ಡ್ರೋನ್ಗೆ ಹೊಸ ನಿಯಮ
Team Udayavani, Dec 1, 2018, 6:00 AM IST
ನವದೆಹಲಿ: ದೇಶದಲ್ಲಿ ಡ್ರೋನ್ ಬಳಕೆ ಹೆಚ್ಚಾಗುತ್ತಿದ್ದು ಇದಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಹೊಸ ನಿಯಮಗಳು ಶನಿವಾರದಿಂದಲೇ ಜಾರಿಯಾಗಲಿವೆ. ಇನ್ನು ಮುಂದೆ ಡ್ರೋನ್ ಹಾರಾಟವು ಕೇಂದ್ರ ವಿಮಾನಯಾನ ಮಹಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಹೀಗಾಗಿ ಡ್ರೋನ್ ಹಾರಿಸುವ ಮುಂಚೆ ಈ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾದದ್ದು ಕಡ್ಡಾಯ. ಅಲ್ಲದೆ ಪ್ರತಿಯೊಂದು ಡ್ರೋನ್ಗೂ ವಿಶಿಷ್ಟ ಗುರುತಿನ ಸಂಖ್ಯೆ(ಯುಐಎನ್) ಮತ್ತು ಮಾನವ ರಹಿತ ವಿಮಾನ ನಿರ್ವಹಣಾ ಪರವಾನಗಿ( ಯುಎಒಪಿ) ಪಡೆಯ ಬೇಕಾಗುತ್ತದೆ. ಯುಐಎನ್ ಪಡೆಯಲು 1 ಸಾವಿರ ರೂ. ಶುಲ್ಕ ಮತ್ತು ಯುಎಒಪಿ ಪಡೆಯಲು 25 ಸಾವಿರ ರೂ.ಗಳ ಶುಲ್ಕ ನಿಗದಿ ಮಾಡಲಾಗಿದೆ. ಇದು 5 ವರ್ಷಗಳ ಅವಧಿಗೆ ಮಾತ್ರವಿದ್ದು, ಮರು ಪರವಾನಗಿ ಮಾಡಿಸಿಕೊಳ್ಳಬೇಕಾದರೆ 10 ಸಾವಿರ ರೂ. ನೀಡಬೇಕು.
ಡ್ರೋನ್ಗಳ ತೂಕದ ಆಧಾರದ ಮೇಲೆ ನಾಲ್ಕು ಭಾಗಗಳನ್ನಾಗಿ ಮಾಡಲಾಗಿದೆ. 250 ಗ್ರಾಂ. ಅಥವಾ ಕಾಲು ಕೆಜಿಗಿಂತ ಕಡಿಮೆ ತೂಕದ ಡ್ರೋನ್ ಹಾರಾಟಕ್ಕೆ ಅನುಮತಿ ಅಥವಾ ಯುಐಎನ್ ಬೇಕಾಗಿಲ್ಲ. ಆದರೆ, ಇದೇ ಡ್ರೋನ್ ಅನ್ನು 50 ಅಡಿಗಿಂತ ಮೇಲೆ ಹಾರಿಸಬೇಕಾದರೆ ಅನುಮತಿ ಪಡೆಯು ವುದು ಕಡ್ಡಾಯವಾಗಿದೆ. ಇನ್ನು 250 ಗ್ರಾಂ ನಿಂದ 2 ಕೆಜಿ ವರೆಗಿನ ಡ್ರೋನ್ ಗೆ ಕೇವಲ ಯುಐಎನ್ ಸಾಕು. ಆದರೆ, 200 ಅಡಿಗಿಂತ ಮೇಲೆ ಹಾರಿಸಬೇಕಾದರೆ ಎರಡೂ ರೀತಿಯ ಪರವಾನಗಿ ಅಗತ್ಯ. 2 ಕೆಜಿಗಿಂತ ಮೇಲಿನ ಎಲ್ಲ ಡ್ರೋನ್ಗೆ ಯು ಐಎನ್ ಮತ್ತು ಯುಎಒಪಿ ಪಡೆಯುವುದು ಕಡ್ಡಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.