ಮಾಜಿ ಎಸ್‌ಪಿ ನಾಯಕ ಅಮರ್ ಸಿಂಗ್‌ರಿಂದ ಆರ್‌ಎಸ್‌ಎಸ್‌ಗೆ ಭೂ ದಾನ!
Team Udayavani, Nov 29, 2018, 4:40 PM IST
ಲಕ್ನೋ: ಎಸ್‌ಪಿ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಮರ್ ಸಿಂಗ್ ಅವರು ಆರ್‌ಎಸ್‌ಎಸ್‌ನ ಸಹ ಸಂಸ್ಥೆ ಸೇವಾ ಭಾರತಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾನ ಮಾಡುವ ಮೂಲಕ ರಾಜಕೀಯದಲ್ಲಿ ಇನ್ನೊಂದು ಇನ್ನಿಂಗ್ಸ್ ಆರಂಭಿಸುವ ಸೂಚನೆ ನೀಡಿದ್ದಾರೆ.
ವರದಿಯಾದಂತೆ, ಅಮರ್‌ಸಿಂಗ್ ಅವರು ಅಝಂಗಡ್‌ನ ತರ್ವಾನ್‌ನಲ್ಲಿರುವ ತನ್ನ ಪೂರ್ವಿಕರ 15 ಕೋಟಿ ರೂಪಾಯಿ ಮೌಲ್ಯ ಆಸ್ತಿಯನ್ನು ದಾನ ಮಾಡಿದ್ದಾರೆ. ಆಸ್ತಿಯಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಮನೆ ಸೇರಿದೆ.
ತನ್ನ ರಾಜಕೀಯ ಜೀವನದ ಉದ್ದಕ್ಕೂ ಆರ್‌ಎಸ್‌ಎಸ್ ಸಿದ್ದಾಂತಗಳನ್ನು ಬಲವಾಗಿ ವಿರೋಧಿಸುತ್ತಿದ್ದ ಸಿಂಗ್ ಅವರು ತನ್ನ ದಿವಂಗತ ತಂದೆಯ ನೆನಪಿನಲ್ಲಿ ಈ ದಾನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಸಮಾಜಸೇವೆ ಮಾಡುತ್ತಿರುವ ಸಂಸ್ಥೆಗೆ ನಾನು ನನ್ನ ಕೊಡುಗೆಯನ್ನು ನೀಡಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಮೂಲಕ ಬಿಜೆಪಿ ಸೇರ್ಪಡೆಯಾಗಲು ಯತ್ನಿಸುತ್ತಿದ್ದೀರಿ ಎನ್ನುವ ಮಾತುಗಳು ಕೇಳಿ ಬಂದಿವೆ ಎಂದು ಪ್ರಶ್ನಿಸಿದಾಗ ನಾನು ಅಂತಹದ್ದಕ್ಕೆಲ್ಲ ಉತ್ತರಿಸುವುದಿಲ್ಲ ಎಂದರು.
ಆಯೋಧ್ಯೆಯ ರಾಮ ಮಂದಿರದ ವಿಚಾರ ಪ್ರಶ್ನಿಸಿದಾಗ, ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರವಿದೆ. ಅದನ್ನು ಇನ್ನಷ್ಟು ಭವ್ಯ ಮಂದಿರವನ್ನಾಗಿಸಬೇಕಷ್ಟೇ ಎಂದರು.
ಅಮರ್ ಸಿಂಗ್ ಸಮಾಜವಾದಿ ಪಕ್ಷದಲ್ಲಿ ಮುಲಾಯಂ ಸಿಂಗ್ ಆಪ್ತರಾಗಿ ಗುರುತಿಸಿಕೊಂಡಿದ್ದವರು. ಪ್ರಬಲ ನಾಯಕರಾಗಿದ್ದ ಅವರು 2010 ರಲ್ಲಿ ರಾಷ್ಟ್ರೀಯ ಲೋಕ ಮಂಚ ಪಕ್ಷವನ್ನು ಸ್ಥಾಪಿಸಿ ಎಸ್‌ಪಿಗೆ ಸೆಡ್ಡು ಹೊಡೆದಿದ್ದರು. ಆದರೆ ಹೊಸ ಪಕ್ಷ ಚುನಾವಣೆ ಒಂದು ಸ್ಥಾನಗಳಿಸಲು ಸಾಧ್ಯವಾಗದೆ ಸ್ವಯಂ ಸೋತು ಸುಣ್ಣವಾಗಿದ್ದರು. 2016 ರಲ್ಲಿ ಮತ್ತೆ ಎಸ್‌ಪಿ ಬಾಗಿಲು ತಟ್ಟಿ ಪ್ರವೇಶ ಪಡೆದಿದ್ದರು. ಆದರೆ ಅಖೀಲೇಶ್ ಯಾದವ್ ಮತ್ತೆ ಅವರನ್ನು ಪಕ್ಷದಿಂದ ಹೊರ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.