ಜಾತ್ರೆಗೆ ಹೋಗೋಣ ಪ್ಲೀಸ್, ವಾಪಸ್ ಬಾ…
Team Udayavani, Nov 27, 2018, 6:00 AM IST
ಶಿರಸಿಯಲ್ಲೊಂದು ಜನರಲ್ ಸ್ಟೋರ್ ಇಟ್ಕೊಂಡು, ಆಗಾಗ ಕಾಲೇಜು ಹುಡುಗಿಯರ ಕಡೆ ಕಣ್ಣಾಯಿಸಿದ್ದೆ ಬಿಟ್ರೆ, ನನ್ ಮದ್ವೆ ಜವಾಬ್ದಾರಿ ಅಪ್ಪ-ಆಯಿಗೇ ಬಿಟ್ಟಿದ್ದೆ. ಅವ್ರು ಸಂಬಂಧ ಹುಡ್ಕಿ ಸಾಕಾದಾಗ ಒಂದ್ ಕಡೆಯಿಂದ ನಿನ್ ಜಾತಕ ಬಂದಿತ್ತು.
“ಹೇಗಿದ್ದೀಯಾ ಚಂದು?’ ಹೆಸರಿಗೆ ತಕ್ಕಂತೆ ಮುದ್ದು ಮುಖದ ಚೆಲುವೆ. ಈಗ ಫೇಸ್ಬುಕ್‌ಗೆ ಬೇರೆ ಎಂಟ್ರಿ ಕೊಟ್ಟಿದ್ದೀಯಾ? ಆದ್ರೆ ನನ್ನ ಮಾತ್ರ ಯಾಕೆ ಬ್ಲಾಕ್ ಮಾಡಿದ್ದೆ? ಹಾಗೂ ಹೀಗೂ ನಿನ್ ಈ ಮೇಲ… ಐಡಿ ಸಂಪಾದಿಸಿ ಮತ್ತೂಮ್ಮೆ ಪ್ರೇಮ ನಿವೇದನೆ ಮಾಡ್ತಾ ಇದೀನಿ. ಹಳೆಯದನ್ನೆಲ್ಲ ನೆನಪಿಸ್ತಾ ಇದೀನಿ. ಓದಿ, ಹೇಗನ್ನಿಸುತ್ತೋ ಹಾಗೆ ಮಾಡು.
ಅದಿರ್ಲಿ, ಜನವರಿಗೆ ನಿಶ್ಚಿತಾರ್ಥ ಆಗಿ, ಮೇ ತಿಂಗಳಲ್ಲಿ ಮದ್ವೆ ಹೇಳಿ ಮಾತು ಆತು. ಯಾರನ್ನೂ ಒಪ್ಪದ ನೀನು ನನಗೆ “ಓಕೆ’ ಅಂದಿದ್ಕೆ ನಂಗಂತೂ ಸ್ವರ್ಗಕ್ಕೆ ಮೂರೇ ಗೇಣು. ಆದ್ರೂ ನಿನ್ ಮುಖದಲ್ಲಿ ಸಣ್ಣ ಅಸಹನೆ ಎದ್ದು ಕಂಡಂಗಾತಲ್ಲ? ಎಂಗೇಮೆಂಟ್ ಮುಗಿಸಿದ ಮರುದಿನಾನೇ, ಸಿಗದೆ ಸತಾಯಿಸುವ ಬಿಎಸ್ಸೆನ್ನೆಲ್ ಸಿಗ್ನಲ್ ಹಿಡಿದು ನೀನೇ ನನಗೆ ಫೋನಾಯಿಸಿದ್ದೆ. ನಮ್ಮೂರ ಜಾತ್ರೆಗ್ ಬತ್ತೆ ಹೇಳಿದಾಗ ಸಖತ್ ಖುಷಿ ಆತು.
