ್ನು ನಡೆಸುತ್ತಿದೆ ಎಂದರು.

ಟಾಪ್ ನ್ಯೂಸ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Ayodhya: 8 ಕಾಲುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

16-flipkart

Flipkart Big Billion Day ಸೆ. 27 ರಿಂದ ಆರಂಭ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.