ಭಾರತ 4ನೇ ತಲೆಮಾರಿನ ಕೈಗಾರಿಕಾ ಕ್ರಾಂತಿಗೆ ಸಜ್ಜಾಗುತ್ತಿದೆ
Team Udayavani, Dec 1, 2018, 12:33 PM IST
ಬೆಂಗಳೂರು: ಭಾರತವು ನಾಲ್ಕನೇ ತಲೆಮಾರಿನ ಕೈಗಾರಿಕಾ ಕ್ರಾಂತಿಗೆ ಸಿದ್ಧವಾಗುತ್ತಿದ್ದು, ಯುವ ಉದ್ಯಮಿಗಳು ವಿಶ್ವಾಸ ಮತ್ತು ನಂಬಿಕೆ ಜತೆ ಹೆಜ್ಜೆಯಿಡಬೇಕು ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್‌ಕುಮಾರ್ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯಲ್ಲಿ ಶುಕ್ರವಾರ ಯುವ ಇಂಡಿಯಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸ್ವಂತಿಕೆ, ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಇಚ್ಛಾಶಕ್ತಿ ಇದ್ದರೆ ಉದ್ದಿಮೇದಾರರಾಗಲು ಸಾಧ್ಯ ಎಂದು ಹೇಳಿದರು.
ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ಹಣ ಹುಡುಕಿಕೊಂಡು ಬರುತ್ತದೆ. ಅವಕಾಶದ ಬಾಗಿಲು ತೆರೆಯುತ್ತದೆ. ಭಾರತ ಬೇಡುವ ಭೂಮಿ ಅಲ್ಲ. ಭಗವಂತನನ್ನು ಕರೆಸಿಕೊಳ್ಳುವ ಭೂಮಿ ಎಂದರು. ದೇಶ ಹಾಗೂ ರಾಜ್ಯದಲ್ಲಿ ಹೂಡಿಕೆ ಮಾಡಲು ಬರುವ ಹೂಡಿಕೆದಾರರಿಗೆ ಅತ್ಯಂತ ಸಣ್ಣ ವಸ್ತುವನ್ನೂ ಇದು ಇಲ್ಲಿ ಬಿಟ್ಟರೆ ಬೇರೆ ಎಲ್ಲಿಯೂ ಸಿಗುವುದಿಲ್ಲ ಎನ್ನುವಂತೆ ನಂಬಿಸಬೇಕು. ಆಗ ಮಾತ್ರ ಹೂಡಿಕೆದಾರರು ಹೆಚ್ಚು ಬೆಂಬಲಿಸಲು ಸಾಧ್ಯ.
ಸಬ್ಸಿಡಿ, ಅನುದಾನಗಳ ಹಿಂದೆ ಹೋಗುವವರು ಉದ್ಯಮಿಗಳಾಗುವುದಿಲ್ಲ. ಉದ್ಯಮ ಹಲವರಿಗೆ ಬದುಕು ಕಟ್ಟಿಕೊಡುತ್ತದೆ ಎಂದು ಅಭಿಪ್ರಾಯ ಪಟ್ಟರು. ಭಾರತವು ಚೀನಾಕ್ಕಿಂತ ಅತ್ಯಂತ ವಿಶಾಲ ಹಾಗೂ ಸದೃಢ ರಾಷ್ಟ್ರವಾಗಿದ್ದು, ಎಲ್ಲ ರೀತಿಯ ಸಂಪತ್ತು ಇದೆ.
ಆದರೂ, ನಾವು ಚೀನಾ ದೊಡ್ಡ ದೇಶ ಎನ್ನುತ್ತಿರುವುದು ವಿಪರ್ಯಾಸ. ಅಮೆರಿಕ, ಚೀನಾ, ಯುರೋಪ್ ದೇಶಗಳನ್ನು ಮಾದರಿ ದೇಶ ಎನ್ನುವುದಕ್ಕಿಂತ ನಮ್ಮ ಯುವಕರು ಶ್ರದ್ಧೆ, ವಿಶ್ವಾಸ ಹಾಗೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ, ನಾವೇ ಅವರಿಗೆ ಮಾದರಿಯಾಗುತ್ತೇವೆ ಎಂದು ಹೇಳಿದರು.
ಬಂಡವಾಳ ಹೂಡಿಕೆಗೆ ಯಾರನ್ನೂ ಬೇಡಿಕೊಳ್ಳಬಾರದು. ಕರ್ನಾಟಕದಲ್ಲಿ ಹೂಡಿಕೆ ಮಾಡಿ, ಅದಕ್ಕೆ ರಕ್ಷಣೆ ಮತ್ತು ಅಗತ್ಯ ಮೂಲ ಸೌಕರ್ಯ ನಾವು ನೀಡುತ್ತೇವೆ. ನಿಮಗೆ ಲಾಭ ಬೇಕಾದರೆ ನಮ್ಮಲ್ಲಿ ಬಂದು ಹೂಡಿಕೆ ಮಾಡಿ ಎಂದು ಕರೆಯಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ, ರಷ್ಯಾ ಮೊದಲಾದ ದೇಶಗಳಿಗೆ ಹೋದಾಗ ಭಿಕ್ಷೆ ಬೇಡಲಿಲ್ಲ ಎಂದು ವಿವರಿಸಿದರು.
ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಮಾತನಾಡಿ, ಎಫ್‌ಕೆಸಿಸಿಐ 102 ವರ್ಷದ ಇತಿಹಾಸ ಹೊಂದಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಸಂಸ್ಥೆ ಹೊಂದಿದೆ. ಕೌಶಲ ತರಬೇತಿ ನೀಡಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ನೆರವಾಗಲು ಬೆಂಗಳೂರಿನಲ್ಲಿ ಕೌಶಲ ತರಬೇತಿ ಕೇಂದ್ರ ಆರಂಭಿಸಲಾಗಿದೆ.
ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಎಫ್‌ಕೆಸಿಸಿಐ ಸಿ.ಆರ್.ಜನಾರ್ಧನ್, ಪರಿಕರ್ ಸುಂದರ್, ಮಾಜಿ ಅಧ್ಯಕ್ಷ ಕೆ.ರವಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.