ಸರ್ಕಾರ ಹಂಪಣ್ಣನವರ ಸಮಾಜ ಸೇವೆ ಪರಿಗಣಿಸಲಿ


Team Udayavani, Nov 26, 2018, 4:04 PM IST

bell-2.jpg

ಬಳ್ಳಾರಿ: ಪತ್ರಿಕಾರಂಗದಲ್ಲಿ ಪತ್ರಕರ್ತರಾಗಿ, ಪತ್ರಿಕೋದ್ಯಮಿಯಾಗಿ ಸೇವೆ ಸಲ್ಲಿಸಿರುವ ಸಿ.ಜಿ.ಹಂಪಣ್ಣನವರಿಗೆ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌, ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕು ಎಂದು ಸಂಡೂರು ವಿರಕ್ತಮಠದ ಪ್ರಭುಸ್ವಾಮಿ ಹೇಳಿದರು.

ನಗರದ ರಾಘವಕಲಾ ಮಂದಿರದಲ್ಲಿ ಹಿರಿಯ ಸಾಹಿತಿ ಸಿ.ಜಿ.ಹಂಪಣ್ಣ ಅವರ 80ನೇ ಜನ್ಮದಿನ ಕಾರ್ಯಕ್ರಮ ಮತ್ತು ಗಡಿನಾಡ ಕನ್ನಡಿಗ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಸಿ.ಜಿ.ಹಂಪಣ್ಣನವರು ಕಳೆದ 6 ದಶಕಗಳಿಂದ ಪತ್ರಕರ್ತರಾಗಿ, ಚಲನಚಿತ್ರ ನಿರ್ಮಾಪಕರಾಗಿ, ಚಲನಚಿತ್ರ ವಿತರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಮತ್ತು ಆಂಧ್ರಪ್ರದೇಶದ ತೆಲುಗು ಭಾಷಾ ಬಾಂಧವ್ಯವನ್ನು ಬೆಸೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿದ್ದ ಕೆಲ ವರ್ಷಗಳ ಹಿಂದೆ ಆಂಧ್ರದ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ, ಹಂಪಣ್ಣರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ನಮ್ಮನ್ನು ಬೇರೆ ರಾಜ್ಯಗಳವರು ಗುರುತಿಸಿದರೂ, ಜಿಲ್ಲೆಯಲ್ಲೇ ಇರುವ ವಿವಿಗಳು ಗುರುತಿಸಿಲ್ಲ. ಈ ನಿಟ್ಟಿನಲ್ಲಿ ಬಳ್ಳಾರಿಯ ವಿಎಸ್‌ ಕೆ ವಿವಿಯು ಸಿ.ಜಿ.ಹಂಪಣ್ಣನವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಬೇಕಾಗಿದೆ. ಜತೆಗೆ ರಾಜ್ಯ ಸರ್ಕಾರವೂ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಬೇಕಾಗಿದೆ ಎಂದರು.
 
ಪ್ರತಿಯೊಬ್ಬರಿಗೂ ಬಾಲ್ಯ, ಯೌವನ ಮತ್ತು ಸಂಧ್ಯಾಕಾಲದ ಜೀವನವಿರುತ್ತದೆ. ಇವರು ತಮ್ಮ ಸಂಧ್ಯಾಕಾಲದಲ್ಲೂ ಎಲ್ಲರಿಗೂ ಮಾದರಿಯಾಗುವ ಜೀವನ ನಡೆಸುತ್ತಿದ್ದಾರೆ. ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ. 

ಉತ್ತರ ಕರ್ನಾಟಕ ರಾಜ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಹೊರಟಿರುವವರಿಗೆ ಜಿಲ್ಲೆಯ ಜನರು ಏಕೀಕರಣದ ಸಂದರ್ಭದಲ್ಲೆ ಉತ್ತರ ನೀಡಿದ್ದಾರೆ. ಅಖೀಲ ಕರ್ನಾಟಕಕ್ಕೆ ಬಳ್ಳಾರಿ ಮಾದರಿ ಜಿಲ್ಲೆಯಾಗಿದೆ. ಗಡಿಭಾಗದಲ್ಲಿರುವ ಸೌಹಾರ್ದತೆಯನ್ನು ಕಾಪಾಡಬೇಕಿದೆ. ರಾಜ್ಯದ ಗಡಿಯಲ್ಲಿರುವ ಜನರು ಎರಡು ಭಾಷೆ ಮತ್ತು ಎರಡು ಸಂಸ್ಕೃತಿಯನ್ನು ಅರಿತಿದ್ದಾರೆ. ಗಡಿಭಾಗದಲ್ಲಿ ಜಿಲ್ಲೆ ರಾಜ್ಯದ ಗಮನ ಸೆಳೆದಿದೆ ಎಂದರು.

ಗಡಿನಾಡ ಕನ್ನಡಿಗ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಮಾತನಾಡಿದ ರಂಗಭೂಮಿ ಹಿರಿಯ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣ , ಜಿಲ್ಲೆಯ ಸಾಹಿತಿಗಳು, ಕಲಾವಿದರು ಯಾರೂ ಪ್ರಚಾರದ ಬೆನ್ನತ್ತಿ ಹೋಗುವವರಲ್ಲ. ಪ್ರಚಾರವೇ ಅವರ ಬೆನ್ನತ್ತಿ ಬರುತ್ತದೆ ಎಂದರು.

