ಕರವೇಯಿಂದ ನೆರವು ನಿಧಿ ಸಂಗ್ರಹ


Team Udayavani, Nov 27, 2018, 12:56 PM IST

vij-4.jpg

ತಾಳಿಕೋಟೆ: ಮಗುವಿನ ಲೀವರ್‌ ನಲ್ಲಿ ಕಾಣಸಿಕೊಂಡ ದೋಷದಿಂದ ಅಘಾತಗೊಂಡು ಹಣ ಸಂಗ್ರಹಕ್ಕಾಗಿ ಅಲೆದಾಡುತ್ತಿರುವ ಕುಟುಂಬಕ್ಕೆ ಮಾನವೀಯತೆಯ ನೆರವು ಒದಗಿಸಲು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಬೀದಿ ಬೀದಿಯಲ್ಲಿ ಹಣ ಸಂಗ್ರಹಕ್ಕೆ ಚಾಲನೆ ನೀಡಿದರು.

ಮಗುವಿನ ಸಮಸ್ಯೆ ಕುರಿತು ಪತ್ರಿಕೆಯಲ್ಲಿ ಕರುಳ ಕುಡಿ ಆಲೆದಾಟ ಎಂಬ ಶಿರ್ಷಿಕೆಯಡಿ ರೇಣುಕಾ ಪರಮಾನಂದ ಕಲ್ಲೂರ ದಂಪತಿಯ ಕರುಳ ಕುಡಿ ಸುದರ್ಶನನ ನೆರವಿನ ಮೊರೆಗಾಗಿ ಮನಕುಲಕುವ ವರದಿ ಪ್ರಕಟಿಸಿದ ಪರಿಣಾಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ರಸ್ತೆ ಬದಿಯಲ್ಲಿಯ ಫುಟ್‌ಪಾತ್‌ ವ್ಯಾಪಾರಸ್ಥರ ಬಳಿ ಹಾಗೂ ಅಂಗಡಿ ಮುಗ್ಗಟ್ಟುಗಳಿಗೆ ತೆರಳಿ ಕೈಲಾದ ಮಟ್ಟಿಗೆ ನೆರವಿನ ಹಸ್ತ ಚಾಚಲು ವಿನಂತಿಸಿದರು.

ಮಗನ ಲೀವರ್‌ನಲ್ಲಿ ಕಾಣಿಸಿಕೊಂಡಿರುವ ದೋಷದಿಂದ ಲೀವರ್‌ ಬದಲಾವಣೆ ಅವಶ್ಯವಾಗಿದ್ದು ತಾಯಿಯೇ ತನ್ನ ಜೀವ ಒತ್ತೆ ಇಟ್ಟು ಲೀವರ್‌ ನೀಡಲು ಮುಂದಾಗಿದ್ದಾರೆ. ಲೀವರ್‌ ಬದಲಾವಣೆಗೆ ಸುಮಾರು 15ರಿಂದ 20 ಲಕ್ಷ ರೂ. ವೆಚ್ಚ ತಗಲುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಹಣ ಹೊಂದಿಸುವ ಸಲುವಾಗಿ ಪಾಲಕರು ದಾನಿಗಳ ಮನೆ ಬಾಗಿಲಿಗೆ ತಿರುಗಾಡುತ್ತಿದ್ದರೂ ದಾನಿಗಳಿಂದ ಸ್ಪಂದನೆ ಅಷ್ಟಕಷ್ಟೆಯಾಗುತ್ತಿದೆ. ದೊಡ್ಡ ಮೊತ್ತದ ಹಣ ಸಂಗ್ರಹ ಆಗುತ್ತದೆ ಇಲ್ಲವೋ ಎಂಬ ಅಘಾತ ನಮ್ಮಲ್ಲಿ ಕಾಡುತ್ತಿದೆ ಎಂದು ಸುದರ್ಶನನ ತಾಯಿ ರೇಣುಕಾ ಕಲ್ಲೂರ ಅವರು ಪತ್ರಿಕೆ ಸಂಪರ್ಕಿಸಿದಾಗ ತಿಳಿಸಿದ್ದಾರೆ.

ಮಗನನ್ನು ಬದುಕಿಸಿಕೊಳ್ಳಲು ಅಲೆದಾಡುತ್ತಿರುವ ಕಲ್ಲೂರ ಕುಟುಂಬಕ್ಕೆ ನೆರವು ಒದಗಿಸುವ ಸಲುವಾಗಿ ಮಾನವೀಯತೆ ಆಧಾರದ ಮೇಲೆ ಕರವೇ ಕಾರ್ಯಕರ್ತರೆಲ್ಲರೂ ಬೀದಿ ಬೀದಿಯಲ್ಲಿ ದೇಣಿಗೆ ಸಂಗ್ರಹದ ಡಬ್ಬಿಯೊಂದಿಗೆ ಸಂಚರಿಸಿ ಹಣ ಸಂಗ್ರಹಿಸಲು ಮುಂದಾಗಿದ್ದು ಮಾನವೀಯ ಮೌಲ್ಯ ಎತ್ತಿ ಹಿಡಿಯುವಂತಹ ಕಾರ್ಯ ಎಂಬ ಮಾತುಗಳು ಕೇಳಿ ಬಂದವು.
 
ನಿಸಾರ್‌ ಬೇಪಾರಿ, ಜೈಭೀಮ ಮುತ್ತಗಿ, ಪ್ರಭು ಪಾಟೀಲ, ಸೌರಭ ಕುಲಕರ್ಣಿ, ರಾಘವೇಂದ್ರ ಸೋನಾರ, ನಭಿ ಲಾಹೋರಿ, ಸಾವಿತ್ರಿ ತಳವಾರ, ಶ್ವೇತಾ ಯರಗಲ್ಲ, ಅಬುಬಕರ ಲಾಹೋರಿ, ಸತೀಶ ಮೋಹಿತೆ, ನಾಗರಾಜ ಪತ್ತಾರ, ಭವಾನಿ ಅಂಬಿಗೇರ, ಮನೋಜ್‌ ಹಂಚಾಟೆ, ಗಿರೀಶ ಕನಕರಡ್ಡಿ, ಅನಿಲ ಬಡಿಗೇರ, ಟಿಪ್ಪು ಕಾಳಗಿ, ಅಜೀಜ್‌ ಮನ್ಸೂರ್‌, ಮುತ್ತು ಧೂಳೇಕರ, ಮಡಿವಾಳ ಕೊಂಡಗೂಳಿ,
ರಾಜು ಮೂಕಿಹಾಳ ಭಾಗವಹಿಸಿದ್ದರು. 

ಮಗನನ್ನು ಬದುಕಿಸಿಕೊಳ್ಳಲು ಕಲ್ಲೂರ ಕುಟುಂಬದವರ ಅಲೆದಾಟದ ವಿಷಯ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡೆವು. ನಮ್ಮ ಸಂಘಟನೆ ಪರ ಸಹಾಯ ಹಸ್ತ ನೀಡಬೇಕೆಂಬ ಉದ್ದೇಶದೊಂದಿಗೆ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಹಣ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ಆರ್ಥಿಕ ನೆರವು ನೀಡುವವರು ಕರವೇ ಕಾರ್ಯಕರ್ತರನ್ನು ಸಂಪರ್ಕಿಸಿ ನೆರವು ನೀಡಬಹುದು.
 ನಿಸಾರ್‌ ಬೇಪಾರಿ, ಕರವೇ ತಾಲೂಕಾಧ್ಯಕ್ಷ

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.