ಅನಾಥಶ್ರಮಕ್ಕೆ ದೇಣಿಗೆ ನೀಡಿದ ಕೆನಡಾ ತಂಡ
Team Udayavani, Nov 30, 2018, 6:35 AM IST
ಹಾಕಿ ವಿಶ್ವ ಕಪ್ ಕೂಟದಲ್ಲಿ ಪಾಲ್ಗೊಳ್ಳಲು ಬಂದ ಕೆನಡಾ ತಂಡ ಉತ್ತಮ ಕೆಲಸವೊಂದರಲ್ಲಿ ತೊಡಗಿಸಿಕೊಂಡು ಪ್ರಶಂಸೆಗೆ ಕಾರಣವಾಗಿದೆ.
ಬುಧವಾರದ ದ್ಘಾಟನಾ ಪಂದ್ಯದ ಟಾಸ್ ವೇಳೆ ಕೆನಡಾ ತಂಡ ಬೆಲ್ಜಿಯಂ ತಂಡಕ್ಕೆ ಕ್ರೀಡಾಧ್ವಜ (ಪೆನ್ನಂಟ್) ನೀಡುವ ಬದಲು ಒಂದು ಪತ್ರವನ್ನು ನೀಡಿತ್ತು. “ವಿಶ್ವಕಪ್ ಕೂಟದ ಸಲುವಾಗಿ ಮಕ್ಕಳು ಹಾಕಿಯಲ್ಲಿ ಮುಂದುವರಿಯಲಿ ಎಂಬ ಕಾರಣಕ್ಕೆ ಒಡಿಶಾದ ಬಲಿಗುಡದಲ್ಲಿರುವ ಅನಾಥಶ್ರಮಕ್ಕೆ ದೇಣಿಗೆ ನೀಡಿದೆ. ಈ ದೇಣಿಗೆ ಸಹಾಯದಿಂದ ಅವರ ಹಾಕಿ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ಅಲ್ಲಿನ ಮಕ್ಕಳು ವಿಶ್ವ ಕಪ್ ಟೂರ್ನಿಯನ್ನು ವೀಕ್ಷಿಸಬಹುದು’ ಎಂದು ಇದರಲ್ಲಿ ಉಲ್ಲೇಖೀಸಲಾಗಿತ್ತು.
ಕ್ರೀಡಾಧ್ವಜದ ಉಳಿತಾಯದಿಂದ ಹೆಚ್ಚಿನ ಹಣ ಬರದಿದ್ದರೂ, ಸವಲತ್ತುಗಳಿಂದ ವಂಚಿತರಾಗಿರುವ ಯುವಜನಾಂಗ ಹಾಕಿ ಕ್ರೀಡೆಯಲ್ಲಿ ಮುಂದುವರಿಯಲು ಚಿಕ್ಕ ಸಹಾಯ ಮಾಡಿರುವ ಕೆನಡಾ ತಂಡದ ನಡವಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದಲ್ಲಿ ಕೆನಡಾ ತಂಡ ಇರುವಷ್ಟು ದಿನ ಈ ಕಾರ್ಯವನ್ನು ಮುಂದುವರಿಸಲಿದೆ. ಅಲ್ಲದೆ ಈ ಹಣ ವಿಶ್ವ ಪ್ ಕೂಟದಲ್ಲಿ ಕೆನಡಾ ತಂಡದ ಪಂದ್ಯಗಳ ವೀಕ್ಷಣೆಗೆ ಅನಾಥಶ್ರಮದ ಮಕ್ಕಳನ್ನು ಕರೆತರಲು ಉಪಯೋಗವಾಗಲಿದೆ.
ಸಲಹೆ ನೀಡಿದ ಆ್ಯಂಡ್ರಿಯಾ
ಕೆನಡಾದ ಈ ಯೋಜನೆಗೆ ನೆರವಾದವರು, ಭಾರತದಲ್ಲಿ ಸರಕಾರೇತರ ಸಂಸ್ಥೆಯನ್ನು ನಡೆಸುತ್ತಿರುವ ಆ್ಯಂಡ್ರಿಯಾ ತುಮಶ್ರಿನ್. ಜರ್ಮನಿಯ ಮಾಜಿ ಹಾಕಿ ಆಟಗಾರ್ತಿಯಾಗಿರುವ ಆ್ಯಂಡ್ರಿಯಾ ಕಳೆದ 7 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದಾರೆ. ಕೆನಡಾ ತಂಡಕ್ಕೆ ಆ್ಯಂಡ್ರಿಯಾ ಅವರ ಪರಿಚಯವಿದ್ದ ಕಾರಣ ವಿಶ್ವಕಪ್ ವೇಳೆ ಕೆನಡಾ ತಂಡಕ್ಕೆ ನೆರವಾಗಲು ಆಹ್ವಾನಿಸಲಾಗಿತ್ತು. ಭಾರತದಲ್ಲಿ ಹಾಕಿ ಆಡುತ್ತಿರುವ ಮಕ್ಕಳಿಗೆ ಏನಾದರೂ ಸಹಾಯ ಅಗತ್ಯವಿದೆಯೇ ಎಂದು ಅವರಲ್ಲಿ ಕೇಳಲಾಗಿತ್ತು. ಆಗ, ಸ್ವತಃ ಆ್ಯಂಡ್ರಿಯಾ ಅವರು ಬಲಿಗುಡದಲ್ಲಿರುವ ಅನಾಥಶ್ರಮದ ಮಕ್ಕಳ ಹಾಕಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಆ ಅನಾಥಶ್ರಮದ ಮಕ್ಕಳ ಕುರಿತು ತಿಳಿಸಿದ್ದಾರೆ. ಈ ಅನಾಥಶ್ರಮವನ್ನು “ಕ್ಯಾಟಲಿಸ್ಟ್ ಫಾರ್ ಸೋಶಿಯಲ್ ಆ್ಯಕ್ಷನ್’ ಎಂಬ ಸಂಸ್ಥೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.