ಸ್ಥಾಯಿ ಸಮಿತಿ ಚುನಾವಣೆ ಕಸರತ್ತು ಆರಂಭ
Team Udayavani, Nov 28, 2018, 12:08 PM IST
ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಡಿ.5ರಂದು ನಡೆಯಲಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಪ್ರಮುಖ ಸ್ಥಾಯಿ ಸಮಿತಿಯ ಸದಸ್ಯರಾಗಿ ಅಧ್ಯಕ್ಷ ಸ್ಥಾನ ಪಡೆಯುಲು ಕಸರತ್ತು ಆರಂಭಿಸಿದ್ದಾರೆ.
ಹಿಂದಿನ ಅವಧಿಯ ಸ್ಥಾಯಿ ಸಮಿತಿ ಸದಸ್ಯರ ಅಧಿಕಾರಾವಧಿ ನ.9ರಂದೇ ಮುಗಿದಿದ್ದು, ಆ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಡಿ.5ರಂದು ಚುನಾವಣೆ ನಿಗದಿಪಡಿಸಿದ್ದಾರೆ. ಇನ್ನೊಂದೆಡೆ ಸ್ಥಾಯಿ ಸಮಿತಿ ಆಕಾಂಕ್ಷಿಗಳು ತಮ್ಮ ಪಕ್ಷದ ವರಿಷ್ಠರ ಬಳಿ ಪ್ರಮುಖ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಮೇಯರ್, ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷೇತರರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೆಂಬಲ ಸೂಚಿಸಿದರೆ, ಮುಂದೆ ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿ ಪ್ರಮುಖ ಸಮಿತಿ ನೀಡುವುದಾಗಿ ಪಕ್ಷೇತರ ಸದಸ್ಯರಿಗೆ ಭರವಸೆ ನೀಡಲಾಗಿತ್ತು.
ಅದರಂತೆ ಮೈತ್ರಿಕೂಟಕ್ಕೆ ಬೆಂಬಲ ನೀಡಿದ ಐದು ಮಂದಿ ಪಕ್ಷೇತರರು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಶಿಕ್ಷಣ, ನಗರ ಯೋಜನೆ, ಮಾರುಕಟ್ಟೆ ಹಾಗೂ ಆರೋಗ್ಯ ಸ್ಥಾಯಿ ಸಮಿತಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೆ ಸಮ್ಮತಿಸದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಈ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ತಮಗೆ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ.
ಪ್ರಮುಖವಾಗಿ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಂತಿನಗರ ವಾರ್ಡ್ ಸದಸ್ಯೆ ಸೌಮ್ಯಾ ಶಿವಕುಮಾರ್, ಲಿಂಗರಾಜಪುರ ವಾರ್ಡ್‌ನ ಲಾವಣ್ಯ ಗಣೇಶ್ ರೆಡ್ಡಿ ಅವರಿಗೆ ಪ್ರಮುಖ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಮುಖಂಡರಲ್ಲಿ ಚರ್ಚೆ ನಡೆಯುತ್ತಿದೆ.
ಮೈತ್ರಿಗೆ ತಲಾ ನಾಲ್ಕು ಸ್ಥಾಯಿ ಸಮಿತಿ: 12 ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ ನಾಲ್ಕು ಸ್ಥಾಯಿ ಸಮಿತಿಗಳನ್ನು ಹಂಚಿಕೆ ಮಾಡಬೇಕು ಎಂದು ಈಗಾಗಲೇ ಚರ್ಚೆ ನಡೆಯುತ್ತಿದೆ. ಆದರೆ, ಯಾವ ಪಕ್ಷಕ್ಕೆ ಯಾವ ಸಮಿತಿ ನೀಡಬೇಕೆಂಬುದು ನಿರ್ಧಾರವಾಗಿಲ್ಲ. ಆದ್ದರಿಂದ ಮೇಯರ್, ಉಪಮೇಯರ್ ಆಯ್ಕೆಯಂತೆ ಎರಡು ಪಕ್ಷಗಳ ರಾಜ್ಯ ನಾಯಕರು ಅಖಾಡಕ್ಕೆ ಧುಮುಕುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಇನ್ನು ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಉಪಮೇಯರ್ ಸ್ಥಾನಕ್ಕೂ ಡಿ.5ರಂದೇ ಚುನಾವಣೆ ನಡೆಯಲಿದೆ. ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಭಿನ್ನಮತ ಶುರುವಾಗಿದ್ದು, ನಾಗಪುರ ವಾರ್ಡ್‌ನ ಭದ್ರೇಗೌಡ, ವಿ.ನಾಗೇನಹಳ್ಳಿಯ ರಾಜಶೇಖರ್ ಹಾಗೂ ಕಾವಲ್ ಭೈರಸಂದ್ರದ ನೇತ್ರಾ ನಾರಾಯಣ್ ಅವರು ಉಪಮೇಯರ್ ಗಾದಿಗಾಗಿ ಲಾಬಿ ನಡೆಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು
ಕಾಂಗ್ರೆಸ್: ಸೌಮ್ಯಾ ಶಿವಕುಮಾರ್, ಲಾವಣ್ಯ ಗಣೇಶ್ ರೆಡ್ಡಿ, ಲತಾ ರಾಥೋಡ್, ಕೇಶವ ಮೂರ್ತಿ ಹಾಗೂ ಉದಯ್ ಕುಮಾರ್.
ಜೆಡಿಎಸ್: ಉಮೇಸಲ್ಮಾ, ಇಮ್ರಾನ್ ಪಾಷಾ, ಐಶ್ವರ್ಯಾ, ಹೇಮಲತಾ ಗೋಪಾಲಯ್ಯ.
ಪಕ್ಷೇತರರು: ಆನಂದ್, ಲಕ್ಷ್ಮೀ ನಾರಾಯಣ್(ಗುಂಡಣ್ಣ), ಮುಜಾಹಿದ್ ಪಾಷಾ, ಚಂದ್ರಪ್ಪರೆಡ್ಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.