ಚೆಳ್ಳಗುರ್ಕಿಯ ವೈದ್ಯ ಸಿ.ಎರ್ರೆಪ್ಪ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಸುಭದ್ರಮ್ಮ ಮನ್ಸೂರು, ಜನಪದ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಟಿ.ಎಚ್‌. ಎಂ.ಬಸವರಾಜ್‌, ಇತಿಹಾಸ ಸಂಶೋಧಕ ವೈ. ಹನುಮಂತರೆಡ್ಡಿ, ಸಾಹಿತಿ ರಜನೀಶ್‌ ಕುಲಕರ್ಣಿ, ವನಮಾಲಾ ಕುಲಕರ್ಣಿ, ಮುಖ್ಯಶಿಕ್ಷಕಿ ವೈ. ಆರ್‌.ಪಲ್ಲವಿ, ಸಿ.ಜಿ.ಹಂಪಣ್ಣ ಅಭಿನಂದನಾ ಸಮಿತಿ ಗೌರವಾಧ್ಯಕ್ಷರಾದ ಕೇಣಿ ಜಂಬುನಾಥ್‌, ಕೆ.ಚನ್ನಪ್ಪ, ಆನೆಗಂಗಣ್ಣ, ನಿಷ್ಠಿರುದ್ರಪ್ಪ, ದರೂರು ಪುತುಷೋತ್ತಮ ಗೌಡ, ರಮೇಶ್‌ ಗೌಡ ಪಾಟೀಲ…, ಗಂಗಾಧರ್‌ ಪತ್ತಾರ್‌,
ಬಂಗ್ಲೆ ಮಲ್ಲಿಕಾರ್ಜುನ, ವಿ.ಜಗನ್‌ಮೋಹನ್‌ ರೆಡ್ಡಿ, ಕಾಳಪ್ಪ ಪತ್ತಾರ್‌, ಕೆ.ಬಿ.ಸಿದ್ದಲಿಂಗಪ್ಪ ಇನ್ನಿತರರಿದ್ದರು.

ಟಾಪ್ ನ್ಯೂಸ್

JPC-Pal-oppostion

Waqf Bill: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ; ವಿಪಕ್ಷದ ಎಲ್ಲಾ 10 ಸಂಸದರ ಅಮಾನತು

1-love

Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ

1-oll

ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ

BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್

BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್

Government has taken the microfinance harassment case seriously: Jarakiholi

ಮೈಕ್ರೋ ಫೈನಾನ್ಸ್‌ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ

1-sudha

Maha Kumbh; ಸ್ವಚ್ಛ, ಸುರಕ್ಷಿತ, ದೈವಿಕ, ಭವ್ಯ ಮತ್ತು ಡಿಜಿಟಲ್: ಸುಧಾ ಮೂರ್ತಿ

Recipe: ಬಟರ್‌ ಗಾರ್ಲಿಕ್‌ ಮಶ್ರೂಮ್‌ ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ… ರುಚಿ ಅದ್ಭುತ…

Recipe: ಬಟರ್‌ ಗಾರ್ಲಿಕ್‌ ಮಶ್ರೂಮ್‌ ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ… ರುಚಿ ಅದ್ಭುತ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: Congress is calling with respect, but…: B. Sriramulu

Bellary: ಕಾಂಗ್ರೆಸ್‌ ನವರು ಗೌರವದಿಂದ ಕರೆಯುತ್ತಿದ್ದಾರೆ, ಆದರೆ…: ರಾಮುಲು ಹೇಳಿದ್ದೇನು?

Credibility is very important in politics…: Sriramulu

Bellary: ರಾಜಕಾರಣದಲ್ಲಿ ವಿಶ್ವಾಸಾರ್ಹತೆ ಬಹಳ ಮುಖ್ಯ…: ಶ್ರೀರಾಮುಲು

Sriramulu

BJP Politics: ನಿರುದ್ಯೋಗಿಯಾಗಿದ್ದೇನೆ, ರಾಜ್ಯಾಧ್ಯಕ್ಷ ಕೆಲಸ ಕೊಡಿ: ಶ್ರೀರಾಮುಲು ಬೇಡಿಕೆ!

1-kamp

Kampli; ಪುರಸಭೆ ಆಡಳಿತ ಕಾಂಗ್ರೆಸ್ ತೆಕ್ಕೆಗೆ: ಬಹುಮತವಿದ್ದರೂ ಬಿಜೆಪಿಗೆ ಮುಖಭಂಗ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

1-aaane

Bandipur ಹೆದ್ದಾರಿಯಲ್ಲಿ ಚೆಲ್ಲಿದ ಅಕ್ಕಿ ಮೆಲ್ಲುತ್ತ ನಿಂತ ಕಾಡಾನೆಗಳು: ಟ್ರಾಫಿಕ್ ಜಾಮ್

JPC-Pal-oppostion

Waqf Bill: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ; ವಿಪಕ್ಷದ ಎಲ್ಲಾ 10 ಸಂಸದರ ಅಮಾನತು

1-love

Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ

1-po-aa

Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ

1-oll

ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.