“ಕಿಕಿ’ ಬಳಿಕ “ನಿಲ್ಲ್ ನಿಲ್ಲ್’ ಕ್ರೇಜ್
Team Udayavani, Nov 27, 2018, 6:00 AM IST
ತಿರುವನಂತಪುರ: ಇದೇ ವರ್ಷದ ಮಧ್ಯ ಭಾಗದಲ್ಲಿ ಜಗತ್ತಿನಾದ್ಯಂತ “ಕಿ ಕಿ ಚಾಲೆಂಜ್’ ವೈರಲ್ ಆಗಿದ್ದು ಎಲ್ಲರಿಗೂ ಈಗ ಮರೆತ ವಿಚಾರ. ಅದರ ಗುಂಗು ಮಾಸಿ ಹೋಗಿ ಕೆಲವು ತಿಂಗಳುಗಳು ಕಳೆಯುವ ಹೊತ್ತಿಗೆ ಕೇರಳ ದಲ್ಲಿ ಕೆಲ ದಿನಗಳಿಂದ “ನಿಲ್ಲ್ ನಿಲ್ಲ್’ (ನಿಲ್ಲು, ನಿಲ್ಲು) ಎಂಬ ಹೊಸತೊಂದು ಚಾಲೆಂಜ್ ಶುರುವಾಗಿದೆ. ಇದು ಕಿ ಕಿ ಗಿಂತಲೂ ಅಪಾಯಕಾರಿಯಾಗಿದ್ದು, ಯುವಕ ರಿಗೆ ಪೊಲೀಸರು ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ವ್ಯತ್ಯಾಸವೇನು?: ಚಲಿಸುತ್ತಿರುವ ವಾಹನದಿಂದ ಕೆಳಗಿಳಿದು ವಾಹನದ ಜತೆಗೇ ನೃತ್ಯ ಮಾಡುತ್ತಾ ಹೋಗಿ ಆನಂತರ ಪುನಃ ವಾಹನವನ್ನೇರಿ ಮುಂದೆ ಹೋಗುವುದು “ಕಿ ಕಿ’ ಚಾಲೆಂಜ್ನ ವಿಶೇಷತೆಯಾಗಿತ್ತು. ಈಗ ಶುರುವಾಗಿರುವ “ನಿಲ್ಲ್ ನಿಲ್ಲ್’ ಪ್ರಕಾರ, ಈ ಸವಾಲನ್ನು ಸ್ವೀಕರಿಸಿದವರು ವೇಗವಾಗಿ ಸಂಚರಿಸುತ್ತಿರುವ ಯಾವುದಾದರೂ ವಾಹನದ ಮುಂದೆ ಏಕಾಏಕಿ ಜಿಗಿದು, ಅದು ನಿಂತ ಕೂಡಲೇ ನೃತ್ಯಗೈಯ್ಯುವುದು.
ಯಾರಿದರ ರೂವಾರಿ?: ಈ ಸವಾಲನ್ನು ಅಂತ ರ್ಜಾಲದಲ್ಲಿ ಮೊದಲು ತೇಲಿಬಿಟ್ಟಿದ್ದು “ಟಿಕ್ ಟಾಕ್’ ಎಂಬ ವಿಡಿಯೋ ಪ್ರಸರಣ ಖಾಸಗಿ ಸಂಸ್ಥೆ. ಆನಂತರ ಇದು ಫೇಸ್ಬುಕ್, ಟ್ವಿಟರ್, ವಾಟ್ಸ್ಆ್ಯಪ್ಗ್ಳಲ್ಲಿ ಜನಪ್ರಿಯವಾಯಿತು. ಆರಂಭದಲ್ಲಿ, ಗೆಳೆಯರೇ ಸೇರಿ ಇಂಥ ವಿಡಿಯೋಗಳನ್ನು ಮಾಡಿ ಹರಿಯ ಬಿಡುತ್ತಿದ್ದರು. ಆದರೆ, ಈಗ ಸವಾಲು ಸ್ವೀಕರಿ ಸು ವವರ ಸಂಖ್ಯೆ ಹೆಚ್ಚುತ್ತಿದ್ದು, ದಾರಿಯಲ್ಲಿ ಸಂಚರಿಸುವ ವಾಹನಗಳ ಮುಂದೆ ಏಕಾಏಕಿ ನೃತ್ಯ ಮಾಡುವುದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ.
ಪೊಲೀಸರ ಎಚ್ಚರಿಕೆ: ಯುವ ಜನರ ಈ ಹೊಸ ಅಮಲಿನ ಬಗ್ಗೆ ಕೆಂಗಣ್ಣು ಬೀರಿರುವ ಕೇರಳ ಪೊಲೀಸ್, ಈ ಚಾಲೆಂಜ್ ಹೆಸರಲ್ಲಿ ಅಪಾಯಕ್ಕೆ ಎಡೆ ಮಾಡುವವರು ಹಾಗೂ ಟ್ರಾಫಿಕ್ ಜಾಮ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.