ಹ್ಯಾಂಡ್‌ಬಾಲ್ ಟೂರ್ನಿ: ಕೊಡಗು-ಮಂಡ್ಯ ತಂಡಗಳಿಗೆ ಪ್ರಶಸ್ತಿ
Team Udayavani, Dec 1, 2018, 10:33 AM IST
ಕಲಬುರಗಿ: ನಗರದ ಚಂದ್ರಶೇಖರ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಮತ್ತು ಮಂಡ್ಯ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ. ಚಿಕ್ಕೋಡಿ ಹಾಗೂ ಧಾರವಾಡ ತಂಡಗಳು ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟಿವೆ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಯುವಕರ ಭಾಗದಲ್ಲಿ ಮಂಡ್ಯ ಮತ್ತು ಧಾರವಾಡ ತಂಡಗಳು, ಯುವತಿಯರ ವಿಭಾಗದಲ್ಲಿ ಕೊಡಗು ಹಾಗೂ ಚಿಕ್ಕೋಡಿ ತಂಡಗಳು ಸೆಣಸಾಟ ನಡೆಸಿದವು.
ಯುವಕರ ವಿಭಾಗದಲ್ಲಿ ಧಾರವಾಡ ತಂಡವನ್ನು ಮಂಡ್ಯ 21-12 ಗೋಲ್ ಅಂತರದಿಂದ ಮಣಿಸಿದರೆ, ಯುವತಿಯರ ವಿಭಾಗದಲ್ಲಿ ಚಿಕ್ಕೋಡಿ ತಂಡವನ್ನು 16-04 ಗೋಲ್‌ಗಳ ಅಂತರದಿಂದ ಗೆದ್ದು ಪ್ರಶಸ್ತಿಗೆ ಭಾಜನವಾಯಿತು. ಯುವಕರ ವಿಭಾಗದಲ್ಲಿ ಹಾವೇರಿ ತಂಡದ ತುಷಾರ ಬೆಸ್ಟ್ ಗೋಲ್ ಕೀಪರ್ ಮತ್ತು 14 ಗೋಲ್‌ಗಳ ಮೂಲಕ ಧಾರವಾಡ ತಂಡದ ರುದ್ರಪ್ಪ ಬೆಸ್ಟ್ ಶೂಟರ್ ಪ್ರಶಸ್ತಿಗೆ ಪಾತ್ರರಾದರು. ಅದೇ ರೀತಿ ಯುವತಿಯರ ವಿಭಾಗದಲ್ಲಿ ಧಾರವಾಡ ತಂಡದ ಅರ್ಪಿತಾ ಬೆಸ್ಟ್ ಗೋಲ್ ಕೀಪರ್ ಹಾಗೂ 13 ಗೋಲ್‌ಗಳ ಮೂಲಕ ಕೊಡಗು ತಂಡದ ಗಾನವಿ ಬೆಸ್ಟ್ ಶೂಟರ್ ಪ್ರಶಸ್ತಿಗೆ ಪಾತ್ರರಾದರು. ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತದ 28 ಯುವಕರ ತಂಡಗಳು, 26 ಯುವತಿಯರ ತಂಡಗಳು ಪಾಲ್ಗೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.