ಸಮಸ್ಯೆ ಯಾರಿಗಿಲ್ಲ ಹೇಳಿ !
Team Udayavani, Nov 30, 2018, 6:00 AM IST
ಈ ಭೂಮಿ ಮೇಲಿರೋ ಪ್ರತಿಯೊಂದು ಜೀವಿಯೂ ತನ್ನದೇ ಆದ ಸಮಸ್ಯೆಯನ್ನು ದಿನನಿತ್ಯ ಎದುರಿಸುತ್ತಿರುತ್ತದೆ. ಅಂತಹುದರಲ್ಲಿ ಮನುಷ್ಯನಿಗೆ ಸಮಸ್ಯೆ ಬರುವುದು ಆಶ್ಚರ್ಯವಲ್ಲ. ಸಮಸ್ಯೆ ಬಂದಾಗ ಅದನ್ನು ಎದುರಿಸುವುದೇ ಎಲ್ಲಾ ಸಮಸ್ಯೆಗಳ ಮೊದಲ ಪರಿಹಾರ. ಆದರೆ, ಈಗಿನ ಜನಾಂಗದವರಿಗೆ ಎಲ್ಲ ಸಮಸ್ಯೆಗಳಿಗೂ ಸಾವೊಂದೇ ಪರಿಹಾರವಾಗಿಬಿಟ್ಟಿದೆ. ಇದು ನನ್ನ ಪ್ರಕಾರ ಅಕ್ಷರಶಃ ತಪ್ಪು. ಕೋಟಿಗಟ್ಟಲೆ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಶ್ರೀಮಂತನಿಂದ ಹಿಡಿದು ಒಂದು ಹೊತ್ತಿನ ಊಟಕ್ಕೂ ಕಷ್ಟಪಡೋ ಕೂಲಿ ಕಾರ್ಮಿಕನಿಗೂ ಸಮಸ್ಯೆಯಿರುತ್ತದೆ.
ನಾನು ಮೊದಲೇ ಹೇಳಿದ ಹಾಗೆ ಸಮಸ್ಯೆಯೇ ಸಾಧನೆಯ ಮೊದಲ ಮೆಟ್ಟಿಲು. ಇವತ್ತು ಒಬ್ಬ ಮನುಷ್ಯ ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಿದನೆಂದರೆ ಅದಕ್ಕೆ ಕಾರಣ ಅವನ ಸಮಸ್ಯೆಯೇ. ಇದಕ್ಕೆ ಮಾದರಿಯಾಗಿ ನಮ್ಮ ನೆಚ್ಚಿನ ವಿಜ್ಞಾನಿ ಅಬ್ದುಲ್ ಕಲಾಂರನ್ನು ತೆಗೆದುಕೊಳ್ಳೋಣ. ಕಲಾಂ ಅವರ ಬಗ್ಗೆ ತಿಳಿದಿರುತ್ತೀರಿ. ಆದರೆ, ಮತ್ತೆ ವಿವರಿಸಬೇಕಿದೆ. ಕಲಾಂರವರು ಒಂದು ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ. ಕಿತ್ತು ತಿನ್ನುವ ಬಡತನವಿದ್ದರೂ ಅದನ್ನೆಲ್ಲ ಲೆಕ್ಕಿಸದೆ ಪೇಪರ್ ಮಾರಿಯಾದರೂ ವಿದ್ಯಾಭ್ಯಾಸವನ್ನು ಪೂರೈಸಿ ಕೊನೆಗೊಂದು ದಿನ ಭಾರತ ದೇಶ ಕಂಡ ಭಾರತದ ಕನಸುಗಾರರಾದರು. ಒಂದು ವೇಳೆ ಅವರನ್ನು ಆವರಿಸಿದ್ದ ಕಿತ್ತು ತಿನ್ನುವ ಬಡತನದಿಂದ ವಿದ್ಯಾಭ್ಯಾಸವನ್ನು ಬಿಟ್ಟು ಕೂಲಿ ಕೆಲಸಕ್ಕೊ ಅಥವಾ ವ್ಯಾಪಾರವನ್ನು ಮಾಡಿಕೊಂಡಿರುತ್ತಿದ್ದರೆ ಇವತ್ತು ಅವರ ಹೆಸರು ಭಾರತೀಯರ ಮನದಲ್ಲಿ ಅಜರಾಮರವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ತಾನು ನನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಛಲ ತೊಟ್ಟಿದ್ದರಿಂದ ವಿಜ್ಞಾನಿಯಾಗಿ ಹೊರಹೊಮ್ಮಿದರು. ಅದಕ್ಕೇ ಹೇಳಿದ್ದು ಸಮಸ್ಯೆಗಳೇ ಸಾಧನೆಯ ಮೊದಲ ಮೆಟ್ಟಿಲು ಅಂತ. ಜೀವನವಿಡೀ ಸುಖದಲ್ಲಿದ್ದರೆ ಅದು ನಿಜವಾದ ಜೀವನ ಅಲ್ಲ. ಯಾವಾಗ ಸಮಸ್ಯೆಗಳು ಎದುರಾಗಿ ಅದಕ್ಕೆ ಪರಿಹಾರವನ್ನು ಹುಡುಕಿ ಮುಂದೆ ಸಾಗುತ್ತೇವೆಯೋ ಅದು ನಿಜವಾದ ಜೀವನವಾಗಿರುತ್ತದೆ.
ಕೆಲವೊಮ್ಮೆ ಸಮಸ್ಯೆ ಬರುವುದಕ್ಕಿಂತ ಮೊದಲು ಪರಿಹಾರ ಬಂದಿರುತ್ತದೆ. ಅದನ್ನು ನಾವು ಗುರುತಿಸಬೇಕು. ಎಲ್ಲ ಸಮಸ್ಯೆಗೆ ಸಾವೇ ಪರಿಹಾರವಲ್ಲ. ಸಮಸ್ಯೆ ಬರುವುದು ಸಾಧನೆಗೆ ಮೆಟ್ಟಿಲಾಗಿಯೇ ಹೊರತು ತೊಂದರೆಯಾಗಿ ಅಲ್ಲ. ಅದನ್ನು ಮೊದಲು ಮನಗೊಳ್ಳಬೇಕಿದೆ.
ಇಫಾಜ್
ಪತ್ರಿಕೋದ್ಯಮ ವಿಭಾಗ, ಎಪಿಎಂ ಸರಕಾರಿ ಕಾಲೇಜು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.