ಮದ್ದಲೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾಯರಿಗೆ ರಾಜ್ಯೋತ್ಸವ ಪ್ರಶಸ್ತಿ
Team Udayavani, Nov 28, 2018, 7:44 PM IST
ಬೆಂಗಳೂರು: 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೊರಬಿದ್ದಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 63 ಸಾಧಕರನ್ನು ರಾಜ್ಯ ಸರಕಾರ ಕೊಡಮಾಡುವ ಈ ದ್ವಿತೀಯ ಅತ್ಯುನ್ನತ ನಾಗರಿಕ ಗೌರವವಕ್ಕೆ ಆರಿಸಲಾಗಿದೆ. ರಾಜ್ಯದ ಗಂಡುಕಲೆಯಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಹಾಗೂ ಮದ್ದಳೆ ಮಾಂತ್ರಿಕರೆಂದೇ ಹೆಸರುವಾಸಿಯಾಗಿರುವ ಬಡಗುತಿಟ್ಟಿನ ಹಿರಿಯ ಮದ್ದಲೆವಾದಕ ಹಿರಿಯಡ್ಕ ಗೋಪಾಲರಾಯರಿಗೆ ಹಾಗೂ ಈಗಲೂ ಯಕ್ಷರಂಗದಲ್ಲಿ ಸಕ್ರಿಯವಾಗಿರುವ ಮತ್ತು ಉಭಯತಿಟ್ಟುಗಳಲ್ಲೂ ಸೈ ಅನ್ನಿಸಿಕೊಂಡಿರುವ ಹಾಸ್ಯಗಾರ ಸೀತಾರಾಮ್ ಕುಮಾರ್ ಕಟೀಲ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಂದಿದೆ.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಮುಖರಲ್ಲಿ ರಾಜನ್, ಭಾರ್ಗವ, ಜೈಜಗದೀಶ್, ಕಾಮರೂಪಿ, ಮೇಜರ್ ಪ್ರದೀಪ್ ಆರ್ಯ, ಅಮ್ಮೆಂಬಳ ಆನಂದ, ಶ್ರೀಮತಿ ಮಾರ್ಗರೇಟ್ ಆಳ್ವ, ಡಿ. ಸುರೇಂದ್ರ ಕುಮಾರ್, ಶಿವಾನಂದ ಕೌಜಲಗಿ, ಡಾ. ಸೀತಾರಾಮ್ ಭಟ್, ಎಚ್. ಎಲ್. ದತ್ತು, ಸ್ವಾತಂತ್ರ್ಯಹೋರಾಟಗಾರ ಬಸವರಾಜ ಬಿಸರಳ್ಳಿ, ಡಾ. ಎ.ಎ.ಶೆಟ್ಟಿ ಮುಂತಾದವರು ಸೆರಿದ್ದಾರೆ.
ಈ ಹಿಂದೆಯೇ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೂರ್ಣಗೊಳಿಸಿತ್ತು. ಆದರೆ ರಾಜ್ಯದಲ್ಲಿ ಉಪ ಚುನಾವಣೆ ನೀತಿ ಸಂಹಿತೆ ಕಾರಣವೊಡ್ಡಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವನ್ನು ಮುಂದೂಡಲಾಗಿತ್ತು. ಇದೀಗ ಬುಧವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 63 ಸಾಧಕರ ಪಟ್ಟಿಯನ್ನು ಪ್ರಕಟಿಸಿದ್ದು ನವಂಬರ್ 29, ಗುರುವಾರದಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಉಳಿದ ಕ್ಷೇತ್ರಗಳಲ್ಲಿ ಪ್ರಶಸ್ತಿ ವಿಜೇತರಾದ ಗಣ್ಯರ ಹೆಸರು ಹೀಗಿದೆ:
ಸಾಹಿತ್ಯ: ಎಂ.ಎಸ್. ಪ್ರಭಾಕರ (ಕಾಮರೂಪಿ), ಹಸನ್ ನಯೀಂ ಸುರಕೋಡ್, ಚ. ಸರ್ವಮಂಗಳ, ಚಂದ್ರಶೇಖರ ತಾಳ್ಯ.
ರಂಗಭೂಮಿ: ಎಸ್.ಎಸ್. ರಂಗಸ್ವಾಮಿ, ಪುಟ್ಟಸ್ವಾಮಿ, ಪಂಪಣ್ಣ ಕೋಗಳಿ.
