ಪುತ್ತೂರು: ಗುಂಡ್ಯದಲ್ಲಿ ಇ-ಶೌಚಾಲಯ


Team Udayavani, Nov 28, 2018, 10:32 AM IST

28-november-3.gif

ಪುತ್ತೂರು: ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಶಿರಾಡಿ ಘಾಟಿಯ ಉದ್ದಗಲದಲ್ಲಿ ಎಲ್ಲಿಯೂ ಶೌಚಾಲಯವೇ ಇಲ್ಲ. ಇದಕ್ಕೆ ತಾತ್ಕಾಲಿಕವಾಗಿಯಾದರೂ ಪರಿಹಾರ ನೀಡಬೇಕು ಎನ್ನುವ ನೆಲೆಯಲ್ಲಿ ಇ-ಶೌಚಾಲಯ ನಿರ್ಮಿಸಲು ದಕ್ಷಿಣ ಕನ್ನಡ ಜಿ.ಪಂ. ಮುಂದಾಗಿದೆ.

ಶಿರಾಡಿ ಘಾಟಿ ಆರಂಭವಾಗುವ ಗುಂಡ್ಯದಲ್ಲಿ ಶೌಚಾಲಯ ಬೇಕು ಎನ್ನುವ ಬೇಡಿಕೆ 10 ವರ್ಷಗಳಿಂದ ಕೇಳಿಬರುತ್ತಲೇ ಇದೆ. ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣಿಕರು, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಿದೆ. ಇದರಿಂದಾಗಿ ಗುಂಡ್ಯ ಪೇಟೆಯಾಗಿ ಪರಿವರ್ತನೆ ಆಗುತ್ತಿದೆ. ಇದಕ್ಕೆ ಸರಿಯಾಗಿ ಗಲೀಜು ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಶೌಚಾಲಯ ಬೇಕೆನ್ನುವ ಬೇಡಿಕೆ ಸಹಜವಾಗಿ ಕೇಳಿಬರತೊಡಗಿದೆ.

ಶೌಚಾಲಯದ ಬೇಡಿಕೆಯನ್ನು ಈಡೇರಿಸಲು ಸ್ಥಳೀಯ ಗ್ರಾ.ಪಂ., ತಾ.ಪಂ. ಸಂಪೂರ್ಣ ವಿಫಲವಾಗಿವೆ. ಇದೀಗ ಬೇಡಿಕೆ ಈಡೇರಿಕೆಗೆ ಜಿ.ಪಂ. ಮುಂದಾಗಿದೆ. ಇತ್ತೀಚೆಗೆ ಶಿರಾಡಿ ಗ್ರಾ.ಪಂ.ಗೆ ಭೇಟಿ ನೀಡಿದ ಜಿ.ಪಂ. ಅಧಿಕಾರಿಗಳು ಇ-ಶೌಚಾಲಯ ನಿರ್ಮಿಸಿದರೆ ಹೇಗೆ ಎನ್ನುವ ಪ್ರಸ್ತಾವನೆ ಇಟ್ಟಿದ್ದಾರೆ. ಒಂದು ವೇಳೆ ಇದು ಆದೀತು ಎಂದಾದರೆ, ಇದಕ್ಕೆ ಸೂಕ್ತವಾದ ಜಾಗವನ್ನು ಹುಡುಕಿ ಕೊಡಿ ಎಂದು ಸೂಚನೆ ನೀಡಿದ್ದಾರೆ. ವಾಸ್ತವದಲ್ಲಿ ಗುಂಡ್ಯ ಭಾಗಕ್ಕೆ ಇ-ಶೌಚಾಲಯದ ಕಲ್ಪನೆಯೇ ಸರಿಯಲ್ಲ ಎನ್ನುವುದು ಜಿ.ಪಂ. ಅಧಿಕಾರಿಗಳಿಗೂ ತಿಳಿದಿದೆ.

ಏಕಿಷ್ಟು ಸಮಸ್ಯೆ?
ಶೌಚಾಲಯ ನಿರ್ಮಾಣ ಮಾಡುವುದು ಸ್ಥಳೀಯಾಡಳಿತ ಅಥವಾ ಇತರ ಅಧಿಕಾರಿಗಳಿಗೆ ಕಷ್ಟದ ಕೆಲಸವೇನಲ್ಲ. ಆದರೆ ಗುಂಡ್ಯದಲ್ಲಿ ಶೌಚಾಲಯ ನಿರ್ಮಿಸುವುದು ಸವಾಲಿನ ಕೆಲಸ. ಏಕೆಂದರೆ, ಇಲ್ಲಿ ಸರಕಾರಿ ಜಾಗವೇ ಇಲ್ಲ. ಇರುವ ಜಾಗವೆಲ್ಲವೂ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಈಗಿನ ಪ್ರಸ್ತಾವದಂತೆ, ಗುಂಡ್ಯದಲ್ಲಿ ಇ-ಶೌಚಾಲಯ ನಿರ್ಮಾಣ ಮಾಡಬೇಕಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯ ಅನುಮತಿ ತೆಗೆದುಕೊಳ್ಳಲೇಬೇಕು. ಈ ಹಿನ್ನೆಲೆಯಲ್ಲೂ ಪರಿಶೀಲನೆ ನಡೆಸಲು ಗ್ರಾ.ಪಂ.ಗೆ ಸೂಚನೆ ನೀಡಲಾಗಿದೆ.

