ಭಾಷಣಕ್ಕೆ ಸೀಮಿತವಾಗದಿರಲಿ ಹೋರಾಟ
Team Udayavani, Dec 1, 2018, 11:16 AM IST
ಕಲಬುರಗಿ: ಹೋರಾಟಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ ಸಮಾಜದ ತಳ ಸಮುದಾಯ, ಶೋಷಿತರ ವರ್ಗ ಮತ್ತು ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಆಗಬೇಕೆಂದು ಚಿತ್ರನಟ ಚೇತನ ಹೇಳಿದರು.
ನಗರದ ಸರ್ಕಾರಿ ಅಂಧ ಬಾಲಕ ವಸತಿ ಶಾಲೆಯಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 63ನೇ ಕನ್ನಡ ರಾಜೋತ್ಯವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಗತಿಪರ ಹೋರಾಟದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಕಾರ್ಮಿಕರು, ಶ್ರಮಿಕರು, ಅಲೆಮಾರಿಗಳು, ತಳ ಸಮುದಾಯದ ಅಭಿವೃದ್ಧಿಗಾಗಿ ಧ್ವನಿ ಎತ್ತಬೇಕು ಎಂದರು.
ಅಲೆಮಾರಿ, ಲಂಬಾಣಿ, ಹಕ್ಕಿ-ಪಿಕ್ಕಿ ಸಮುದಾಯಗಳ ಆಚರಣೆಗಳು ಅಸ್ತಿತ್ವದಲ್ಲಿ ಇರಲು ಅದೇ ಸಮುದಾಯಗಳ ಹೋರಾಟದಿಂದ ಹೊರತು, ಆಡಳಿತ ಅಥವಾ ಮೇಲ್ವರ್ಗದವರಿಂದಲ್ಲ. ವೈವಿಧ್ಯತೆಯೇ ಭಾರತದ ಶಕ್ತಿಯಾಗಿದ್ದು, ದೇಶದಲ್ಲಿ ಏಕರೂಪತೆ ಸ್ಥಾಪಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಹಿಂದಿ, ಹಿಂದೂತ್ವ ಹೇರಿಕೆಯ ಹುನ್ನಾರ ತಡೆಯುವ ಕಾರ್ಯವಾಗಬೇಕು ಎಂದು
ಹೇಳಿದರು.
ಕಾಂಗ್ರೆಸ್ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಕನ್ನಡ ನಾಡು, ನುಡಿ, ಜಲಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳಿಗೆ ಪ್ರಗತಿಪರ ಶಕ್ತಿಗಳು ಬೆಂಬಲ ನೀಡಬೇಕೆಂದು ಕರೆ ನೀಡಿದರು. ಇದೇ ವೇಳೆ ವೈದ್ಯರು, ವಕೀಲರು, ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು.
ಶ್ರೀಶೈಲ ಸಾರಂಗಮಂಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಕಂಬಳೇಶ್ವರ ಸಂಸ್ಥಾನದ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ವಳಕೇರಿ, ಕಾಂಗ್ರೆಸ್ ಮುಖಂಡ ನೀಲಕಂಠ ಮಾಲಗೆ, ಚಂದ್ರಕಾಂತ ಅಷ್ಟಗಿ, ಜೈಕನ್ನಡಿಗರ ವೇದಿಕೆ ಅಧ್ಯಕ್ಷ ಸಚಿನ ಫರತಾಬಾದ, ದತ್ತು ಭಾಸಗಿ, ಕಾಶಿನಾಥ ಮಾಳಗಿ, ಅಮೃತ ಪಾಟೀಲ, ಮಂಜುನಾಥ ನಾಲವಾರಕರ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.