ಪಾಕಿಸ್ಥಾನ ಮೊದಲು ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸಲಿ: ಭಾರತ ಖಡಕ್
Team Udayavani, Nov 28, 2018, 7:27 PM IST
ಹೊಸದಿಲ್ಲಿ : ”ಭಾರತದೊಂದಿಗೆ ಶಾಂತಿ, ಸೌಹಾರ್ದ ಬಯಸುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಲ್ಲಕ್ಕಿಂತ ಮೊದಲು ತನ್ನ ದೇಶದಿಂದ ಭಾರತದ ಮೇಲಾಗುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು” ಎಂದು ಹೊಸದಿಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಕರ್ತಾರ್ಪುರ ಕಾರಿಡಾರ್ ಗೆ ಪಾಕಿಸ್ಥಾನದ ಕಡೆಯಿಂದ ಶಿಲಾನ್ಯಾಸ ನೆರವೇರಿಸಿ ಮಾಡಿದ ಭಾಷಣದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್, “ಭಾರತ ಮತ್ತು ಪಾಕಿಸ್ಥಾನ ಹಿಂದಿನದೆಲ್ಲವನ್ನು ಮರೆತು ಶಾಂತಿ ಸಂಬಂಧ ಹೊಂದಬೇಕು’ ಎಂದು ಕರೆ ನೀಡಿದ್ದರು.
ಕರ್ತಾರ್ಪುರ ಕಾರಿಡಾರ್ ಶಿಲಾನ್ಯಾಸ ಸಮಾರಂಭದಲ್ಲಿ ಭಾರತದ ಕಡೆಯಿಂದ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು, ಕೇಂದ್ರ ಸಚಿವರಾದ ಹರ್ಸಿಮ್ರತ್ ಕೌರ್ ಮತ್ತು ಎಚ್ ಎಸ್ ಪುರಿ ಭಾಗವಹಿಸಿದ್ದರು.
”ಭಾರತದೊಂದಿಗೆ ಶಾಂತಿ ಸಂಬಂಧ ಬಯಸುವ ಪಾಕಿಸ್ಥಾನ ಮೊತ್ತ ಮೊದಲು ಭಾರತದ ಮೇಲಾಗುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು; ಉಗ್ರರಿಗೆ ಆಸರೆ, ಪ್ರೋತ್ಸಾಹ, ಬೆಂಬಲ, ತರಬೇತಿ ನೀಡುವುದನ್ನು ನಿಲ್ಲಿಸಬೇಕು; ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆ ಜತೆಜತೆಗೆ ಸಾಗಲಾರದು” ಎಂದು ಭಾರತ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.