ಕೆಲಸ-ಕುಟುಂಬಕ್ಕೆ ಇರಲಿ  ಸಮಾನ ಪ್ರಾಶಸ್ತ್ಯ


Team Udayavani, Nov 26, 2018, 1:36 PM IST

26-november-13.gif

ಮದುವೆಯಾದ ಅನಂತರ ಹೆಣ್ಣು ತನ್ನ ಕೆಲಸದ ಜತೆಗೆ ಹೆತ್ತ ತಂದೆ, ತಾಯಿ ಹಾಗೂ ಗಂಡನನ್ನು ನಿಭಾಯಿಸುವುದು ಎಂದರೆ ಅದೊಂದು ನಿಜವಾದ ಚಾಣಾಕ್ಷತನ ಎನ್ನಬಹುದು. ಏಕೆಂದರೆ ಮದುವೆಯಾಗಿ ಜೀವನ ಎಂಬ ನೌಕೆಯಲ್ಲಿ ನಾವಿಕನಾಗಿರುವ ಗಂಡನ ಮಾತನ್ನು ಕೇಳಿಕೊಳ್ಳುವು ಅಥವಾ ಅವನೊಂದಿಗಿನ ಹೊಂದಾಣಿಕೆ ಎಲ್ಲವೂ ಮುಖ್ಯವಾಗಿರುವಾಗ. ಇಷ್ಟು ವರ್ಷ ಹೆತ್ತು, ಹೊತ್ತು, ಬೆಳೆಸಿ, ಸಾಕಿದ ಅಪ್ಪ, ಅಮ್ಮ ಕಷ್ಟವಾಗುತ್ತಾರೆ ಎಂಬ ಮಾತನ್ನು ಹೆಣ್ಣಾದವಳು ಸಹಿಸುವುದಿಲ್ಲ. ಮಾತ್ರವಲ್ಲದೆ ಅವಳು ಅದಕ್ಕೋಸ್ಕರ ತನ್ನ ಗಂಡನೊಂದಿಗೆ ಜಗಳವಾಡುವುದು ಸರಿಯಲ್ಲ. ಹಾಗಾದರೆ ಅದಕ್ಕವಳು ಏನು ಮಾಡಬೇಕು. ಎಲ್ಲ ಮದುವೆಯಾದ, ಅಪ್ಪ ಅಮ್ಮನಿಗೆ ಒಬ್ಬಳೇ ಹೆಣ್ಣು ಮಗಳಿರುವ ಎಲ್ಲರಿಗೂ ಈ ಪ್ರಶ್ನೆ ಕಾಡುತ್ತದೆ.

ಕುಟುಂಬ ಮತ್ತು ಕೆಲಸ
ಹೆಣ್ಣಿಗೆ ತನ್ನ ಗಂಡ, ಹೆತ್ತವರನ್ನು ನೋಡಿಕೊಳ್ಳುವುದರ ಜತೆಗೆ ಅವಳು ಇಂದು ಸ್ವತಂತ್ರಳಾಗಿರುವುದರಿಂದ ತನ್ನ ಕೆಲಸವನ್ನೂ ಮಾಡಬೇಕಾಗುತ್ತದೆ. ಹಾಗಾಗಿ ಈಕೆಗೆ ಗಂಡಸರಿಗಿಂತ ಅಧಿಕ ಮನೋಬಲ ಹಾಗೂ ಮನೆಯವರ ಸಹಕಾರವೂ ಅಗತ್ಯವಾಗಿರುತ್ತದೆ.

