ಭಕ್ತಿಯಲ್ಲಿ ಶಕ್ತಿ ತೋರಿದ ಕನಕದಾಸರು
Team Udayavani, Nov 27, 2018, 11:41 AM IST
ಶಹಾಬಾದ: ಕೃಷ್ಣನನ್ನೇ ತನ್ನತ್ತ ತಿರುಗಿಸುವ ಮೂಲಕ ಭಕ್ತಿಯಲ್ಲಿ ಎಷ್ಟೊಂದು ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟವರು ಕನಕದಾಸರು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಮಲ್ಕಣ್ಣ ಮುದ್ದಾ ಹೇಳಿದರು. ನಗರದ ಕನ್ನಡ ಭವನದಲ್ಲಿ ಕಸಾಪದಿಂದ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರೂ ದೇವರ ದರ್ಶನಕ್ಕಾಗಿ ದೇಶದ ಎಲ್ಲ ತೀರ್ಥ ಕ್ಷೇತ್ರಗಳಿಗೆ ಹೋಗುತ್ತಾರೆ. ಆದರೆ ದೇವರನ್ನೇ ತನ್ನ ಭಕ್ತಿಯ ಶಕ್ತಿಯಿಂದ ತನ್ನತ್ತ ಸೆಳೆದವರು ಕನಕದಾಸರು. ಸಮಾಜದಲ್ಲಿರುವ ಮೂಢನಂಬಿಕೆ ತೊಲಗಿಸಲು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು. ದಾಸ ಸಾಹಿತ್ಯ ಮೂಲಕ ಸಮಾಜದ ಓರೆ ಕೋರೆ ತಿದ್ದುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ ಮಹಾನ್ ಚಿಂತಕ ಕನಕದಾಸರಾಗಿದ್ದರು ಎಂದು ಹೇಳಿದರು.
ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಕನಕದಾಸರು ಹಾಗೂ ಪುರಂದರ ದಾಸರಂತಹ ವೈಚಾರಕ ಸಂತರಿಂದಾಗಿ ಸಮಾಜದಲ್ಲಿದ್ದ ಮೇಲು-ಕೀಳು ಮತ್ತು ಜಾತಿ- ಮತಗಳಂಥ ಭಾವನೆಗಳು ಬದಿಗೆ ಸರಿದವು.
ದೇವಸ್ತುತಿಯೇ ಮುಖ್ಯ ಎನಿಸಿದ ಭಕ್ತಿ ಪರಂಪರೆ ಕಾಲದಲ್ಲಿ ಕನಕದಾಸರು ತಮ್ಮ ದಾಸಸಾಹಿತ್ಯದ ಮೂಲಕ ವೈಚಾರಿಕ ಮತ್ತು ಪ್ರತಿಭಟಿಸುತ್ತ ಜೀವನ ಸಾಗಿಸಿದ್ದರು ಎಂದು ಹೇಳಿದರು. ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಕರ್, ಧನವಂತ ಮುದಿಗೌಡ, ಅಶೋಕ ಮೊಸಲಗಿ, ಬಂಡಪ್ಪ ಪೂಜಾರಿ, ರಾಯಣ್ಣ ಪೂಜಾರಿ, ಶಾಂತಪ್ಪ ಹಡಪದ, ಸುರೇಶ ಪೂಜಾರಿ, ರಮೇಶ ಜೋಗದನಕರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.