ಸಿಂಪಲ್ ಸವಾರಿಗೆ ಇ-ಬೈಕ್
Team Udayavani, Dec 1, 2018, 12:34 PM IST
ಬೆಂಗಳೂರು: ನಗರದಲ್ಲಿ ಮೆಟ್ರೋ ಇಳಿದ ತಕ್ಷಣ ನಿಮ್ಮ ಮನೆ ಅಥವಾ ಕಚೇರಿಗೆ “ಝೀರೋ ಟ್ರಾಫಿಕ್’ನಲ್ಲಿ ಜುಮ್ ಅಂತಾ ಬೈಕ್‌ನಲ್ಲಿ ಕುಳಿತು ಕಣ್ಣುಮುಚ್ಚಿಕೊಂಡು ಹೋಗುವ ವ್ಯವಸ್ಥೆ ಇದ್ದರೆ ಹೇಗಿರುತ್ತದೆ? ಸರ್ಕಾರ ಮನಸ್ಸು ಮಾಡಿದರೆ, ಈ ಕಲ್ಪನೆ ಸಾಕಾರಗೊಳ್ಳುವ ದಿನಗಳು ದೂರ ಇಲ್ಲ.
ಇದಕ್ಕಾಗಿ “ಇ-ಬೈಕ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟ್‌ಂ’ ಬಂದಿದೆ. ಪಾಡ್ ಟ್ಯಾಕ್ಸಿ ಮಾದರಿಯಲ್ಲೇ ಇದು ಪ್ರಯಾಣಿಕರಿಗೆ ಲಾಸ್ಟ್‌ಮೈಲ್ ಕನೆಕ್ಟಿವಿಟಿ ಕಲ್ಪಿಸಬಹುದು. ಇದಕ್ಕಾಗಿ ಹೆಚ್ಚುವರಿ ಭೂಮಿಯ ಅವಶ್ಯಕತೆ ಇಲ್ಲ. ಖರ್ಚೂ ಕಡಿಮೆ. ಟೈ ಟ್ರಾನ್ ಸೈಕಲ್‌ಲೂಪ್ ಅರ್ಬನ್ ಮೊಬಿಲಿಟಿ ಸೊಲುಷನ್ ಸ್ಟಾರ್ಟ್‌ಅಪ್ ಕಂಪನಿ ಇಂತಹದ್ದೊಂದು ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.
ಈ ಸಂಬಂಧ ಈಗಾಗಲೇ ವೈಟ್‌ಫೀಲ್ಡ್‌ನಲ್ಲಿನ ಕಂಪನಿಯ ಕ್ಯಾಂಪಸ್‌ನಲ್ಲಿ ಇದನ್ನು ಪ್ರಾಯೋಗಿಕವಾಗಿ ನಿರ್ಮಿಸಿದ್ದು, ನಮ್ಮ ಮೆಟ್ರೋ ಸೇರಿದಂತೆ ದೇಶದ ವಿವಿಧ ಮೆಟ್ರೋ ನಿಗಮಗಳ ಜತೆ ಮಾತುಕತೆ ನಡೆಸಿದೆ. ಈ ಮಧ್ಯೆ ಆಂಧ್ರಪ್ರದೇಶದ ಅಮರಾವತಿ ನಗರದಲ್ಲಿ 120 ಮೀ. ಸಣ್ಣ ಮಾರ್ಗದಲ್ಲಿ ಇದನ್ನು ಪರಿಚಯಿಸಲು ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅನುಮತಿ ನೀಡಿದ್ದಾರೆ ಎಂದು ಕಂಪನಿಯ ಚೇತನ್ ತಿಳಿಸಿದರು.
ರಸ್ತೆ ವಿಭಜಕದಲ್ಲಿ 20ರಿಂದ 25 ಸೆಂ.ಮೀ. ಉದ್ದದ ಕಂಬಗಳನ್ನು ಜೋಡಿಸಿ, ಅದರ ಮೇಲೆ ಎರಡೂವರೆ ಮೀ. ಸುತ್ತಳತೆಯ ಹವಾನಿಯಂತ್ರಿತ ಟ್ಯೂಬ್‌ಗಳು ಮತ್ತು ಅದರಲ್ಲಿ ಟ್ರ್ಯಾಕ್ ಹಾಕಿದರೆ, ಅಲ್ಲಿಗೆ ಇ-ಬೈಕ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟ್‌ಂ ರೆಡಿ. ಮೆಟ್ರೋ ಇಳಿದು ಬರುವ ಪ್ರಯಾಣಿಕರು ಈ ಬೈಕ್‌ಗಳ ಮೇಲೆ ಕುಳಿತು ಬಟನ್ ಒತ್ತಿದರೆ ಸಾಕು, ತಾನಾಗಿಯೇ ಸಂಚರಿಸುತ್ತದೆ. ಜನ ತಾವು ಹೋಗಬೇಕಿರುವ ಸ್ಥಳದ ಸಮೀಪದಲ್ಲಿ ಇಳಿದು ತೆರಳಬಹುದು.
ಒಂದು ಕಿ.ಮೀ. ಮಾರ್ಗ ನಿರ್ಮಾಣಕ್ಕೆ 6ರಿಂದ 7 ಕೋಟಿ ರೂ. ಖರ್ಚಾಗಲಿದ್ದು, ಒಂದು ವಾರ ದಲ್ಲಿ ಮಾರ್ಗ ಸಿದ್ಧವಾಗುತ್ತದೆ. ಗಂಟೆಗೆ ಒಂದು ಮಾರ್ಗದಲ್ಲಿ ಕನಿಷ್ಠ 9 ಸಾವಿರ ಪ್ರಯಾಣಿಕರು ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಗಂಟೆಗೆ ಇದರ ವೇಗ 40 ಕಿ.ಮೀ. ಇನ್ನು ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಪಾಡ್ ಟ್ಯಾಕ್ಸಿ) ನಿರ್ಮಾಣಕ್ಕೆ ಪ್ರತಿ ಕಿ.ಮೀ.ಗೆ 25 ಕೋಟಿ ರೂ. ತಗಲುತ್ತದೆ.
ಇದರಲ್ಲಿ 5 ಜನ ಸಂಚರಿಸಬಹುದಾಗಿದ್ದು, ಇದರ ವೇಗ ಗಂಟೆಗೆ 60 ಕಿ.ಮೀ. ಆದರೆ, ಇದಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಬೇಕು. ನಿರ್ಮಾಣಕ್ಕೆ ಸಾಕಷ್ಟು ಸಮಯವೂ ಹಿಡಿಯುತ್ತದೆ ಎಂದು ಚೇತನ್ ಮಾಹಿತಿ ನೀಡುತ್ತಾರೆ. ಇನ್ನು ಇ-ಬೈಕ್‌ಗಳು ಓಡಾಡಲು ವಿದ್ಯುತ್ ಸಂಪರ್ಕ ಕಲ್ಪಿಸುವ ಅಗತ್ಯವೂ ಇಲ್ಲ. ಉದ್ದೇಶಿತ ಟ್ರ್ಯಾಕ್‌ನ ಮೇಲಿನ ಟ್ಯೂಬ್ ಮೇಲೆಯೇ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿರುತ್ತದೆ. ಅದರಿಂದ ಉತ್ಪಾದಿಸಲಾಗುವ ವಿದ್ಯುತ್ ಅನ್ನು ಬೈಕ್‌ಗೆ ಪೂರೈಸಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.