ಎಪಿಎಂಸಿ ಪ್ರಾಂಗಣಕ್ಕೆ  ಸಂತೆ ಸ್ಥಳಾಂತರ: ಶೀಘ್ರ ಸಭೆ 


Team Udayavani, Nov 29, 2018, 12:11 PM IST

29-november-7.gif

ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿ ಪ್ರತಿ ಸೋಮವಾರ ನಡೆಯುತ್ತಿರುವ ಸಂತೆ ಮಾರುಕಟ್ಟೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡುವ ಕುರಿತು ಶೀಘ್ರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು- ವರ್ತಕರ ಸಭೆ ನಡೆಸೋಣ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಹೇಳಿದರು.

ಅವರು ಬುಧವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಸರಕಾರದ ಲಕ್ಷಾಂತರ ರೂ. ಅನುದಾನ ಖರ್ಚು ಮಾಡಿ ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ನಿರ್ಮಿಸಿದ್ದು, ಅದು ಪಾಳು ಬಿದ್ದಿದೆ. ಜತೆಗೆ ರಸ್ತೆ ಬದಿಯಲ್ಲೇ ಸಂತೆ ನಡೆಯುತ್ತಿರುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಅದರ ಕುರಿತು ಮುಂದೆ ಚರ್ಚೆ ನಡೆಸೋಣ ಎಂದರು.

ತಾಲೂಕಿಗೆ ಮಂಜೂರಾಗಿರುವ 7 ಅಂಬೇಡ್ಕರ್‌ ಭವನಗಳ ನಿರ್ಮಾಣದ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗಲಿಲ್ಲ. ಪ್ರತಿ ಬಾರಿಯೂ ಪತ್ರ ಬರೆಯಲಾಗಿದೆ ಎಂಬ ಉತ್ತರ ನೀಡಲಾಗುತ್ತದೆ ಎಂದು ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ ತಿಳಿಸಿದರು.

ತಣ್ಣೀರುಪಂತ ಅಂಬೇಡ್ಕರ್‌ ಭವನ ನಿವೇಶನ ಕುರಿತು ಅರಣ್ಯ ಇಲಾಖೆ ಅಧಿಕಾರಿಯ ಉತ್ತರಕ್ಕೆ ಜಿ.ಪಂ. ಸದಸ್ಯ ಶಾಹುಲ್‌ ಹಮೀದ್‌ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಶಾಸಕರು ಮುಂದಿನ ಕೆಡಿಪಿ ಸಭೆಯೊಳಗೆ ಅನುದಾನ ಮಂಜೂರುಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

94ಸಿ ಹಕ್ಕುಪತ್ರ
ಗುರುವಾಯನಕೆರೆಯಲ್ಲಿ ಮಂಗಳೂರಿನಿಂದ ಆಗಮಿಸುವ ಬಸ್‌ಗಳನ್ನು ಗ್ರಾ.ಪಂ.ಗೆ ತೆರಳುವ ರಸ್ತೆ ಬಳಿಯಲ್ಲಿ ನಿಲ್ಲಿಸುವ ಬದಲು ಜಂಕ್ಷನ್‌ನಲ್ಲೇ ನಿಲ್ಲಿಸುವ ಕುರಿತು ಸಂಚಾರ ಠಾಣೆಯ ಎಸ್‌ಐ ಓಡಿಯಪ್ಪ ಗೌಡ ಅವರಿಗೆ ಶಾಸಕರು ಸೂಚನೆ ನೀಡಿದರು. ರೆಖ್ಯಾ ಗ್ರಾಮದಲ್ಲಿ ಅರಣ್ಯ ಭೂಮಿ ಸಮಸ್ಯೆ ಪರಿಹರಿಸಿ, ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸುವಂತೆ ತಹಶೀಲ್ದಾರ್‌ಗೆ ತಿಳಿಸಿದರು.

