“ಎ’ ತಂಡಗಳ 2ನೇ ಟೆಸ್ಟ್ ನೀರಸ ಡ್ರಾ
Team Udayavani, Nov 27, 2018, 6:45 AM IST
ಹ್ಯಾಮಿಲ್ಟನ್: ಭಾರತ “ಎ’-ನ್ಯೂಜಿಲ್ಯಾಂಡ್ “ಎ’ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮಳೆಯ ಹೊಡೆತಕ್ಕೆ ಸಿಲುಕಿ ನೀರಸ ಡ್ರಾದಲ್ಲಿ ಅಂತ್ಯ ಕಂಡಿದೆ.
ಮೊದಲ ಟೆಸ್ಟ್ ಪಂದ್ಯ ಕೂಡ ಡ್ರಾದಲ್ಲೇ ಅಂತ್ಯ ಕಂಡಿತ್ತು. ನ್ಯೂಜಿಲ್ಯಾಂಡ್ “ಎ’ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟಿಗೆ 303 ರನ್ ಗಳಿಸಿ ಡಿಕ್ಲೇರ್ ಮಾಡಿದರೆ, ಭಾರತ “ಎ’ 2 ವಿಕೆಟಿಗೆ 159 ರನ್ ಮಾಡಿದ ಹಂತಕ್ಕೆ ಪಂದ್ಯ ಮುಗಿಯಿತು. ಮಳೆಯಿಂದ ದ್ವಿತೀಯ ದಿನದಾಟ ಸಂಪೂರ್ಣ ರದ್ದುಗೊಂಡಿತ್ತು.
3ನೇ ದಿನ ಹಾಗೂ ಅಂತಿಮ ದಿನವಾದ ಸೋಮವಾರ ಕೂಡ ಪಂದ್ಯಕ್ಕೆ ಮಳೆ ಕಾಡಿತು. ಪಂದ್ಯ ನಿಂತಾಗ ಆರ್. ಸಮರ್ಥ್ 50 ಮತ್ತು ನಾಯಕ ಕರುಣ್ ನಾಯರ್ 8 ರನ್ ಮಾಡಿ ಔಟಾಗದೆ ಉಳಿದಿದ್ದರು. 47 ರನ್ ಗಳಿಸಿದ ಅಭಿಮನ್ಯು ಈಶ್ವರನ್ ಮತ್ತು 42 ರನ್ ಹೊಡೆದ ಮಾಯಾಂಕ್ ಅಗರ್ವಾಲ್ ಔಟಾಗಿದ್ದರು.
ಆತಿಥೇಯರ ಇನ್ನಿಂಗ್ಸ್ನಲ್ಲಿ ನಾಯಕನೂ ಆಗಿರುವ ಓಪನರ್ ವಿಲ್ ಯಂಗ್ ಶತಕ ಬಾರಿಸಿ ಮಿಂಚಿದ್ದರು (123). ಮೊಹಮ್ಮದ್ ಸಿರಾಜ್ (59ಕ್ಕೆ 4) ಮತ್ತು ರಜನೀಶ್ ಗುರ್ಬಾನಿ (60ಕ್ಕೆ 2) ಭಾರತದ ಯಶಸ್ವಿ ಬೌಲರ್ಗಳಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.