ಪ್ರವಾಸಿಗರ ಸ್ವರ್ಗ ರಾಣಿಪುರಂ ಅಭಿವೃದ್ಧಿಗೆ 100 ಕೋಟಿ ರೂ. ಯೋಜನೆ
Team Udayavani, Nov 30, 2018, 2:40 AM IST
ಕಾಸರಗೋಡು: ಜಿಲ್ಲೆಯ ಪ್ರವಾಸಿ ಕೇಂದ್ರ ಚಾರಣಧಾಮ ರಾಣಿಪುರಂ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. 100 ಕೋಟಿ ರೂ. ಮೊತ್ತದಲ್ಲಿ ಹೊಸ ಪ್ರವಾಸೋದ್ಯಮ ಯೋಜನೆ ಸಾಕಾರಗೊಳ್ಳಲಿದೆ. ಅಭಿವೃದ್ಧಿ ಯೋಜನೆಯ ಅಂಗವಾಗಿ ಚಾರಣಧಾಮದ ಸಮೀಪ ಕೇಬಲ್ ಕಾರು ಯಾತ್ರೆ ಮತ್ತು ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಸುವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗಿದೆ.
ಕೇಬಲ್ ಕಾರಿಗೆ ಸ್ಥಳ ನಿಗದಿ
ಕೇಬಲ್ ಕಾರು ಪಯಣಕ್ಕೆ ಪೂರಕವಾಗಿರುವ ಸ್ಥಳವನ್ನು ಗೊತ್ತುಪಡಿಸಲಾಗಿದ್ದು, ಟೂರಿಸಂ ಸರ್ಕ್ಯೂಟ್ ಒಳಪಡುವಂತೆ ರಾಣಿಪುರಂ ಚಾರಣಧಾಮದ ಸಮೀಪದಲ್ಲಿರುವ ಏಳು ಎಕರೆ ಸ್ಥಳದಲ್ಲಿ ಹೊಸ ಪ್ರವಾಸಿ ಯೋಜನೆ ಅನಾವರಣಗೊಳ್ಳಲಿದೆ. ಚಂಗನಶ್ಯೇರಿಯ ಅಪ್ಲೈಡ್ ಪ್ರಾಪರ್ಟಿಸ್ ಅಂಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರನ್ನು ಭೇಟಿ ಮಾಡಿ ಭೂ ಸ್ಥಳದ ರೇಖಾಚಿತ್ರವನ್ನು ಹಸ್ತಾಂತರಿಸಿದರು.
ಖಾಸಗಿ ಸಹಭಾಗಿತ್ವ
ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿ ಯೋಜನೆಯ ಪ್ರಾಥಮಿಕ ಹಂತದ ಕೆಲಸ ಕಾರ್ಯಗಳಿಗೆ ಅಂಕಿತ ಹಾಕಲಾಗಿದೆ. ಇದಕ್ಕೆ ಅಗತ್ಯವಿರುವ ಮೂಲಭೂತ ಅಗತ್ಯತೆಗಳನ್ನು ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಕಂಪೆನಿ ಅಧಿಕೃತರು ತಿಳಿಸಿದ್ದಾರೆ.
ಬೆಟ್ಟದಲ್ಲಿ ಗ್ಲಾಸ್ ಹೌಸ್
ಯೋಜನೆಯಡಿ ಚಾರಣಧಾಮದ ಬೆಟ್ಟ ಪ್ರದೇಶದಲ್ಲಿ ಗ್ಲಾಸ್ ಹೌಸ್ ನಿರ್ಮಾಣವಾಗಲಿದೆ. ಖಾಸಗಿ ಸಹಭಾಗಿತ್ವವನ್ನು ಡಿ.ಟಿ.ಪಿ.ಸಿ ಈ ಹಿಂದೆಯೇ ಅಪೇಕ್ಷಿಸಿತ್ತು ಎಂದು ಹೇಳಲಾಗಿದೆ. ಕಲ್ಲಿಕೋಟೆಯ ಖಾಸಗಿ ಸಂಸ್ಥೆ ಅಧಿಕೃತರು ಮುಂದಿನವಾರ ರಾಣಿಪುರಕ್ಕೆ ಆಗಮಿಸಿ, ಗ್ಲಾಸ್ ಹೌಸ್ ನಿರ್ಮಾಣ ಕಾರ್ಯದ ಬಗ್ಗೆ ಅಧ್ಯಯನ ನಡೆಸಲಿದ್ದಾರೆ ಎಂದು ಡಿ.ಟಿ.ಪಿ.ಸಿ. ಪ್ರಬಂಧಕ ಪಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.