ತಿಂಗಳಿಂದೀಚೆಗೆ ಕಲ್ಲಿದ್ದಲು ಪೂರೈಕೆ ಸುಧಾರಣೆ


Team Udayavani, Dec 1, 2018, 6:00 AM IST

coal.jpg

ಬೆಂಗಳೂರು: ರಾಜ್ಯಕ್ಕೆ ತಿಂಗಳಿನಿಂದೀಚೆಗೆ ಕಲ್ಲಿದ್ದಲು ಪೂರೈಕೆ ಸುಧಾರಿಸಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಹೋಲಿಸಿದರೆ ಸದ್ಯ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ 1.64 ಲಕ್ಷ ಟನ್‌ ಹೆಚ್ಚುವರಿ ಕಲ್ಲಿದ್ದಲು ದಾಸ್ತಾನು ಇದೆ.

ವಿದೇಶಿ ಕಲ್ಲಿದ್ದಲು ಆಮದಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ದೊರಕಿದ್ದು, ಜನವರಿಯಿಂದ ಪೂರೈಕೆಯಾಗುವ ನಿರೀಕ್ಷೆ ಇದೆ. ಜಲವಿದ್ಯುತ್‌ ಘಟಕಗಳಲ್ಲಿನ ನೀರಿನ ಸಂಗ್ರಹವೂ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮವಾಗಿದೆ. ಆದರೆ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕೆ ಪೂರಕವಾಗಿ ವಿದ್ಯುತ್‌ ಪೂರೈಸುವುದು ಸವಾಲೆನಿಸಿದೆ. ಆ ಹಿನ್ನೆಲೆಯಲ್ಲಿ ಕಲ್ಲಿದ್ದಲು ಗಣಿ ಸಂಸ್ಥೆಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪಡೆಯುವ ಪ್ರಯತ್ನವನ್ನು ಇಂಧನ ಇಲಾಖೆ ಮುಂದುವರಿಸಿದೆ.

ಕಳೆದ ಅಕ್ಟೋಬರ್‌ ಅಂತ್ಯದ ವೇಳೆಗೆ ಕಲ್ಲಿದ್ದಲು ದಾಸ್ತಾನು ಗಣನೀಯವಾಗಿ ಕುಸಿದಿದ್ದರಿಂದ ಉಷ್ಣ ವಿದ್ಯುತ್‌ ಉತ್ಪಾದನೆ ಕ್ಷೀಣಿಸಿ ಲೋಡ್‌ ಶೆಡ್ಡಿಂಗ್‌ ಶುರುವಾಗುವ ಭೀತಿ ಎದುರಾಗಿತ್ತು. ಆಯ್ದ ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸುವುದಾಗಿ ಪ್ರಕಟಿಸಿದ್ದರು.

ದಾಸ್ತಾನು ಪ್ರಮಾಣ ಏರಿಕೆ
ಕಳೆದ ಅ.25ಕ್ಕೆ  ರಾಯಚೂರಿನ ಆರ್‌ಟಿಪಿಎಸ್‌ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು ಶೂನ್ಯ ತಲುಪಿತ್ತು. ಆಯಾ ದಿನ ಪೂರೈಕೆಯಾಗುವ ಕಲ್ಲಿದ್ದಲು ಬಳಸಿ ವಿದ್ಯುತ್‌ ಉತ್ಪಾದಿಸಬೇಕಾದ ಗಂಭೀರ ಸ್ಥಿತಿ ತಲುಪಿತ್ತು. ಹಾಗೆಯೇ ಬಳ್ಳಾರಿಯ ಬಿಟಿಪಿಎಸ್‌ ಘಟಕದಲ್ಲಿ 36,000 ಟನ್‌ ಹಾಗೂ ಯರಮರಸ್‌ನ ವೈಟಿಪಿಎಸ್‌ ಘಟಕದಲ್ಲಿ 40,000 ಟನ್‌ ಕಲ್ಲಿದ್ದಲು ದಾಸ್ತಾನು ಮಾತ್ರ ಉಳಿದಿತ್ತು. ಆದರೆ ತಿಂಗಳಿನಿಂದೀಚೆಗೆ ಕಲ್ಲಿದ್ದಲು ದಾಸ್ತಾನಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

