ಅಗತ್ಯದಷ್ಟು ಮರಳಿಲ್ಲ: ಕಾರ್ಮಿಕರಿಗೆ ಕೆಲಸವಿಲ್ಲ


Team Udayavani, Nov 29, 2018, 9:50 AM IST

sandd.jpg

ಅಕ್ರಮ ಮರಳುಗಾರಿಕೆಯನ್ನು ಬಗ್ಗುಬಡಿದು ಪರಿಸರವನ್ನು ಸಂರಕ್ಷಿಸಬೇಕೆಂಬುದಕ್ಕೆ ಎರಡು ಮಾತಿಲ್ಲ. ಹಾಗೆಯೇ ಸಾಂಪ್ರದಾಯಿಕ ಮರಳುಗಾರಿಕೆಯನ್ನೂ ಒಂದು ನಿರ್ದಿಷ್ಟ ನಿಯಮದಡಿ ತಂದು ಶಿಸ್ತು ಬದ್ಧಗೊಳಿಸಬೇಕಾದುದೂ ಅವಶ್ಯ. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಮರಳನ್ನೇ ನಂಬಿರುವ ಕ್ಷೇತ್ರದ ಆರೋಗ್ಯವನ್ನು ಕಾಪಾಡಲೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನೆಲೆಯಲ್ಲಿ ನಿರ್ದಿಷ್ಟ ಕ್ರಮ ಕೈಗೊಳ್ಳಲು ವಿಳಂಬವಾಗಿರುವುದು ಕಟ್ಟಡ ನಿರ್ಮಾಣ ಕ್ಷೇತ್ರದ ಕಾರ್ಮಿಕರನ್ನು ಕಂಗಾಲಾಗಿಸಿದೆ.

ಬ್ರಹ್ಮಾವರ: ಉಡುಪಿ ಜಿಲ್ಲಯಲ್ಲಿ ಮರಳಿನ ಕೊರತೆಯು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಅಗಾಧವಾಗಿ ತಟ್ಟಿದೆ. ಅದರಲ್ಲೂ ಇದರ ನೇರ ಬಿಸಿ ಅನುಭವಿಸುತ್ತಿರುವವರು ಕೂಲಿ ಕಾರ್ಮಿಕರು. 

ಈ ಭಾಗದಲ್ಲಿ ಹಲವು ವರ್ಷಗಳಿಂದ ಸಾಂಪ್ರದಾಯಿಕ ಮರಳುಗಾರಿಕೆಯ ಮರಳನ್ನೇ ಈ ಕ್ಷೇತ್ರ ಅವಲಂಬಿಸಿತ್ತು. ಬಳಿಕ ರಾಜ್ಯ ಸರಕಾರ ರಾಯಧನ ಪಾವತಿಸಿ ಪರವಾನಿಗೆ ಪಡೆದು ನಿಗದಿತ ಪ್ರಮಾಣ ದಷ್ಟೇ ಮರಳು ತೆಗೆಯುವ ಪದ್ಧತಿ ಜಾರಿಗೊಳಿಸಿತು. ಈ ಸಂದರ್ಭದಲ್ಲಿ ಕೆಲವರು ರಾಯಧನ ತಪ್ಪಿಸಲು ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳನ್ನು ಜೆಸಿಬಿ ಮೂಲಕ ಬಳಸಿ ತೆಗೆದು ರಾಜ್ಯದ ಬೇರೆ ಭಾಗಗಳಲ್ಲದೇ, ಹೊರರಾಜ್ಯಗಳಿಗೂ ಕಳುಹಿಸಲು ಆರಂಭಿಸಿದರು. ಇದು ಅಕ್ರಮ ದಂಧೆಯಾಗಿ ಮಾರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಯುವ ಸಲುವಾಗಿ ಸರಕಾರ ಪರವಾನಿಗೆಯನ್ನು ನೀಡುವುದನ್ನೇ ನಿರ್ಬಂಧಿಸಿತು. 

