ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ವಕೀಲರ ಆಗ್ರಹ

Team Udayavani, Nov 30, 2018, 11:42 AM IST

highcourt2.jpg

ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ.

ಹೈಕೋರ್ಟ್‌ನಲ್ಲಿ ಸದ್ಯ 29 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಶೀಘ್ರ ಭರ್ತಿ ಮಾಡುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ಪ್ರಧಾನಮಂತ್ರಿ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಕೇಂದ್ರದ ಅಟಾರ್ನಿ ಜನರಲ್‌ ಹಾಗೂ ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇರುವುದರಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಮೇಲೆ ಕಾರ್ಯ ಒತ್ತಡ ಹೆಚ್ಚಾಗುತ್ತಿದೆ. ಅಲ್ಲದೇ ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದ್ದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕ ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಆ ಪೈಕಿ 33 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಬೆಂಗಳೂರು ಪ್ರಧಾನ ಪೀಠದಲ್ಲಿ 23, ಧಾರವಾಡದಲ್ಲಿ 6 ಹಾಗೂ ಕಲಬುರಗಿಯಲ್ಲಿ 4 ನ್ಯಾಯಮೂರ್ತಿಗಳಿದ್ದಾರೆ. ರಾಜ್ಯ ಹೈಕೋರ್ಟ್‌ನಲ್ಲಿ ಪ್ರಸ್ತುತ 3.25 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಬಾಕಿ ಪ್ರಕರಣ ಸಂಖ್ಯೆ ಹೆಚ್ಚಿರುವುದರಿಂದ ತ್ವರಿತ ನ್ಯಾಯ ಸಿಗದೆ ಕಕ್ಷೀದಾರರು ತೊಂದರೆ ಅನುಭವಿಸುತ್ತಿದ್ದಾರೆ.

ಆದ್ದರಿಂದ ಕಳೆದ 2018ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ ಕೊಲಿಜಿಯಂ 9 ಮಂದಿ ವಕೀಲರ ಹೆಸರನ್ನು ನ್ಯಾಯಮೂರ್ತಿಗಳ ಹುದ್ದೆಗಳಿಗೆ ಶಿಫಾರಸು ಮಾಡಿತ್ತು. ಆ ಕಡತ ಇನ್ನೂ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಆ ನೇಮಕ ಪ್ರಸ್ತಾವಕ್ಕೆ ಆದಷ್ಟು ಬೇಗ ಅನುಮೋದನೆ ನೀಡಬೇಕು ಎಂದು ಅವರು ಕೋರಿದ್ದಾರೆ.

ಟಾಪ್ ನ್ಯೂಸ್

Theerathalli

Shivamogga: ತೀರ್ಥಹಳ್ಳಿ ತಹಶೀಲ್ದಾರ್‌ ಜಕ್ಕಣ್ಣ ಗೌಡರ್ ಹೃದಯಘಾತದಿಂದ ನಿಧನ!