ಯಲ್ಲಾಪುರದ ದೇವಿ ಗದ್ದುಗೆಯಿಂದ ವೈಟಿಎಸ್‌ಎಸ್ ಮೈದಾನದವರೆಗೂ ಕೈಗೆ ಕೈ ಮಿಲಾಯಿಸಿ ನಡೆದದ್ದು, ಬಣ್ಣ ಬಣ್ಣದ ಝುಮುಕಿ, ಬಳೆ, ಸರಕ್ಕೆ ನೀ ಮಾರುಹೋದರೆ, ಅವನ್ನೆಲ್ಲ ಕೊಂಡ ನಿನ್ನ ನೋಡಿ ನಾ ಯಾಮಾರಿದೆ. ಸಂಜೆಯ ಹೊತ್ತಿಗೆ ತೊಟ್ಟಿಲು, ರೈಲು, ಬೋಟು ಎಲ್ಲಾ ಮುಗಿಸಿ ನೀ ಕುಮಟಾ ಬಸ್ ಹತ್ತಿ ಹೊರಟರೆ, ನನ್ನ ಪೆದ್ದು ಮನ ನಿನ್ನನ್ನೇ ಹಿಂಬಾಲಿಸಿತ್ತು.
ಶಿರಸಿಯಲ್ಲೊಂದು ಜನರಲ್ ಸ್ಟೋರ್ ಇಟ್ಕೊಂಡು, ಆಗಾಗ ಕಾಲೇಜು ಹುಡುಗಿಯರ ಕಡೆ ಕಣ್ಣಾಯಿಸಿದ್ದೆ ಬಿಟ್ರೆ, ನನ್ ಮದ್ವೆ ಜವಾಬ್ದಾರಿ ಅಪ್ಪ-ಆಯಿಗೇ ಬಿಟ್ಟಿದ್ದೆ. ಅವ್ರು ಸಂಬಂಧ ಹುಡ್ಕಿ ಸಾಕಾದಾಗ ಒಂದ್ ಕಡೆಯಿಂದ ನಿನ್ ಜಾತಕ ಬಂದಿತ್ತು. ಶಿರಸಿಲಿ ನನ್ ಸ್ವಂತ ಮನೆ ಇದೆ ಅಂತ ಅದ್ಯಾರು ನಿನಗೆ ಹೇಳಿದರೋ? ಒಟ್ನಲ್ಲಿ ನನ್ನ ಒಪ್ಪಿಕೊಂಡಿದ್ದೆ. ಲ್ಯಾಂಡ್‌ಲೈನ್‌ಗೆ ಮಿಸ್‌ಕಾಲ… ಕೊಟ್ಟರೆ, ಸಿಗ್ನಲ್ ಹುಡುಕಿಕೊಂಡು ಗುಡ್ಡದ ತುದಿಗ್ ಬರ್ತಿದ್ದೆ ನೀನು, ಮಾತನಾಡೋದಿಕ್ಕೆ.
ಅಂತೂ ಇಂತೂ ಮದ್ವೆ ಎಲ್ಲಾ ಮುಗೀತು. ಒಂದು ತಿಂಗಳ ಕಾಲ ಎಲ್ಲಾ ಸುಂದರ. ಒಂದಿನ ನೀನು, “ಹೇಗೂ ನಂಗೆ ಡಿಗ್ರಿ ಆಗಿದೆ. ಎಲ್ಲಾದ್ರೂ ಕೆಲಸಕ್ಕೆ ಸೇರಾ?’ ಅಂದಾಗ ನಾನು, “ಬೇಡ ಚಂದನಾ, ನೀ ಮನೇಲೆ ಏನಾದ್ರು ಮಾಡು. ಟ್ಯೂಷನ್ ತಕ, ಹೊಲ್ಗೆ ಮಾಡು’ ಅಂದಿದ್ದೆ. ಅಷ್ಟಕ್ಕೇ ನೀನು, ಸಿಟ್ಟಿನಿಂದ ತವರಿಗೆ ಹೊರಟುಬಿಟ್ಟೆ.
