ಭಾರದ ಹೆಜ್ಜೆಯಿಟ್ಟ ಅಭಿಮಾನಿ ಬಳಗ


Team Udayavani, Nov 26, 2018, 12:28 PM IST

bharada.jpg

ಬೆಂಗಳೂರು: ಬಾನ ಭಾಸ್ಕರ ಉದಯಿಸುವ ಮುನ್ನವೇ ಅಲ್ಲಿ ನೀರವ ಮೌನ ಆವರಿಸಿತ್ತು. ಸೂರ್ಯನ ಹೊಂಗಿರಣ ಸೂಸುವ ಮೊದಲೇ ಪಾರ್ಥಿವ ಶರೀರ ಮನೆ ಬಿಟ್ಟು ಸಾಗಿತ್ತು. ಹೀಗಾಗಿ ಸಾವಿರಾರು ಅಭಿಮಾನಿಗಳಿಗೆ ಆ ನಿವಾಸದ ಮುಂದೆ ಅಂತಿಮ ದರ್ಶನದ ಭಾಗ್ಯ ಸಿಗಲಿಲ್ಲ.

“ಮಂಡ್ಯದ ಗಂಡು’ ಅಂಬರೀಶ್‌ ಅವರ ಜೆ.ಪಿ.ನಗರ ನಿವಾಸದ ಮುಂದೆ ಭಾನುವಾರ ಮುಂಜಾನೆ ನೆರೆದಿದ್ದ ಅಸಂಖ್ಯ ಅಭಿಮಾನಿಗಳು, ನಿರಾಸೆಯಿಂದ ಕಣ್ಣೀರಿಡುತ್ತಲೇ ಕಂಠೀರವ ಕ್ರೀಡಾಂಗಣದತ್ತ ಸಾಗಿದರು. ಅಂಬರೀಶ್‌ ವಿಧಿವಶರಾದ ಸುದ್ದಿ ತಿಳಿದು ಕನಕಪುರ, ಮಂಡ್ಯ, ಮಳವಳ್ಳಿ, ರಾಮನಗರ, ಮೈಸೂರು, ರಾಯಚೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಅಭಿಮಾನಿ ಬಳಗ ಭಾನುವಾರ ಬೆಳಗ್ಗೆ ಜೆ.ಪಿ.ನಗರದ ನಿವಾಸಕ್ಕೆ ದೌಡಾಯಿಸಿತ್ತು.

ಕಟೌಟ್‌ಗಾಗಿ ಸುತ್ತಾಟ: ಕೆಲವು ಆಟೋ ಅಭಿಮಾನಿಗಳು ಅಂಬರೀಶ್‌ ಅವರ ಕಟೌಟ್‌ಗಾಗಿ ಜಯನಗರದ ನಿವಾಸದಲ್ಲಿ ಹುಡುಕಾಟ ನಡೆಸಿದ್ದರು. ಬೆಳಗ್ಗೆ ಮಾರೇನಹಳ್ಳಿ ಸಿಗ್ನಲ್‌ ಸಮೀಪದ ಆದರ್ಶ ಪ್ಯಾಲೆಸ್‌ ಪಕ್ಕದಲ್ಲಿರುವ ಅವರ ನಿವಾಸಕ್ಕೆ ಆಟೋದಲ್ಲಿ ಬಂದ ಅಭಿಮಾನಿಗಳು, ಕಟೌಟ್‌ಗಾಗಿ ಹುಡುಕಾಡಿದರು.

ಬೆಳಗ್ಗೆಯಿಂದಲೇ ಜಯನಗರ, ಜೆಪಿ ನಗರ ತುಂಬೆಲ್ಲಾ ಸುತ್ತಾಟ ನಡೆಸಿದ್ದೀವಿ.ಎಲ್ಲಿಯೂ ಅಣ್ಣನ ಬ್ಯಾನರ್‌ ಇಲ್ಲವೇ ಕಟೌಟ್‌ ಮಾಡಿಕೊಡುವವರು ಬಾಗಿಲು ತೆರೆದಿಲ್ಲ. ಹೀಗಾಗಿ, ಅಣ್ಣನ ಮನೆಯಲ್ಲೇ ಹಳೆಯ ಬ್ಯಾನರ್‌ ಬಂದೆವು. ಆದರೆ ಒಂದೂ ಬ್ಯಾನರ್‌ ಸಿಗಲಿಲ್ಲ ಎಂದು ಹೇಳುತ್ತಲೇ ಆಟೋ ಚಾಲಕ ಗೌಡ ಅತ್ತರು.

ಊರಿಗೆ ತೆರಳಿದ ಕೆಲಸಗಾರರು: ಜೆ.ಪಿ. ನಗರದ ಹಳೆ ಮನೆ ಜಾಗದಲ್ಲಿ ಅಂಬರೀಶ್‌ ಅವರು ಹೊಸ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಕಟ್ಟಡ ನಿರ್ಮಾಣ ಕಾರ್ಯ ಕೂಡ ಅಂತಿಮ ಹಂತಕ್ಕೆ ತಲುಪಿದ್ದು, ಜನವರಿ ಅಥವಾ ಫೆಬ್ರುವರಿಯಲ್ಲಿ ಪೂರ್ಣಗೊಳ್ಳುವ ನೀರಿಕ್ಷೆ ಇತ್ತು.