CM-Cavery

Water Dispute:ಮೇಕೆದಾಟು, ಮಹದಾಯಿಗೆ ಕೇಂದ್ರದಿಂದ ಎಚ್‌ಡಿಕೆ ಅನುಮತಿ ಕೊಡಿಸಲ್ಲವೇಕೆ?: ಸಿಎಂ

Multan Test: ಇಂಗ್ಲೆಂಡ್‌ಗೆ ಡಕೆಟ್‌ ಶತಕದ ಆಸರೆ

Multan Test: ಇಂಗ್ಲೆಂಡ್‌ಗೆ ಡಕೆಟ್‌ ಶತಕದ ಆಸರೆ

Ipl: ಮತ್ತೆ ಮುಂಬೈ ತಂಡ ಸೇರಿಕೊಂಡ ಪರಸ್‌ ಮ್ಹಾಂಬ್ರೆ

Ipl: ಮತ್ತೆ ಮುಂಬೈ ತಂಡ ಸೇರಿಕೊಂಡ ಪರಸ್‌ ಮ್ಹಾಂಬ್ರೆ

Kylian Mbappe: ಅತ್ಯಾಚಾರ ಆರೋಪ ಸುಳ್ಳು

Kylian Mbappe: ಅತ್ಯಾಚಾರ ಆರೋಪ ಸುಳ್ಳು

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cavery-Water

Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್‌ ಸಿದ್ಧ: ಡಿಸಿಎಂ ಶಿವಕುಮಾರ್‌

Theft: ಮನೆ ಕೀಲಿ ಹುಡುಕಿ ಕನ್ನ ಹಾಕುತ್ತಿದ್ದ ಡೆಲಿವರಿ ಬಾಯ್‌

Theft: ಮನೆ ಕೀಲಿ ಹುಡುಕಿ ಕನ್ನ ಹಾಕುತ್ತಿದ್ದ ಡೆಲಿವರಿ ಬಾಯ್‌

Fraud: ವಾಟ್ಸ್‌ಆ್ಯಪ್‌ ಹೂಡಿಕೆ ಸಂದೇಶ ನಂಬಿ 1.5 ಕೋಟಿ ಕಳೆದುಕೊಂಡ ಉದ್ಯಮಿ!

Fraud: ವಾಟ್ಸ್‌ಆ್ಯಪ್‌ ಹೂಡಿಕೆ ಸಂದೇಶ ನಂಬಿ 1.5 ಕೋಟಿ ಕಳೆದುಕೊಂಡ ಉದ್ಯಮಿ!

Dk Shivakumar: ಮನೆಗೆ ಕಾವೇರಿ ಬರುತ್ತಾಳೆ, ಪೂಜೆ ಮಾಡಿ ಸ್ವೀಕರಿಸಿ; ಡಿಕೆಶಿ

Dk Shivakumar: ಮನೆಗೆ ಕಾವೇರಿ ಬರುತ್ತಾಳೆ, ಪೂಜೆ ಮಾಡಿ ಸ್ವೀಕರಿಸಿ; ಡಿಕೆಶಿ

BNG1

Heavy Rain Capital: ಒಂದೂವರೆ ದಿನ ಸುರಿದ ಮಳೆಗೆ ಬೆಂಗಳೂರು ತತ್ತರ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Theerathalli

Shivamogga: ತೀರ್ಥಹಳ್ಳಿ ತಹಶೀಲ್ದಾರ್‌ ಜಕ್ಕಣ್ಣ ಗೌಡರ್ ಹೃದಯಘಾತದಿಂದ ನಿಧನ!

CM-Cavery

Water Dispute:ಮೇಕೆದಾಟು, ಮಹದಾಯಿಗೆ ಕೇಂದ್ರದಿಂದ ಎಚ್‌ಡಿಕೆ ಅನುಮತಿ ಕೊಡಿಸಲ್ಲವೇಕೆ?: ಸಿಎಂ

Multan Test: ಇಂಗ್ಲೆಂಡ್‌ಗೆ ಡಕೆಟ್‌ ಶತಕದ ಆಸರೆ

Multan Test: ಇಂಗ್ಲೆಂಡ್‌ಗೆ ಡಕೆಟ್‌ ಶತಕದ ಆಸರೆ

Ipl: ಮತ್ತೆ ಮುಂಬೈ ತಂಡ ಸೇರಿಕೊಂಡ ಪರಸ್‌ ಮ್ಹಾಂಬ್ರೆ

Ipl: ಮತ್ತೆ ಮುಂಬೈ ತಂಡ ಸೇರಿಕೊಂಡ ಪರಸ್‌ ಮ್ಹಾಂಬ್ರೆ

Kasaragod: ಕೊಲೆ ಪ್ರಕರಣ: 8 ವರ್ಷ ಕಠಿಣ ಸಜೆ, ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.