ರಾಮಮಂದಿರ ನಿರ್ಮಾಣ ಉಡುಪಿ: ನಾಳೆ ಬೃಹತ್ ಜನಾಗ್ರಹ ಸಭೆ
Team Udayavani, Dec 1, 2018, 10:36 AM IST
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ಒತ್ತಾಯಿಸಿ ಡಿ.2ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ಜನಾಗ್ರಹ ಸಭೆ ಜರಗಲಿದೆ.
ಅಪರಾಹ್ನ 3 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಬೃಹತ್ ಮೆರವಣಿಗೆ ಹೊರಟು ಅಲಂಕಾರ್ ಟಾಕೀಸ್-ಕಿದಿಯೂರು ಹೊಟೇಲ್-ಸಿಟಿ ಬಸ್ ನಿಲ್ದಾಣ – ಕಲ್ಸಂಕ ಸರ್ಕಲ್ ಮಾರ್ಗವಾಗಿ ಶ್ರೀಕೃಷ್ಣ ಮಠದ ಆವರಣದವರೆಗೆ ಸಾಗಿಬರಲಿದೆ. ಮೆರವಣಿಗೆಯಲ್ಲಿ ಜಿಲ್ಲೆಯ 2,000ಕ್ಕೂ ಅಧಿಕ ಭಜನ ಮಂಡಳಿ ಸದಸ್ಯರು, ವಿವಿಧ ವೇಷಧಾರಿಗಳು ಸಾಗಿಬರಲಿದ್ದಾರೆ.
ಸಂಜೆ 4 ಗಂಟೆಗೆ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಅಭಾವಿಪ ಪರಿಷತ್ ಸಹಕಾರ್ಯ ದರ್ಶಿ ರಾಘವಲು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಹಿಂಪ ಮುಖಂಡ ಮಂಜುನಾಥ ಸ್ವಾಮಿ, ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸೇರಿದಂತೆ ಮಠಾಧೀಶರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 30,000 ಮಂದಿ ಸೇರುವ ನಿರೀಕ್ಷೆ ಇದೆ ಎಂದು ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಮಂದಾರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಜಿಲ್ಲಾ ಸಹಸಂಚಾಲಕ ಸುಧೀರ್ ನಿಟ್ಟೆ, ಜಿಲ್ಲಾ ಸಾಪ್ತಾಹಿಕ್ ಪ್ರಮುಖ್ ಸುರೇಂದ್ರ ಕೋಟೇಶ್ವರ, ದುರ್ಗಾವಾಹಿನಿ ಜಿಲ್ಲಾ ಸಹಸಂಚಾಲಕಿ ಭಾಗ್ಯಶ್ರೀ ಐತಾಳ್ ಉಪಸ್ಥಿತರಿದ್ದರು.
ವಾಹನ ನಿಲುಗಡೆ ವ್ಯವಸ್ಥೆ
ಡಿ.2ರಂದು ಶ್ರೀಕೃಷ್ಣ ಮಠದ ಆವರಣದಲ್ಲಿ ನಡೆಯುವ ಜನಾಗ್ರಹ ಸಭೆಗೆ ಬರುವ ವಾಹನಗಳ ನಿಲುಗಡೆಗೆ ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ.
– ಬೈಂದೂರು, ಕೊಲ್ಲೂರು, ಕುಂದಾಪುರ, ಬ್ರಹ್ಮಾವರ ಕಡೆಗಳಿಂದ ಬರುವ ಬಸ್‌ಗಳಿಗೆ ಬ್ರಹ್ಮಗಿರಿ ಸಮೀಪದ ಸೈಂಟ್ ಸಿಸಿಲಿ ಶಾಲಾ ಮೈದಾನ (50-60 ಬಸ್‌ಗಳು).
– ಪಡುಬಿದ್ರಿ, ಕಾಪು ಕಡೆಗಳಿಂದ ಬರುವ ಕಾರು ಮತ್ತು ಬೈಕ್‌ಗಳಿಗೆ ಕ್ರಿಶ್ಚಿಯನ್ ಶಾಲಾ ಮೈದಾನ (500 ಬೈಕ್, 100 ಕಾರು)
– ಕಾರ್ಕಳ, ಹೆಬ್ರಿ, ಹಿರಿಯಡಕ ಕಡೆಗಳಿಂದ ಬರುವ ಬಸ್‌ಗಳಿಗೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ಪಾರ್ಕಿಂಗ್ ಪ್ರದೇಶ (75 ಬಸ್ಸು )
– ಮಲ್ಪೆ ಕಡೆಗಳಿಂದ ಬರುವ ಕಾರು ಮತ್ತು ಬೈಕ್‌ಗಳಿಗೆ ಅಜ್ಜರಕಾಡು ಜಿÇÉಾ ಆಸ್ಪತ್ರೆ ಬಳಿಯ ರೆಡ್‌ಕ್ರಾಸ್ ಕಚೇರಿ ಮೈದಾನ (500 ಬೈಕ್, 50 ಕಾರು)
ಈ ಮೇಲಿನ ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚುವರಿಯಾಗುವ ಕಾರು, ಬೈಕ್, ಇತರ ಲಘುವಾಹನಗಳನ್ನು ಕೃಷ್ಣ ಮಠದ ಬಳಿಯ ಹೊಸ ವಿದ್ಯೋದಯ ಶಾಲೆ ಬಳಿಯ ಗ¨ªೆಯಲ್ಲಿ, ರಾಜಾಂಗಣದ ಹಿಂಬದಿ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು (1,000 ಬೈಕ್, 200 ಕಾರು). ಹೆಚ್ಚುವರಿ ಬಸ್‌ಗಳನ್ನು ಕಲ್ಸಂಕ ರಾಯಲ್ ಗಾರ್ಡನ್, ಬೀಡಿನಗುಡ್ಡೆ ಮೈದಾನದಲ್ಲಿ ನಿಲುಗಡೆ ಮಾಡಬೇಕು. ರಾಜಾಂಗಣ ಮತ್ತು ಗೀತಾಮಂದಿರ ಬಳಿ ವಿಐಪಿ ಪಾರ್ಕಿಂಗ್ ಅವಕಾಶ ವಿರುತ್ತದೆ. ಡಿ.2ರಂದು ಶ್ರೀಕೃಷ್ಣ ಮಠಕ್ಕೆ ಆಗಮಿಸುವವರು ವಾಹನಗಳನ್ನು ರಾಜಾಂಗಣ ಹಿಂಬದಿಯ ಖಾಲಿಗದ್ದೆಯಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಎಸ್‌ಪಿ ಕಚೇರಿ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.