ಆದರೆ ಅಂಬರೀಶ್‌ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಪ್ರದೇಶ ಮತ್ತು ತಮಿಳುನಾಡು ಮೂಲದ ಮೂಲದ ಕೂಲಿ ಕಾರ್ಮಿಕರು ಭಾನುವಾರ ತಮ್ಮ ಪರಿಕರಗಳೊಂದಿಗೆ ಊರಿಗೆ ತೆರಳಿದರು. ಅಂಬರೀಶ್‌ ಅಣ್ಣನವರ ನಿಧನದ ಹಿನ್ನೆಲೆಯಲ್ಲಿ ಕಟ್ಟಡ ಕೆಲಸವನ್ನು ಸ್ಥಗಿತಗೊಳಿಸಿದ್ದೇವೆ. 15 ದಿನಗಳ ನಂತರ ಮತ್ತೆ ಕೆಲಸ ಆರಂಭಿಸುವುದಾಗಿ ಉತ್ತರ ಪ್ರದೇಶ ಮೂಲದ ಕಾರ್ಮಿಕ ಅನಿಲ್‌ “ಉದಯವಾಣಿ’ಗೆ ತಿಳಿಸಿದರು.

ಈಗ ಯಾರಣ್ಣ ಬೈಯ್ಯೋರು?: ಅಣ್ಣ ನಮ್ಮ ಕಣ್ಣಾಗಿದ್ದ, ಮಂಡ್ಯದ ಕಳಸದಂತ್ತಿದ್ದ. ಅಕ್ಕರೆಯಿಂದ ನಮ್ಮನ್ನ ಬೈಯುತ್ತಿದ್ದ. ಈಗ ಯಾರಣ್ಣ ನಮ್ಮನ್ನು ಬೈಯ್ಯೋರು? ಮಂಡ್ಯದ ಜನರು ಅನಾಥರಾಗಿ ಹೋದೆವು ಎಂದು ಮಳವಳ್ಳಿಯಿಂದ ಬೈಕ್‌ನಲ್ಲಿ ಬಂದಿದ್ದ ಬಸವರಾಜು ಅವರು ಅಂಬರೀಶ್‌ ಅವರ ನಿವಾಸದ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. ಅಣ್ಣನನ್ನು ಆತನ ಹೊಸ ಮನೆ ಮುಂದೆ ನೋಡಬೇಕು ಎಂಬ ಆಸೆಯಿಂದ ಬಂದೆ.

ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಬೈಕ್‌ ಏರಿದೆ.ಆದರೆ ನಮ್ಮಣ್ಣನೇ ಇಲ್ಲಿಲ್ಲ ಎಂದು ಕಣ್ಣೀರಿಡುತ್ತಲೇ ಕಂಠೀರವ ಕ್ರೀಡಾಂಗಣದತ್ತ ಮುಖ ಮಾಡಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕಾರು, ಆಟೋ, ಬೈಕ್‌ನಲ್ಲಿ ಅಭಿಮಾನಿಗಳು ಅವರ ನಿವಾಸದತ್ತ ದೌಡಾಯಿಸುತ್ತಲೇ ಇದ್ದರು. ಕೆಲವರು ಹೊಸ ಮನೆ ಇರಿಸಲಾಗಿದ್ದ ಭಾವಚಿತ್ರಕ್ಕೆ ಕೈ ಮುಗಿದು ಹೊರ ಬಂದರೆ, ಇನ್ನು ಕೆಲವರು ಅಂಬರೀಶ್‌ ಅವರು ಇತ್ತೀಚೆಗೆ ವಾಸವಿದ್ದ ಜಯನಗರ ನಿವಾಸದ ಮುಂದೆ ನಿಂತು ಕಣ್ಣೀರಿಟ್ಟರು.

ಅಂಬರೀಶ್‌ ಅವರು ಗುರುವಾರ ಜೆ.ಪಿ.ನಗರದ ನಿವಾಸಕ್ಕೆ ಭೇಟಿ ನೀಡಿದ್ದರು. ಕಟ್ಟಡದ ಒಳಗೆ ನಡೆಯುತ್ತಿದ ಕೆಲಸವನ್ನು ವೀಕ್ಷಿಸಿ, ಕೆಲಸ ಯಾವಾಗ ಮುಗಿಯುತ್ತೆ ಎಂದು ಕೇಳಿ, ಜನವರಿಯೊಳಗೆ ಮುಗಿಸುವಂತೆ ಇಂಜಿನಿಯರಿಂಗ್‌ ಕಾರ್ಮಿಕರಿಗೆ ತಿಳಿಸಿ ಹೋಗಿದ್ದರು.
-ರಾಹುಲ್‌, ಕಾವಲುಗಾರ

* ದೇವೇಶ್‌ ಸೂರಗುಪ್ಪ

ಟಾಪ್ ನ್ಯೂಸ್

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

PMABHIM ಯೋಜನೆಯಡಿ ದಕ್ಷಿಣ ಕನ್ನಡಕ್ಕೆ 25.11 ಕೋಟಿ ಅನುದಾನ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

BellaryBellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

Bellary; ಕಳ್ಳರೊಂದಿಗೆ ಸೇರಿದ ಪೊಲೀಸನ ಕತೆ; ದರೋಡೆ ಪ್ರಕರಣದಲ್ಲಿ ಪೇದೆ ಸೇರಿ 6 ಮಂದಿ ಬಂಧನ

ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌

Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

16-flipkart

Flipkart Big Billion Day ಸೆ. 27 ರಿಂದ ಆರಂಭ

13-bng

Bengaluru: ನಮ್ಮ ಕ್ಲಿನಿಕ್‌ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ

10-bng

Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್‌ಸರ್ವೀಸ್‌ ಸೆಂಟರ್‌ಗೆ 12 ಸಾವಿರ ದಂಡ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Belagavi; ದರ್ಬಾರ್‌ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್‌!

Harassment of Hindu sentiment is going on: Vijayendra

Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

Shiruru; Missing Kerala Arjuna’s lorry found; Operation of Ishwar Malpe Team

Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್‌ ಮಲ್ಪೆ ತಂಡದ ಕಾರ್ಯಾಚರಣೆ

World Rivers Day: ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.