ಸಾರ್ವಜನಿಕ ಉದ್ದೇಶಕ್ಕೂ ಬಳಸಲಿ
ಮಾಲಾಡಿ ಗ್ರಾಮದ ಡಿಸಿ ಮನ್ನಾ ಭೂಮಿ, ಶಾಲಾ ಮೈದಾನದ ನಿವೇಶನದ ಕುರಿತ ಗೊಂದಲ ನಿವಾರಣೆಗೆ ಅದನ್ನು ಸಾರ್ವಜನಿಕ ಮೈದಾನ ಎಂದು ಗುರುತಿಸುವಂತೆ ಜಿ.ಪಂ. ಸದಸ್ಯ ಶೇಖರ್‌ ಕುಕ್ಕೇಡಿ ಅವರು ಮನವಿ ಮಾಡಿದಾಗ, ಶಾಲಾ ಮೈದಾನವೆಂದು ಗುರುತಿಸೋಣ. ಜತೆಗೆ ಅದನ್ನು ಸಾರ್ವಜನಿಕ ಉದ್ದೇಶಗಳಿಗೂ ಬಳಕೆ ಮಾಡುವ ನಿರ್ಣಯ ಕೈಗೊಳ್ಳೋಣ ಎಂದು ಶಾಸಕರು ತಿಳಿಸಿದರು.

ಬಿಇಒ ಉತ್ತರಕ್ಕೆ ಅಸಮಾಧಾನ
ತಾಲೂಕಿನ ಸರಕಾರಿ ಶಾಲೆಗಳ ಆರ್‌ಟಿಸಿ ಕುರಿತು ಬಿಇಒ ಎ.ಎನ್‌. ಗುರುಪ್ರಸಾದ್‌ ಅವರ ಉತ್ತರಕ್ಕೆ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಅವರು ಅಸಮಾಧಾನ ವ್ಯಕ್ತಪಡಿಸಿ, ಬಿಇಒ ಅವರು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅವರು ಹೇಳುವ ಪ್ರಕಾರ 23 ಶಾಲೆಗಳಿಗಿಂತಲೂ ಹೆಚ್ಚಿನ ಶಾಲೆಗಳಿಗೆ ಆರ್‌ ಟಿಸಿ ಇಲ್ಲ. ಡಿಸಿ ಮನ್ನಾ ಭೂಮಿಯಲ್ಲಿರುವ ಶಾಲೆಗಳ ಕುರಿತು ಅವರಿಗೆ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತನ್ನ ಹಿಂದಿನ ಕೆಡಿಪಿ ಸಭೆಯಲ್ಲಿ ಆರ್‌ಟಿಸಿ ಇಲ್ಲದ ಶಾಲೆಗಳ ಕುರಿತು ತಹಶೀಲ್ದಾರ್‌ಗೆ ಬರೆಯುವಂತೆ ತಿಳಿಸಿದರೂ ಬಿಇಒ ಅವರು ಬರೆಯದಿರುವ ಕುರಿತು ಅವರ ಕಾರ್ಯವೈಖರಿಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ನಿರ್ಮಾಣವಾಗಿರುವ 4 ಆರ್‌ಎಂ ಎಸ್‌ ಕಟ್ಟಡಗಳ ಗುಣಮಟ್ಟದ ಕುರಿತು ಪರಿಶೀಲನೆಗೆ ಬರೆಯುವಂತೆ ಶಾಸಕರು ಬಿಇಒಗೆ ಸೂಚನೆ ನೀಡಿದರು. ಕರಾಯ ಶಾಲಾ ಕಟ್ಟಡದ ಕಾಮಗಾರಿ ಕಳಪೆ ಕುರಿತು ಉದಯವಾಣಿಯಲ್ಲಿ ಬಂದಿರುವ ವರದಿಯನ್ನು ಸಭೆಯಲ್ಲಿ ಪ್ರಸ್ತಾವಿಸಿದರು.

