90 ಮಹಿಳೆಯರ ಕೊಂದ ಪಾಪಿ
Team Udayavani, Nov 29, 2018, 6:47 AM IST
ವಾಷಿಂಗ್ಟನ್: ಈತನ ಹೆಸರು ಸ್ಯಾಮುಯೆಲ್ಸ್ ಲಿಟಲ್. ವಯಸ್ಸು 78. ಊರು ಕ್ಯಾಲಿ ಫೋರ್ನಿಯಾ. ಹೃದ್ರೋಗ ಮತ್ತು ಮಧು ಮೇಹಗಳಿಂದ ಬಳಲುತ್ತಿರುವ ಈತ ಸದ್ಯಕ್ಕೆ ಅಮೆರಿಕದಲ್ಲಿ ವಿಚಾರಣಾಧೀನ ಕೈದಿ. 1982ರಲ್ಲಿ ಈತನ ರಕ್ತ ಚರಿತ್ರೆ ಶುರುವಾಗಿದ್ದು, ಅಮೆರಿಕದ 14 ರಾಜ್ಯಗಳ ನಾನಾ ನಗರಗಳಲ್ಲಿ ಹಲವಾರು ಒಂಟಿ ಮಹಿಳೆಯರನ್ನು ಕೊಂದ ಪರಮಪಾಪಿ ಈತ.
ಅಮೆರಿಕದ ಇತಿಹಾಸದಲ್ಲಿ 49 ಮಹಿಳೆಯರನ್ನು ಕೊಂದು ಅತಿ ದೊಡ್ಡ ಸೀರಿಯಲ್ ಕಿಲ್ಲರ್ ಎಂಬ ಪಟ್ಟ ಗಳಿಸಿದ್ದ ಗ್ಯಾರಿ ರಿಡ್ಜ್ವೇ ಎಂಬಾತನ ದಾಖಲೆ ಮುರಿದಿರುವ ಈ ಸ್ಯಾಮ್ಯುಯೆಲ್ಸ್ ಮೇಲೆ 90 ಮಹಿಳೆಯರನ್ನು ಹತ್ಯೆಗೈದಿರುವ ಶಂಕೆಯಿದೆಯಾದರೂ ತನಿಖಾಧಿಕಾರಿಗಳು ಈವರೆಗೆ ಈತನ ವಿರುದ್ಧ ಕೇವಲ 30 ಪ್ರಕರಣಗಳನ್ನು ಮಾತ್ರ ದಾಖಲಿಸಲು ಸಾಧ್ಯವಾಗಿದೆ. ಇವುಗಳಲ್ಲಿ 1987ರಿಂದ 1989ರ ಅವಧಿಯಲ್ಲಿ ನಡೆಸಲಾಗಿರುವ ಮೂರು ಕೊಲೆ ಪ್ರಕರಣಗಳು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ವಿಚಾರಣೆ ವೇಳೆ ಒಂದೊಂದೇ ಹತ್ಯೆಯನ್ನು ಬಾಯಿ ಬಿಟ್ಟಿದ್ದು, ಒಟ್ಟು 90 ಮಹಿಳೆಯರನ್ನು ಕೊಂದಿದ್ದಾಗಿ ಹೇಳಿಕೊಂಡಿದ್ದಾನೆ. ಎಲ್ಲಿ, ಯಾವಾಗ, ಯಾರನ್ನು, ಹೇಗೆ ಕೊಂದೆ ಎಂಬುದನ್ನೂ ಈತ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದು, ಅಧಿ ಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ನಗರಗಳಲ್ಲಿ ರಾತ್ರಿ ಹೊತ್ತು ಕ್ಲಬ್, ಪಬ್‌ಗಳಲ್ಲಿ ಸಿಗುತ್ತಿದ್ದ, ದಾರಿ ತಪ್ಪಿದ ಒಂಟಿ ಹೆಂಗಳೆಯರನ್ನು ರಮಿಸಿ ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ಈತ, ತನ್ನ ಕಾರಿನ ಹಿಂದಿನ ಸೀಟಿನಲ್ಲಿ ಅವರನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದ. 2013ರ ಜ.7ರಂದು ಸಿಕ್ಕಿಬಿದ್ದಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.