ಗಂಡನೊಂದಿಗೆ ಆತ್ಮೀಯತೆ
ಗಂಡನೇ ಹೆಣ್ಣಿಗೆ ಜೀವನದ ಪ್ರಮುಖ ವ್ಯಕ್ತಿ, ಹಾಗೆಯೇ ಗಂಡನಿಗೂ ತನ್ನ ಹೆಂಡತಿ ಕೇವಲ ಹೆಂಡತಿಯಾಗಿರದೆ ಸ್ನೇಹಿತೆ ಎಂಬ ಮನೋಭಾವವನ್ನು ಬೆಳೆಸಿಕೊಂಡು ಅನ್ಯೋನ್ಯತೆ, ಭಾವನೆಗಳ ಅರ್ಥೈಸುವಿಕೆ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದು ಈ ಎಲ್ಲವೂ ಪರಸ್ಪರ ನಡೆದರೆ. ಅವರ ಮಧ್ಯೆ ಯಾವುದೇ ಗೋಡೆ ಎಂಬ ಮಾತುಬಾರದು. ಇಲ್ಲಿ ಗಂಡ ಅಥವಾ ಹೆಣ್ಣನ್ನು ಕೀಳರಿಮೆಯಿಂದ ನೋಡಬಾರದು.

ವಿವಾಹ ಪೂರ್ವ ಮಾತುಕತೆ
ಒಬ್ಬಳೇ ಹೆಣ್ಣು ಮಗಳಾದವಳಿಗೆ ತನ್ನ ಮದುವೆಯಾದ ಅನಂತರ ತನ್ನ ಹೆತ್ತವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆಯಾಗುವುದು ಸಹಜ. ಅದಕ್ಕೆ ವಿವಾಹ ಪೂರ್ವದಲ್ಲೇ ತನ್ನ ಗಂಡನಾಗುವವನಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ ಒಪ್ಪಿದರೆ ಇವರು ಸಂಸಾರ ನಡೆ ಸುವ ಮನೆಗೆ ತನ್ನ ಹೆತ್ತವರನ್ನು ಕರೆಸಿಕೊಂಡು ಅವರನ್ನು ನೋಡಿಕೊಳ್ಳಬಹುದು ಅಥವಾ ಮದುವೆಯಾಗುವ ಮುಂಚಿತವಾಗಿಯೇ ಹೆಣ್ಣು ತನ್ನ ಗಂಡನಾಗುವನಲ್ಲಿ ತನ್ನ ತಂದೆ, ತಾಯಿಯರನ್ನು ನಾನೇ ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುವುದರಿಂದ ಗಂಡನಾದವನು ಹೆಂಡತಿ ಮನೆಯಲ್ಲಿದ್ದು ಜೀವನ ನಡೆಸುವಂತೆ ಮಾತುಕತೆ ನಡೆಸಬಹುದು. ಇದರಿಂದಲೂ ಮುಂದೆ ಯಾವುದೇ ಸಂಸಾರದಲ್ಲಿ ತೊಂದರೆಗಳು ಎದುರಾಗಲು ಸಾಧ್ಯವಿಲ್ಲ.

ಕೆಲಸದ ಒತ್ತಡ
ಮನೆಯ ಸಮಾರಂಭಗಳಿಗೆ ಬಿಡುವು ಮಾಡಿಕೊಂಡು ಅದರಲ್ಲೂ ಭಾಗಿಯಾಗುವುದು ಕೆಲಸಕ್ಕೆ ಹೋಗುವ ಹೆಣ್ಣಿಗೆ ಅನಿವಾರ್ಯವಾಗುತ್ತದೆ. ಅದೇ ರೀತಿ ಕೆಲವೊಮ್ಮೆ ಕೆಲಸಕ್ಕೆ ಒತ್ತು ನೀಡಬೇಕಾದ ಅನಿವಾರ್ಯವು ಇರುತ್ತದೆ. ಮನೆಯಲ್ಲಿನ ತಂದೆ, ತಾಯಿ, ಅತ್ತೆ, ಮಾವ, ಗಂಡ,  ಮಕ್ಕಳಿಗೆ ಸಮಾನ ಪ್ರಾಶಸ್ತ್ಯ ನೀಡುವುದು. ಗಂಡ ಹೆಂಡತಿ ಅರಿತು ಜೀವನವನ್ನು ನಡೆಸಿದರೆ ಸಾರ್ಥಕ ಜೀವನ ನಡೆಸಬಹುದು.

ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.