ದಾಸ ಶ್ರೇಷ್ಠ ಕನಕದಾಸರ ಜಯಂತಿ
Team Udayavani, Nov 27, 2018, 4:18 PM IST
ಹೊಸಪೇಟೆ: ತಾಲೂಕು ಕುರುಬ ಸಮಾಜದಿಂದ ದಾಸಶ್ರೇಷ್ಠ ಕನಕದಾಸರ 531ನೇ ಜಯಂತಿ ನಿಮಿತ್ತ ನಗರದ ಕನಕದಾಸ
ವೃತ್ತದ ಕನಕದಾಸರ ಪುತ್ಥಳಿಗೆ ಸೋಮವಾರ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಕನಕದಾಸ ವೃತ್ತದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಶಾಸಕ ಆನಂದ್ ಸಿಂಗ್ ಮಾತನಾಡಿ, ದಾಸರಲ್ಲಿಯೇ ಶ್ರೇಷ್ಠವಾದವರು ಕನಕದಾಸರು. ಅವರ ಪದ್ಯ, ಕೀರ್ತನೆಗಳು ಪ್ರಸ್ತುತ ಜೀವನಕ್ಕೂ ಅನ್ವಯವಾಗಿದೆ. ಅವರ ಆದರ್ಶ ತತ್ವ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಜಿ. ಭರಮನಗೌಡ ಮಾತನಾಡಿ, ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಇಡೀ ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ. ವರ್ಣ, ಜಾತಿ ಪದ್ಧತಿ ವಿರುದ್ಧ ಆಗಿನ ಕಾಲದಲ್ಲಿ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದರು.
ಹುಡಾ ಮಾಜಿ ಅಧ್ಯಕ್ಷ ಆರ್. ಕೊಟ್ರೇಶ್, ಎಲ್. ಸಿದ್ಧನಗೌಡ, ಅಯ್ನಾಳಿ ತಿಮ್ಮಪ್ಪ, ಮುಖಂಡರಾದ ಕೆ.ಎಂ. ಹಾಲಪ್ಪ, ಡಿ. ಚಂದ್ರಶೇಖರ್, ಡಿ. ಚೆನ್ನಪ್ಪ, ನಗರಸಭೆ ಸದಸ್ಯರಾದ ರಾಮಚಂದ್ರಗೌಡ, ಚಿದಾನಂದ, ಕೆ. ರವಿಕುಮಾರ್, ಎಚ್. ಮಹೇಶ್, ಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್, ಎಲ್.ಎಸ್. ಆನಂದ, ತಿಪ್ಪೇಸ್ವಾಮಿ, ದಲ್ಲಾಲಿ ಕುಬೇರ, ಪ್ರಕಾಶ್ ಕಾಕುಬಾಳು, ಬಂದಿ ಭರಮಪ್ಪ, ಗೌರಿ ಶಂಕರ್ ಬಣಕಾರ, ದೇವರಮನೆ ರವಿಶಂಕರ್, ಗಂಟಿ ಸೋಮಶೇಖರ್, ಮೃತ್ಯುಂಜಯ, ಚಂದ್ರಕಾಂತ್, ಬಿಸಾಟಿ
ಸತ್ಯನಾರಾಯಣ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ಪಿಕೆ ಹಳ್ಳಿ: ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಕನಕದಾಸರ 531ನೇ ಜಯಂತಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ರಾಧಾ ಚಂದ್ರಶೇಖರ್, ಮುಖಂಡರಾದ ಕೆ.ತಿಪ್ಪೇಸ್ವಾಮಿ, ಅಂಕ್ಲಪ್ಪ, ಮಲ್ಲೇಶ್, ತಿಪ್ಪೇಶ್, ಹನುಮಂತ, ಎನ್.ತಿಪ್ಪೇಸ್ವಾಮಿ, ರಾಮು, ಪಂಪಾ ಪತಿ,, ಶಶೀಧರ್,ಜಂಬಯ್ಯ, ಮುರಾರಿ ಇತರರಿದ್ದರು. ತಾಲೂಕಿನ ಕಾಕುಬಾಳು, ಮಲಪನಗುಡಿ, ಹೊಸಮಲನಗುಡಿ, ಬೈಲುವದ್ದಿಗೇರಿ ಸೇರಿದಂತೆ ಕಡೆಗಳಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.