1.64 ಲಕ್ಷ ಟನ್‌ ಹೆಚ್ಚುವರಿ ದಾಸ್ತಾನು
ತಿಂಗಳಿನಿಂದೀಚೆಗೆ ಕಲ್ಲಿದ್ದಲು ಪೂರೈಕೆ ಸುಧಾರಿಸಿದೆ. ಆರ್‌ಟಿಪಿಎಸ್‌ನಲ್ಲಿ 60,000 ಟನ್‌, ಬಿಟಿಪಿಎಸ್‌ನಲ್ಲಿ 1.35 ಲಕ್ಷ ಟನ್‌ ಹಾಗೂ ವೈಟಿಪಿಎಸ್‌ನಲ್ಲಿ 45,000 ಟನ್‌ ಕಲ್ಲಿದ್ದಲು ದಾಸ್ತಾನು ಇದೆ. ತಿಂಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ಹೆಚ್ಚುವರಿ 1.64 ಲಕ್ಷ ಟನ್‌ ಕಲ್ಲಿದ್ದಲು ಶೇಖರಣೆ ಇರುವುದು ತುಸು ಸಮಾಧಾನ ತರಬಹುದು. ಆದರೂ ರಾಜ್ಯಕ್ಕೆ ಅಗತ್ಯವಿರುವಷ್ಟು ಹಾಗೂ ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುತ್ತಿಲ. ವೈಟಿಪಿಎಸ್‌ನ ಒಂದು ಘಟಕ ತಾಂತ್ರಿಕ ದೋಷ ಕಾರಣಕ್ಕೆ ಸ್ಥಗಿತಗೊಂಡಿರುವುದರಿಂದ ಕಲ್ಲಿದ್ದಲು ದಾಸ್ತಾನು ಶೇಖರಣೆಗೂ ಸಹಾಯಕವಾದಂತಾಗಿದೆ.

ಉತ್ತಮ ನೀರು ಸಂಗ್ರಹ
ಜಲವಿದ್ಯುತ್‌ ಘಟಕಗಳಿರುವ ಜಲಾಶಯಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. 2017ರ ನ.30ಕ್ಕೆ ಹೋಲಿಸಿದರೆ 2018ರ ನ.30ನಲ್ಲಿ ಹೆಚ್ಚುವರಿಯಾಗಿ 2,500 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಬಹುದಾದಷ್ಟು ನೀರಿನ ಸಂಗ್ರಹವಿದೆ. ಸದ್ಯ ನಿತ್ಯ 20ರಿಂದ 25 ದಶಲಕ್ಷ ಯೂನಿಟ್‌ ವಿದ್ಯುತ್‌ಅನ್ನು ಜಲವಿದ್ಯುತ್‌ ಘಟಕಗಳಿಂದ ಉತ್ಪಾದಿಸಲಾಗುತ್ತಿದೆ. ಜನವರಿವರೆಗೆ ಇದೇ ಪ್ರಮಾಣದಲ್ಲಿ ಜಲವಿದ್ಯುತ್‌ ಉತ್ಪಾದನೆಯಾಗಲಿದ್ದು, ನಂತರ ಮೇ ಅಂತ್ಯದವರೆಗೆ ನಿತ್ಯ ಸರಾಸರಿ 30ರಿಂದ 35 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಲು  ಯೋಜನೆ ರೂಪಿಸಲಾಗಿದೆ. ಹಾಗಾಗಿ ಮೇ ಅಂತ್ಯದವರೆಗೆ ಜಲವಿದ್ಯುತ್‌ ಉತ್ಪಾದನೆಯಲ್ಲಿ ಹೆಚ್ಚಿನ ವ್ಯತ್ಯಯವಾಗದು ಎಂದು ಕೆಪಿಸಿಎಲ್‌ ಮೂಲಗಳು ತಿಳಿಸಿವೆ.

400 ಕೋಟಿ ರೂ. ವೆಚ್ಚ?
ದೇಶೀಯ ಕಲ್ಲಿದ್ದಲು ಗಣಿ ಸಂಸ್ಥೆಗಳಿಂದ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗದ ಕಾರಣ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಂಡು ಬಳಸಲು ಸರ್ಕಾರ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಎಲ್‌ ಟೆಂಡರ್‌ ಪ್ರಕ್ರಿಯೆ ಆರಂಭಿಸಿದ್ದು, ಸದ್ಯದಲ್ಲೇ ಟೆಂಡರ್‌ ತೆರೆದು ಮುಂದಿನ ಪ್ರಕ್ರಿಯೆ ನಡೆಸಲಿದೆ. ವಿದೇಶಿ ಕಲ್ಲಿದ್ದಲು ದರ ಪ್ರತಿ ಟನ್‌ಗೆ ಸುಮಾರು 7,500ರಿಂದ 8000 ರೂ.ನಷ್ಟಿದ್ದು, 400 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಜನವರಿ ಆರಂಭದಿಂದ ವಿದೇಶಿ ಕಲ್ಲಿದ್ದಲು ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಸದ್ಯ ಬೇಡಿಕೆ ಪ್ರಮಾಣ ಸರಾಸರಿ 208 ದಶಲಕ್ಷ ಯೂನಿಟ್‌ನಷ್ಟಿದ್ದು (10,000 ಮೆಗಾವ್ಯಾಟ್‌ಗೂ ಹೆಚ್ಚು), ಬೇಡಿಕೆಯಷ್ಟು ಪೂರೈಕೆ ಮಾಡಲು ಇಂಧನ ಇಲಾಖೆ ತೀವ್ರ ಕಸರತ್ತು ನಡೆಸಿದೆ. ಸೌರಶಕ್ತಿ ಮೂಲದಿಂದ 3,000 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು ಮೇವರೆಗೆ ಇದೇ ಪ್ರಮಾಣದಲ್ಲಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಉಷ್ಣ ವಿದ್ಯುತ್‌, ಜಲವಿದ್ಯುತ್‌ ಮೂಲದಿಂದ 73 ದಶಲಕ್ಷ ಯೂನಿಟ್‌, ನವೀಕರಿಸಬಹುದಾದ ಇಂಧನ ಮೂಲದಿಂದ 59 ದಶಲಕ್ಷ ಯೂನಿಟ್‌, ಕೇಂದ್ರ ಸರ್ಕಾರದ ಹಂಚಿಕೆಯಡಿ 67 ದಶಲಕ್ಷ ಯೂನಿಟ್‌, ಉಡುಪಿಯ ಯುಪಿಸಿಎಲ್‌ ಘಟಕದಿಂದ 9 ದಶಲಕ್ಷ ಯೂನಿಟ್‌ ವಿದ್ಯುತ್‌ ಪೂರೈಕೆಯಾಗುತ್ತಿದೆ.