ಸಂಗೀತ: ಅಣ್ಣು ದೇವಾಡಿಗ
ನೃತ್ಯ: ಎಂ.ಆರ್. ಕೃಷ್ಣಮೂರ್ತಿ
ಜಾನಪದ: ಗುರುವ ಕೊರಗ, ಗಂಗಹುಚ್ಚಮ್ಮ, ಚನ್ನಮಲ್ಲೇ ಗೌಡ, ಶರಣಪ್ಪ ಬೂತೇರ, ಶಂಕ್ರಪ್ಪ ಮಹಾದೇವಪ್ಪಾ, ಬಸವರಾಜ ಅಲಗೂಡ, ಚೂಡಾಮಣಿ ರಾಮಚಂದ್ರ.
ಶಿಲ್ಪಕಲೆ: ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ.
ಚಿತ್ರಕಲೆ: ಬಸವರಾಜ ರೇವಣಸಿದ್ದಪ್ಪ ಉಪ್ಪಿನ
ಕ್ರೀಡೆ: ಕೆನೆತ್ ಪೊವೆಲ್, ವಿನಯ ವಿ.ಎಸ್., ಚೇತನ್ ಆರ್.
ಯಕ್ಷಗಾನ: ಹಿರಿಯಡ್ಕ ಗೋಪಾಲ ರಾವ್, ಸೀತಾರಾಮ ಕುಮಾರ್ ಕಟೀಲ್
ಬಯಲಾಟ: ಯಲ್ಲವ್ವಾ ರೊಡ್ಡಪ್ಪನವರ, ಭೀಮರಾಯ ಬೋರಗಿ
ಚಲನಚಿತ್ರ: ಭಾರ್ಗವ, ಜೈಜಗದೀಶ್, ರಾಜನ್, ದತ್ತುರಾಜ್
ಶಿಕ್ಷಣ: ಗೀತಾ ರಾಮಾನುಜಂ, ಎ.ವಿ.ಎಸ್. ಮೂರ್ತಿ, ಡಾ. ಕೆ.ಪಿ. ಗೋಪಾಲಕೃಷ್ಣ, ಶಿವಾನಂದ ಕೌಜಲಗಿ
ಎಂಜಿನಿಯರಿಂಗ್: ಪ್ರೊ. ಸಿ.ಇ.ಜಿ. ಜಸ್ಟೋ
ಸಂಕೀರ್ಣ ಕ್ಷೇತ್ರ: ಆರ್.ಎಸ್. ರಾಜಾರಾಂ, ಮೇಜರ್ ಪ್ರದೀಪ್ ಆರ್ಯ, ಸಿ.ಕೆ. ಜೋರಾಪುರ, ನರಸಿಂಹಯ್ಯ, ಡಿ. ಸುರೇಂದ್ರ ಕುಮಾರ್, ಶಾಂತಪ್ಪನವರ್ ಪಿ.ಬಿ., ನಮಶಿವಾಯಂ ರೇಗುರಾಜ್, ಪಿ. ರಾಮದಾಸ್, ಎಂ.ಜೆ. ಬ್ರಹ್ಮಯ್ಯ
ಪತ್ರಿಕೋದ್ಯಮ: ಜಿ.ಎನ್. ರಂಗನಾಥ ರಾವ್, ಬಸವರಾಜ ಸ್ವಾಮಿ, ಅಮ್ಮೆಂಬಳ ಆನಂದ
ಸಹಕಾರ: ಸಿ. ರಾಮು
ಸಮಾಜಸೇವೆ: ಆನಂದ್ ಸಿ. ಕುಂದರ್, ರಾಚಪ್ಪ ಹಡಪದ, ಕೃಷ್ಣಕುಮಾರ ಪೂಂಜ, ಮಾರ್ಗರೇಟ್ ಆಳ್ವ
ಕೃಷಿ: ಮಹಾದೇವಿ ಅಣ್ಣಾರಾವ ವಣದೆ, ಮೂಕಪ್ಪ ಪೂಜಾರ್
ಪರಿಸರ: ಕಲ್ಮನೆ ಕಾಮೇಗೌಡ
ಸಂಘ-ಸಂಸ್ಥೆ : ರಂಗದೊರೆ ಸ್ಮಾರಕ ಆಸ್ಪತ್ರೆ
ವೈದ್ಯಕೀಯ: ಡಾ. ನಾಡಗೌಡ ಜೆ.ವಿ., ಡಾ.ಸೀತಾರಾಮ ಭಟ್, ಪಿ. ಮೋಹನ ರಾವ್, ಡಾ. ಎಂ.ಜಿ. ಗೋಪಾಲ್
ನ್ಯಾಯಾಂಗ: ಎಚ್.ಎಲ್. ದತ್ತು
ಹೊರನಾಡು: ಡಾ. ಎ.ಎ. ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರರು: ಬಸವರಾಜ ಬಿಸರಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.