ಸರಕಾರಿ ಆಸ್ಪತ್ರೆ ಮೇಲ್ದರ್ಜೆ ಪ್ರಕ್ರಿಯೆ
ಗ್ರಾಮ ಅರಣ್ಯ ಹಕ್ಕು ಸಮಿತಿಯ ಕುರಿತು ಸರ್ವೆ, ಅರಣ್ಯ ಇಲಾಖೆಯವರು ವಾರದೊಳಗೆ ವರದಿ ನೀಡುವಂತೆ ತಾ.ಪಂ. ಇಒ ಕುಸುಮಾಧರ್‌ ಸೂಚನೆ ನೀಡಿದರು. 100 ಹಾಸಿಗೆಗಳ ಸರಕಾರಿ ಆಸ್ಪತ್ರೆಯ ಮೇಲ್ದರ್ಜೆ ಪ್ರಕ್ರಿಯೆಯನ್ನೂ ಶೀಘ್ರ ಮುಗಿಸುವಂತೆ ಟಿಎಚ್‌ಒಗೆ ಶಾಸಕರು ಸೂಚನೆ ನೀಡಿದರು. ಜತೆಗೆ ಆ್ಯಂಬುಲೆನ್ಸ್‌ ದುರಸ್ತಿ ಕುರಿತು ಕ್ರಮಕ್ಕೆ ಟಿಎಚ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಅಕ್ರಮ -ಸಕ್ರಮ
ಕುಂಪಲಾಜೆ ಕಟ್ಟಡ ಅಕ್ರಮ ನಿರ್ಮಾಣದ ಕುರಿತು ಗಮನಹರಿಸುವಂತೆ ಪ.ಪಂ. ಮುಖ್ಯಾಧಿಕಾರಿಗಳಿಗೆ ಶಾಸಕರು ತಿಳಿಸಿದರು. ಜತೆಗೆ ಮುಡಾದಿಂದ ಮುಕ್ತಿ ನೀಡುವುದಕ್ಕೂ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಅಕ್ರಮ -ಸಕ್ರಮ ನಿವೇಶನದ ಕುರಿತು ಫಾರ್ಮ್ ಸಂ. 57ರಲ್ಲಿ ಡಿ. 3ರಿಂದ ಅರ್ಜಿ ಸ್ವೀಕರಿಸಲಾಗುವುದು ಎಂದು ತಹಶೀಲ್ದಾರ್‌ ಮದನ್‌ಮೋದನ್‌ ಸಭೆಯ ಗಮನಕ್ಕೆ ತಂದರು.

ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್‌, ಜಿ.ಪಂ. ಸದಸ್ಯರಾದ ನಮಿತಾ, ಸೌಮ್ಯಲತಾ, ಕೆಡಿಪಿ ನಾಮನಿರ್ದೇಶಿತರಾದ ಅಭಿನಂದನ್‌ ಹರೀಶ್‌, ಸುಕುಮಾರ್‌ ಉಪಸ್ಥಿತರಿದ್ದರು.

2 ತಿಂಗಳಲ್ಲಿ ಶಂಕುಸ್ಥಾಪನೆ 
ತಾಲೂಕಿಗೆ ನೂತನವಾಗಿ ಮಂಜೂರಾಗಿರುವ ತೆಕ್ಕಾರು, ಕಳೆಂಜ, ಕಡಿರುದ್ಯಾವರ ಹಾಗೂ ನಾವೂರು ಗ್ರಾ.ಪಂ.ಗಳ ನಿವೇಶನ ಸಮಸ್ಯೆ ಪರಿಹರಿಸಿ, ಮುಂದಿನ 2 ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವಂತೆ ಶಾಸಕ ಪೂಂಜ ಅಧಿಕಾರಿಗಳಿಗೆ ತಿಳಿಸಿದರು. ಜತೆಗೆ ಅದರ ಕುರಿತು ಕಾರ್ಯ ನಿರ್ವಹಿಸಲು ಶ್ರೀಧರ್‌ ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಯಿತು.

ಮದ್ಯ ಅಕ್ರಮ ಮಾರಾಟ
ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟದ ಕುರಿತು ನಮಗೆ ದಾಳಿ ಮಾಡುವುದಕ್ಕೆ ಅವಕಾಶವಿದ್ದರೂ ಅಬಕಾರಿ ಇಲಾಖೆಯವರು ತಮಗೆ ಟಾರ್ಗೆಟ್‌ ಇದೆ ಎಂದು ಮನವಿ ಮಾಡುತ್ತಾರೆ ಎಂದು ಪೊಲೀಸ್‌ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ. ತಿಳಿಸಿದಾಗ, ಮದ್ಯ ಮಾರಾಟದ ಆರೋಪಗಳಿರುವ ವ್ಯಕ್ತಿಗಳನ್ನು ಕರೆದು ಎಚ್ಚರಿಕೆ ನೀಡುವಂತೆ ಶಾಸಕ ಪೂಂಜ ಅಬಕಾರಿ ಇಲಾಖೆ ಅಧಿಕಾರಿಗೆ ತಿಳಿಸಿದರು.

ಗ್ರಾಮ ಜ್ಯೋತಿ ಯೋಜನೆ 
ಡಿ. 10ರೊಳಗೆ ತಾಲೂಕಿನಲ್ಲಿ ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ವಯ ಬಾಕಿ ಉಳಿದಿರುವ ಎಲ್ಲ ಮನೆಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು ಎಂದು ಮೆಸ್ಕಾಂ ಎಂಜಿನಿಯರ್‌ ಶಿವಶಂಕರ್‌ ತಿಳಿಸಿದರು.

ಟಾಪ್ ನ್ಯೂಸ್

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

15-uv-fusion

Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.