ಅಕ್ಟೋಬರ್‌ ಅಂತ್ಯಕ್ಕೆ ಹೋಲಿಸಿದರೆ ಸದ್ಯ ಕಲ್ಲಿದ್ದಲು ಪೂರೈಕೆ ಪ್ರಮಾಣ ತುಸು ಸುಧಾರಿಸಿದೆ. ಹಾಗೆಂದು ಕಲ್ಲಿದ್ದಲು ಗಣಿ ಸಂಸ್ಥೆಗಳು ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುತ್ತಿಲ್ಲ. ತಾಂತ್ರಿಕ ದೋಷ ಕಾರಣಕ್ಕೆ ವೈಟಿಪಿಎಸ್‌ನ ಒಂದು ಘಟಕ ಸ್ಥಗಿತಗೊಂಡಿದ್ದು, ಬಿಟಿಪಿಎಸ್‌, ಆರ್‌ಟಿಪಿಎಸ್‌ನಲ್ಲಿ ಗರಿಷ್ಠ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಬೇಡಿಕೆಗೆ ಪೂರಕವಾಗಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಿ ಪೂರೈಸಲು ಪ್ರಯತ್ನ ಮುಂದುವರಿಸಲಾಗಿದೆ ಎಂದು ಕೆಪಿಸಿಎಲ್‌ ಉನ್ನತ ಮೂಲಗಳು ತಿಳಿಸಿವೆ.

ಕಲ್ಲಿದ್ದಲು ದಾಸ್ತಾನು ವಿವರ
ಘಟಕ    ಅ.25    ನ.30
ಆರ್‌ಟಿಪಿಎಸ್‌    00    60,000 ಟನ್‌
ಬಿಟಿಪಿಎಸ್‌    36,000 ಟನ್‌    1.35 ಲಕ್ಷ ಟನ್‌
ವೈಟಿಪಿಎಸ್‌    40,000 ಟನ್‌    45,000 ಟನ್‌
ಒಟ್ಟು        76,000 ಟನ್‌    2,40,000 ಟನ್‌

– ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

Daily Horoscope:

Daily Horoscope: ಹೇಗಿದೆ ನೋಡಿ ಶನಿವಾರದ ನಿಮ್ಮ ಗ್ರಹಬಲ

Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ

Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Lokayukta ಪತ್ರ ಸೋರಿಕೆ ಹೇಗಾಯ್ತು: ರಾಜ್ಯಪಾಲರ ಪ್ರಶ್ನೆ

Lokayukta ಪತ್ರ ಸೋರಿಕೆ ಹೇಗಾಯ್ತು: ರಾಜ್ಯಪಾಲರ ಪ್ರಶ್ನೆ

Court ಕಲಾಪ ನೇರಪ್ರಸಾರ ಚಿತ್ರೀಕರಣಕ್ಕೆ ನಿರ್ಬಂಧ; ಪೂರ್ವಾನುಮತಿ ಅಗತ್ಯ: ಹೈಕೋರ್ಟ್‌ ಸೂಚನೆ

Court ಕಲಾಪ ನೇರಪ್ರಸಾರ ಚಿತ್ರೀಕರಣಕ್ಕೆ ನಿರ್ಬಂಧ; ಪೂರ್ವಾನುಮತಿ ಅಗತ್ಯ: ಹೈಕೋರ್ಟ್‌ ಸೂಚನೆ

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ? Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

12

Udupi: ಮದ್ಯ ಸೇವಿಸಿ ಬಸ್‌ ಚಾಲನೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.