‘ಉಮಿಲ್’ಗಾಗಿ ಬಿಡಿಸಿದ ಬಂಡಲ್‌ಗಟ್ಟಲೆ ಚಿತ್ರ?
Team Udayavani, Nov 29, 2018, 12:56 PM IST
ಸಿನೆಮಾ ಶೂಟಿಂಗ್ ಅದೊಂದು ಬಹುದೊಡ್ಡ ಕಲೆ. ನಿಗದಿತ ದಿನ, ನಿಗದಿತ ಸಮಯ, ಕಲಾವಿದರು, ಸೀನ್, ಪರಿಕರ… ಹೀಗೆ ಎಲ್ಲವೂ ಆ ಕ್ಷಣದಲ್ಲಿದ್ದರೆ ಮಾತ್ರ ಶೂಟಿಂಗ್ ಆರಾಮವಾಗಿ ನಡೆಯುತ್ತದೆ. ಇದಕ್ಕಾಗಿ ಶೂಟಿಂಗ್ ಸುಲಭ ಮಾಡಲು ಕೆಲವರು ಬೇರೆ ಬೇರೆ ರೀತಿಯ ಟೆಕ್ನಿಕ್ ಉಪಯೋಗಿಸುತ್ತಾರೆ. ಇಂತಿಪ್ಪ ಕಾಲದಲ್ಲಿ ಡಿ.7ರಂದು ಬಿಡುಗಡೆಯಾಗಲಿರುವ ರಂಜಿತ್ ಸುವರ್ಣ ನಿರ್ದೇಶನದ ‘ಉಮಿಲ್’ ಸಿನೆಮಾದವರು ಶೂಟಿಂಗ್ ಅನ್ನು ಒಂದಿಷ್ಟು ವಿಭಿನ್ನವಾಗಿ ಮಾಡಿದ್ದರು. ವಿಶೇಷವೆಂದರೆ ಈ ಸಿನೆಮಾಕ್ಕಾಗಿ ಬಂಡಲ್‌ಗಟ್ಟಲೆ ಚಿತ್ರವನ್ನು ಬರೆಯಲಾಗಿತ್ತು.
ಸಿನೆಮಾ ಮಾಡುವುದಕ್ಕೂ, ಚಿತ್ರ ಬರೆಯುವುದಕ್ಕೂ ಏನು ಸಂಬಂಧ? ಎಂಬ ಪ್ರಶ್ನೆ ಎದುರಾದಾಗ ಗೊತ್ತಾಗಿದ್ದು ಹೀಗೆ: ‘ಸ್ಟೋರಿ ಬೋರ್ಡ್’ ಶೈಲಿಯನ್ನು ಕೋಸ್ಟಲ್‌ವುಡ್‌ಗೆ ಉಮಿಲ್‌ನವರು ಪರಿಚಯಿಸಿದ್ದರು. ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು (ಕೆನಡಾದಲ್ಲಿ) ರೆಡಿಮಾಡಿದ ಸಿನೆಮಾವಾದ್ದರಿಂದ ಸ್ಟೋರಿ ಬೋರ್ಡ್ ಮಾದರಿ ಶೂಟಿಂಗ್ ವೇಳೆ ಚಿತ್ರತಂಡಕ್ಕೆ ಲಾಭ ನೀಡಿದೆ.
ಹಾಲಿವುಡ್ ಸಿನೆಮಾದವರು ಈ ಮಾದರಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಕನ್ನಡದಲ್ಲಿ ಅಪರೂಪವಾದರೆ, ತುಳುವಿನಲ್ಲಿ ಮೊದಲ ಬಾರಿಗೆ ಇದನ್ನು ಬಳಸಲಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಅಂದಹಾಗೆ, ಸ್ಟೋರಿ ಬೋರ್ಡ್ ಅಂದರೆ; ಶೂಟಿಂಗ್ ಮಾಡುವ ದೃಶ್ಯದಲ್ಲಿ ಯಾರೆಲ್ಲ ಇರುತ್ತಾರೆ? ಆ ಲೊಕೇಶನ್ ಹೇಗಿರುತ್ತದೆ? ಏನೆಲ್ಲ ಅದರಲ್ಲಿ ಕಾಣಿಸಬೇಕು? ಉಮಿಲ್ ಎಲ್ಲಿಂದ ಬರಲಿದೆ? ಈ ಎಲ್ಲಾ ಲೆಕ್ಕಾಚಾರಗಳನ್ನು ಚಿತ್ರ ಬಿಡಿಸಿಕೊಂಡು, ಅದನ್ನು ನೋಡಿ ಶೂಟಿಂಗ್ ಮಾಡುವುದು ಇದರ ಮುಖ್ಯ ಸಂಗತಿ. ಹೀಗಾಗಿ ಒಂದೊಂದು ದೃಶ್ಯಕ್ಕಾಗಿ ಒಂದೊಂದು ಚಿತ್ರ ಮಾಡಿಕೊಂಡು-ಕೆಲವು ದಿನಗಳ ಶೂಟಿಂಗ್‌ಗಾಗಿ ಬಂಡಲ್‌ಗಟ್ಟಲೆ ಚಿತ್ರ ಮಾಡಲಾಗಿತ್ತಂತೆ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.