ಕಲಾವಿದರಿಗೆ ಸೂರು ಕಲ್ಪಿಸುವ ತವಕವಿತ್ತು
Team Udayavani, Nov 27, 2018, 11:39 AM IST
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಕಲಾವಿದರು ಹಾಗೂ ಕಾರ್ಮಿಕರಿಗೆ ಸೂರು ಕಲ್ಪಿಸಿಕೊಡಬೇಕೆಂಬ ಮಹದಾಸೆ ಅಂಬರೀಶ್ ಅವರಿಗಿತ್ತು ಎಂದು ತೆಲುಗು ನಟ ಸುಮನ್ ಸ್ಮರಿಸಿದರು.
ಸೋಮವಾರ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಬಂದಿದ್ದ ಸುಮನ್, ಅಂಬರೀಶ್ ಅವರೊಂದಿಗಿನ ಸಂಬಂಧವನ್ನು ಸ್ಮರಿಸಿದರು. ಪ್ರತಿವರ್ಷ 80ರ ದಶಕದ ಕಲಾವಿದರ ಸಮ್ಮಿಲನ ಕಾರ್ಯಕ್ರಮ ನಡೆದಾಗ ಅವರು ಭಾಗವಹಿಸುತ್ತಿದ್ದರು. ಎಲ್ಲರೂ ಹರಟುತ್ತಿದ್ದೆವು. ಆ ವೇಳೆ ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ಕಾರ್ಮಿಕರಿಗೆ ಸೂರು ಕಲ್ಪಿಸಬೇಕು ಎಂದು ಅಂಬರೀಶ್ ಹೇಳುತ್ತಿದ್ದರು ಎಂದು ಸುಮನ್ ತಿಳಿಸಿದರು.
ಅತ್ಯಂತ ಉತ್ಸಾಹಿಯಾಗಿದ್ದ ಅಂಬಿ ಅವರು ಎಲ್ಲರೊಂದಿಗೂ ಸ್ನೇಹದಿಂದ ಬೆರೆಯುತ್ತಿದ್ದರು. ಬೆಂಗಳೂರಿಗೆ ಬಂದಾಗ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ಆದರೆ ನವೆಂಬರ್ 6 ರಂದು ಚೆನ್ನೈನಲ್ಲಿ ನಡೆದಂತಹ ಸಮ್ಮಿಲನ ಕಾರ್ಯಕ್ರಮಕ್ಕೆ ಅವರು ಗೈರಾಗಿದ್ದರು. ಅವರು ನಿಧನರಾದ ಸುದ್ದಿ ತಿಳಿದಾಗ ಮನಸ್ಸಿಗೆ ತೀವ್ರ ನೋವುಂಟಾಯಿತು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.