ಜಾಗ ಮೀಸಲಿರಿಸಲಾಗಿತ್ತು
ಮೂರು ವರ್ಷಗಳ ಹಿಂದೆ ಗುಂಡ್ಯದಲ್ಲಿ ಶೌಚಾಲಯ ನಿರ್ಮಾಣ ಮಾಡಲು 10 ಲಕ್ಷ ರೂ. ಅನುದಾನ ಮೀಸಲಿಡಲಾಗಿತ್ತು. ಇದಕ್ಕಾಗಿ ಗುಂಡ್ಯದಲ್ಲಿ 5 ಸೆಂಟ್ಸ್‌ ಸರಕಾರಿ ಜಾಗವನ್ನು ಗೊತ್ತುಪಡಿಸಲಾಗಿತ್ತು. ಅಷ್ಟರಲ್ಲಿ ಶಿರಾಡಿ ಗ್ರಾ.ಪಂ. ಆಡಳಿತ ಬದಲಾಯಿತು. ಹೊಸ ಆಡಳಿತ ಮೊದಲು ಶೌಚಾಲಯಕ್ಕೆ ಗುರುತಿಸಿದ ಜಾಗವನ್ನು ಒಪ್ಪಿಕೊಳ್ಳಲಿಲ್ಲ. ಸದ್ಯ ಜಾಗ ಬೇರಾವುದೋ ವಿಷಯಕ್ಕೆ ವಿನಿಯೋಗವಾಗಿದೆ. ಬದಲಿ ಜಾಗ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಇ-ಟಾಯ್ಲೆಟ್‌ ಒಂದೇ ಪರಿಹಾರವಾಗಿ ಗೋಚರಿಸುತ್ತಿದೆ.

ಜನರ ಸಂಖ್ಯೆ ಹೆಚ್ಚಳ
ನೆಲ್ಯಾಡಿ-ಸಕಲೇಶಪುರ ನಡುವೆ ಸುಮಾರು 59 ಕಿ.ಮೀ. ಅಂತರವಿದೆ. ಇದರ ನಡುವೆ ಶಿರಾಡಿ ಘಾಟಿ 26 ಕಿ.ಮೀ. ದೂರಕ್ಕೆ ಚಾಚಿಕೊಂಡಿದೆ. ಪ್ರಯಾಣಿಕರಿಗೆ ಹಾಗೂ ಯಾತ್ರಾರ್ಥಿಗಳಿಗೆ ಜನವಸತಿ ಪ್ರದೇಶ ಮತ್ತು ಪೇಟೆ ಸಿಗುವುದು ಗುಂಡ್ಯದಲ್ಲಿ ಮಾತ್ರ. ಆದ್ದರಿಂದ ಗುಂಡ್ಯದಲ್ಲಿ ಅಂಗಡಿಗಳ ಸಂಖ್ಯೆ, ಜನರೂ ಜಾಸ್ತಿ. ನೆಲ್ಯಾಡಿ-ಸಕಲೇಶಪುರ ನಡುವೆ ಶೌಚಾಲಯ ನಿರ್ಮಿಸಲು ಗುಂಡ್ಯವೇ ಸೂಕ್ತ ಎಂದು ನಿರ್ಧರಿಸಲಾಗಿದೆ.

ಏರ್‌ಪೋರ್ಟ್‌ ಮಾದರಿ ಶೌಚಾಲಯ!
ಶಿರಾಡಿ ಘಾಟಿ ರಸ್ತೆ ಉದ್ಘಾಟನೆಗೆ ಮೊದಲು ಇಲ್ಲಿಗೆ ಭೇಟಿ ನೀಡಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲು, ಏರ್‌ಪೋರ್ಟ್‌ ಮಾದರಿಯ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ಎಂಜಿನಿಯರ್‌ಗಳಿಗೆ ಸೂಚಿಸಿದ್ದರು. ಅದರಂತೆ ಪೇಸ್‌ (ಪುತ್ತೂರು ಅಸೋಸಿಯೇಶನ್‌ ಆಫ್‌ ಸಿವಿಲ್‌ ಎಂಜಿನಿಯರ್) ವತಿಯಿಂದ ಸುಸಜ್ಜಿತ ಶೌಚಾಲಯದ ನೀಲ ನಕಾಶೆ ಸಿದ್ಧಪಡಿಸಿ, ಗ್ರಾ.ಪಂ., ಶಾಸಕ, ಸಂಸದರಿಗೆ ನೀಡಿದ್ದಾರೆ. ಆದರೆ ಇದನ್ನು ಜಾರಿ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಇದು ಆಡಳಿತದ ವೈಫಲ್ಯ ಎನ್ನುವುದು ಸ್ಥಳೀಯರ ಆಕ್ರೋಶದ ನುಡಿ.

ತೀರಾ ಅಗತ್ಯ
ಗುಂಡ್ಯದಲ್ಲಿ ಶೌಚಾಲಯ ಬೇಕೆನ್ನುವುದು ಸ್ಥಳೀಯರ, ಅಂಗಡಿ ಮಾಲಕರ ಮತ್ತು ಗ್ರಾ.ಪಂ.ನ ಒತ್ತಾಯ. ಈ ಭಾಗದಲ್ಲಿ ಗಲೀಜು ಹೆಚ್ಚಾಗುತ್ತಿದ್ದು, ಶೌಚಾಲಯ ತೀರಾ ಅಗತ್ಯ. ಆದರೆ ಸರಕಾರಿ ಜಾಗ ಇಲ್ಲದೇ ಇರುವುದರಿಂದ, ಅರಣ್ಯ ಇಲಾಖೆಯ ಜಾಗವನ್ನು ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ.
-ದಿನೇಶ್‌ ಪಿಡಿಒ, ಶಿರಾಡಿ ಗ್ರಾ.ಪಂ.

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.