ಮದುವೆಯ ದಲ್ಲಾಳಿ ನಿಂಗೇನ್ ಹೇಳಿದ್ದರೋ, ಸ್ವಂತ ಮನೆ, ಅಂಗಡಿ ಮಾಲೀಕ ಎಂದು ನಂಬಿ ಮದುವೆಯಾಗಿದ್ದೆ. ಆದ್ರೆ, ನಿನ್ನ ಗಂಡನದು ಬಿಸೊಡ್ ಬಳಿ ಇರುವ ಎರಡೆಕರೆ ಅಡಿಕೆ ತೋಟ, ಒಂದ್ ಎಕರೆ ಮಡೆ ತೋಟ ಎಂದು ತಿಳಿದು ದಂಗಾಗಿದ್ದೆ. ಸದ್ಯದಲ್ಲೇ ಒಂದು ಬೊಲೆರೋ ಕಾರ್ ತೆಗೆದುಕೊಳ್ಳಬೇಕೆಂಬ ನಿನ್ನಾಸೆ ಕಮರಿತ್ತು. ಮದುವೆಗೆ ಮಾಡಿದ ನನ್ನ ಕೈ ಸಾಲವೇ ಇನ್ನೂ ತೀರಿಸಲು ಆಗಿರಲಿಲ್ಲ.
ಎಲ್ಲ ಸತ್ಯ ಹೇಳಿ ಹೇಗಾದರೂ ಸರಿ ನಮ್ಮೂರಿಗೆ ಕರೆದೊಯ್ಯುವೆ, ಈ ಪ್ರೀತಿಗೆ ಎಲ್ಲಾ ಬದಲಾಯಿಸುವ ಶಕ್ತಿ ಇದೆ ಅಂದುಕೊಂಡದ್ದು ಸುಳ್ಳಾಗಿತ್ತು. ಗದ್ದೆ ಬಯಲೆಲ್ಲ ಹಸಿರಾಗಿಸಲು ತಮ್ಮ ಹರೆಯವನ್ನೇ ತೊರೆದ ಅಪ್ಪ ಆಯಿಯನ್ನು ಈ ಇಳಿವಯಸ್ಸಿನಲ್ಲಿ ಬಿಟ್ಟು ಬಂದು, ಆ ಪೇಟೆಯಲ್ಲಿ ಏನು ಮಾಡಲಿ ಹೇಳು? ಸ್ವಲ್ಪ ಹೊಂದಿಕೊಂಡು ಹೋದರೆ ಸಾಕಿತ್ತು ಚಂದು. ಇನ್ನೆರಡು ಮೂರು ವರ್ಷಗಳ ನಂತರ ಸ್ವಿಫ್ಟ್ ಡಿಸೈರ್ ಝಡ್‌ಡಿಐನೇ ಕೊಡಿಸ್ತಿದ್ದೆ.
ಧಿಕ್ಕರಿಸಿ ಹೊರಟವಳ ಮುಂದೆ ದುಃಖೀಸಬಾರದು ಅಂದ್ಕೊಡೆ. ಪ್ರೀತಿಯ ಮುಂದೆ ಕಣ್ಣ ಹನಿ ಜಾರಿತ್ತು. ನಿನಗೆ ಬೇಕಿದ್ದುದು ಹಳ್ಳಿಯ ಹಸಿರಲ್ಲ, ನಗರದ ಬೆಳಕು ಎಂದು ಗೊತ್ತಾಗಿದೆ. “ಈ ವರ್ಷ ಮಳೆಗಾಲದಂತೆ ಚಳಿನೂ ಜಾಸ್ತಿ ಮಾಣಿ. ಚಂದನಾ ನಿನ್ ಬಿಟ್ಟು ಹೋಯಿ 2 ವರ್ಷಾತು. ಇನ್ನೆಷ್ಟು ದಿನ ಹಿಂಗೇ ಇರಿ¤? ಮತ್ತೂಂದು ಹುಡ್ಗಿ ಹುಡುಕುವ’ ಎಂದು ಖಡಕ್ಕಾಗಿ ಹೇಳಿದ್ದಾಳೆ ಆಯಿ. ನಂಗೆ ನಿನ್ನ ಮರೆಯೋಕೆ ಆತಿಲ್ಲ ಚಂದೂ, ಪ್ಲೀಸ್ ವಾಪಸ್ ಬಾ…
ಅಂಜನ್ ಗಾಂವ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ
Bantwal: ಕಂಬಳದ ತೆರೆಮರೆ ಹೀರೊಗಳ ದಾಖಲೀಕರಣ
Yellapura: ಬಸ್- ಬೈಕ್ ಡಿಕ್ಕಿ; ಟಯರ್ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.