ಸಾಂಪ್ರದಾಯಿಕ ಮರಳುಗಾರಿಕೆಗೂ ಪರವಾನಿಗೆ ಸಿಗದ ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಳ್ಳತೊಡಗಿದವು. ಕೆಲವರು ಕಾಳಸಂತೆಯಿಂದ ಮರಳನ್ನು ಹೆಚ್ಚಿನ ದರಕ್ಕೆ ಪಡೆದು ಅಂತಿಮ ಹಂತದಲ್ಲಿದ್ದ ಕಾಮಗಾರಿ ಮುಗಿಸಿದರು. ಇನ್ನು ಕೆಲವರು ದರ ಇಳಿಯಲೆಂದು ಸುಮ್ಮನಾದರು. ಇವೆ
ಲ್ಲದರ ಪರಿಣಾಮ ಕಾರ್ಮಿಕ ವರ್ಗ ಕಂಗಾಲಾಯಿತು. ಈ ಪರಿಸ್ಥಿತಿ ಜಿಲ್ಲೆಯ ನಿರ್ದಿಷ್ಟ ಭಾಗಕ್ಕೆಂದಿಲ್ಲ. ಬಹುತೇಕ ಕಡೆ ಇದೇ ಸ್ಥಿತಿ. ಬ್ರಹ್ಮಾವರವನ್ನೇ ಉದಾಹರಣೆ ತೆಗೆದುಕೊಂಡರೆ, ಮೊದಲು ವಾರಪೂರ್ತಿ ಕೆಲಸವಿರುತ್ತಿತ್ತು. ಈಗ ಒಂದೆರಡು ದಿನಕ್ಕೂ ಕಷ್ಟ. ಕೆಲಸಕ್ಕೆ ರಜೆ ಮಾಡಿದರೆ ಬೈಯುವ ಕಾಲವಿತ್ತು. ಈಗ ಕಾರ್ಮಿಕರನ್ನು ಎಲ್ಲಿ ಕೆಲಸಕ್ಕೆ ಕಳುಹಿಸುವುದೆನ್ನುವುದೇ ಸಮಸ್ಯೆ ಎನ್ನುತ್ತಾರೆ ಮೇಸ್ತ್ರಿಯೊಬ್ಬರು.

ಸಾಲದ ಶೂಲ 
ಪ್ರತಿನಿತ್ಯದ ಸಂಬಳವನ್ನೇ ನಂಬಿ ಸಂಘಗಳಲ್ಲಿ ಸಾಲ ಮಾಡಲಾಗಿತ್ತು. ಅದನ್ನು ತೀರಿಸಲು ಹಣವಿಲ್ಲದಾಗಿದೆ ಎಂಬುದು ಮತ್ತಷ್ಟು ಮಂದಿಯ ಸವಾಲಾದರೆ, ಮಕ್ಕಳ ಶಿಕ್ಷಣದ ವೆಚ್ಚ ನಿರ್ವಹಣೆ, ಮನೆಯಲ್ಲಿ ಹಿರಿಯರ ಆರೋಗ್ಯ ನಿರ್ವಹಣೆ, ಮನೆಯ ಖರ್ಚಿನ ನಿರ್ವಹಣೆ ಎಲ್ಲದಕ್ಕೂ ಆದಾಯದ ಕೊರತೆ ಉದ್ಭವಿಸಿದೆ. 

ಪರಿಸ್ಥಿತಿ ಬದಲು
 ಹಲವು ಮನೆಗಳಲ್ಲಿ ಮನೆಯೊಡತಿ ಮನೆಯನ್ನು ನಿರ್ವಹಿಸುತ್ತಿದ್ದರು. ಕೆಲಸಕ್ಕೆ ಹೋದರೂ ಮನೆಯ ಸುತ್ತ ಲಿನ ಕೆಲಸವಷ್ಟೇ. ಈಗ ಪತಿಗೂ ಕೆಲಸವಿಲ್ಲದ ಕಾರಣ, ಸ್ವಲ್ಪ ದೂರ ವಾದರೂ ಪರವಾಗಿಲ್ಲ ವೆಂದು ಆಕೆಯೂ ಕೆಲಸಕ್ಕೆ ಹೋಗುತ್ತಿರುವ ಪ್ರಕರಣ ಹೆಚ್ಚಾಗಿದೆ. ಭತ್ತದ ಕಟಾವು ಬಹುತೇಕ ಮುಗಿದಿದ್ದು, ಕೃಷಿ ಕೆಲಸವೂ ಮುಗಿಯುತ್ತಾ ಬಂದಿದೆ. ಮುಂದೇನು ಎಂಬುದೇ ಚಿಂತೆ ಎನ್ನುತ್ತಾರೆ ಬ್ರಹ್ಮಾವರ ಬಳಿಯ ಕೂಲಿ ಕಾರ್ಮಿಕರೊಬ್ಬರು.

ಕ್ಷೇತ್ರವೇ ದೊಡ್ಡದು 
ನಿರ್ಮಾಣ ಕಾರ್ಯ ಸ್ಥಗಿತದಿಂದ ಸಾವಿರಾರು ಕಾರ್ಮಿಕರಿಗೆ ಉದ್ಯೋಗವಿಲ್ಲ. ಕಲ್ಲು ಕೋರೆ, ಪಂಚಾಂಗ ಕಟ್ಟುವ, ಮಣ್ಣು ತುಂಬಿಸುವ, ಗಾರೆ, ಪೈಂಟಿಂಗ್‌ ಮಾಡುವವರಿಗೂ ಕೆಲಸವಿಲ್ಲದಾಗಿದೆ.

 ಪ್ರವೀಣ್‌ ಬ್ರಹ್ಮಾವರ

ಟಾಪ್ ನ್ಯೂಸ್

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.