ಖರ್ಚಿಲ್ಲದೇ ಸುಂದರಿ ಆಗಬೇಕೇ?
Team Udayavani, Nov 28, 2018, 6:00 AM IST
ಮುಖದ ಅಂದ ಕೆಡಲು ಚರ್ಮದ ಅಶುಚಿತ್ವ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ಪ್ರಮುಖ ಕಾರಣ. ಜಾಹೀರಾತುಗಳಿಗೆ ಮಾರುಹೋಗಿ ಸೋಪು, ಕ್ರೀಮು, ಫೇಸ್‌ವಾಶ್ ಹಿಂದೆ ಬಿದ್ದವರ ಚರ್ಮವೂ ಅಂದಗೆಟ್ಟಿದೆ. ಊಟ-ತಿಂಡಿಯಲ್ಲಿ ಸ್ವಲ್ಪ ನಿಯಂತ್ರಣ, ಜೀವನಶೈಲಿಯಲ್ಲಿ ಸ್ವಲ್ಪ ಶಿಸ್ತು ರೂಢಿಸಿಕೊಂಡರೆ ಖರ್ಚಿಲ್ಲದೆ ಸುಂದರಿಯರಾಗಬಹುದು. ಅಡುಗೆಮನೆಯಲ್ಲಿರುವ ಪದಾರ್ಥಗಳು, ಸೌಂದರ್ಯವರ್ಧಕವೂ ಹೌದು ಎಂದು ಮರೆಯಬೇಡಿ.
– ರಾತ್ರಿ ಮಲಗುವಾಗ, ಹಾಲಿನ ಕೆನೆಗೆ ಅರಿಶಿನ ಬೆರೆಸಿ ಲೇಪಿಸಿಕೊಂಡು, ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ
– ಸೇಬಿನ ತಿರುಳಿನ ಭಾಗವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ.
– ಹಸಿ ಕ್ಯಾರೆಟ್ ತಿನ್ನುವುದರಿಂದ ಹಾಗೂ ಅದರ ರಸವನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
– ಪ್ರತಿದಿನ ಮುಖಕ್ಕೆ ಟೊಮೇಟೊ ರಸ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದರೆ ಚರ್ಮದ ಸುಕ್ಕು ಹೋಗುತ್ತದೆ.
ಜೀವನಶೈಲಿ ಹೀಗಿರಲಿ
1. ದಿನಕ್ಕೆ ಮೂರು ಬಾರಿಯಾದರೂ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
2. ದಿನಕ್ಕೆ ಕನಿಷ್ಠ ಎರಡು ಲೀಟರ್, ಉಗುರು ಬೆಚ್ಚಗಿನ ನೀರು ಕುಡಿದರೆ ಒಳ್ಳೆಯದು.
3. ಕೂದಲಿಗೆ ರಾಸಾಯನಿಕ ಶ್ಯಾಂಪೂ ಬಳಸದೆ, ಸೀಗೆಕಾಯಿ ಬಳಸಿ
4. ಬೆಳಗ್ಗೆ ವಾಯು ವಿಹಾರ, ಹದಿನೈದು ನಿಮಿಷ ಧ್ಯಾನ, ಯೋಗ ಮಾಡಿ.
5. ಕೋಪಕ್ಕೆ ಕಡಿವಾಣ ಹಾಕಿದರೆ ಒಳಿತು.
6. ಕರಿದ ತಿಂಡಿಯ ಮೋಹ ಬಿಡಿ.
7. ಹಸಿ ತರಕಾರಿ ಸೊಪ್ಪು, ಹಣ್ಣುಗಳನ್ನು ಹೆಚ್ಚು ಸೇವಿಸಿ.
ರತ್ನಮ್ಮ ಎ.ಆರ್., ಅರಕಲಗೂಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.