ಈ ಸಲ ಗೆಲ್ಲದಿದ್ದರೆ ಭಾರತ ಇನ್ನೆಂದೂ ಗೆಲ್ಲದು: ಜೋನ್ಸ್
Team Udayavani, Dec 1, 2018, 6:20 AM IST
ಸಿಡ್ನಿ: ಪ್ರವಾಸಿ ಭಾರತ ಕ್ರಿಕೆಟ್ ತಂಡಕ್ಕೆ ಈ ಬಾರಿ ಗೆಲ್ಲಲಾಗದಿದ್ದರೆ ಇನ್ನೆಂದೂ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧ್ಯವಾಗದು ಎಂದು ಕಾಂಗರೂ ನಾಡಿನ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
“ಈಗಿನ ಭಾರತ ತಂಡ ಆಸ್ಟ್ರೇಲಿಯ ತಂಡಕ್ಕಿಂತ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ; ಅದೆಷ್ಟೋ ಮುಂದಿದೆ. ಆದರೆ ಅವರಿಗೆ ತಮ್ಮಲ್ಲಿ ನಂಬಿಕೆ ಇದೆಯೇ, ವೇಗದ ಬೌಲರ್‌ಗಳು ಈ ಸುದೀರ್ಘ ಸರಣಿಯನ್ನು ನಿಭಾಯಿಸಲು ಶಕ್ತರೇ ಎಂಬುದಷ್ಟೇ ಪ್ರಶ್ನೆ’ ಎಂದು ಡೀನ್ ಜೋನ್ಸ್ “ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಜತೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
“ಆಸ್ಟ್ರೇಲಿಯ ಪ್ರವಾಸವೂ ಸೇರಿದಂತೆ ಭಾರತದ ವಿದೇಶಿ ಟೆಸ್ಟ್ ದಾಖಲೆ ಹೇಗೆಯೇ ಇರಲಿ, ಈ ಬಾರಿ ಭಾರತವೇ ನೆಚ್ಚಿನ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಕೊಹ್ಲಿ ಟೀಮ್ ಕನಿಷ್ಠ 2-0 ಅಥವಾ 3-0 ಅಂತರದಿಂದ ಸರಣಿ ಗೆಲ್ಲುವ ಸಾಧ್ಯತೆ ಇದೆ. ಆಸ್ಟ್ರೇಲಿಯ ಎಲ್ಲಿಯೂ ಗೆಲ್ಲುತ್ತದೆ ಎಂಬ ನಂಬಿಕೆ ನನಗಿಲ್ಲ’ ಎಂದು ಜೋನ್ಸ್ ಹೇಳಿದರು.
“ಸಾಮಾನ್ಯವಾಗಿ ಆಸ್ಟ್ರೇಲಿಯವನ್ನು ಅವರ ನೆಲದಲ್ಲಿ ಮಣಿಸುವುದು ಕಷ್ಟ. ಆದರೆ ಈ ಬಾರಿ ಸ್ಮಿತ್, ವಾರ್ನರ್ ತಂಡದಲ್ಲಿಲ್ಲ. ಇವರಿಬ್ಬರು ಸೇರಿಕೊಂಡು ತಂಡಕ್ಕೆ ಶೇ. 40ರಷ್ಟು ಸ್ಥಿರತೆ ತಂದುಕೊಡುತ್ತಿದ್ದರು. ಆಸ್ಟ್ರೇಲಿಯ ಗೆಲ್ಲಬೇಕಾದರೆ ಇವರಿಬ್ಬರ ಸ್ಥಾನವನ್ನು ಸಮರ್ಥವಾಗಿ ತುಂಬುವವರ ಅಗತ್ಯವಿದೆ. ಆದರೆ ಅಂಥವರು ಯಾರಿದ್ದಾರೆ?’ ಎಂದು ಡೀನ್ ಜೋನ್ಸ್ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.