ಪರಿಷೆಗೆ ಮೊದಲೇ ಶೇಂಗಾ ಘಮಲು


Team Udayavani, Dec 1, 2018, 12:34 PM IST

parishege.jpg

ಬೆಂಗಳೂರು: ಎಲ್ಲೆಡೆ ಹರಡಿರುವ ಕಡಲೆಕಾಯಿ ಘಮಲು, ರಸ್ತೆಯ ಎರಡೂ ಬದಿ ರಾತ್ರೋರಾತ್ರಿ ಬೀಡುಬಿಟ್ಟ ನೂರಾರು ವ್ಯಾಪಾರಿಗಳು, ಬಡವರ ಬಾದಾಮಿ ಖರೀದಿಗೆ ಮುಂದಾಗಿರುವ ನಗರವಾಸಿಗಳು, ಸಿಂಗಾರಗೊಂಡು ಆಕರ್ಷಿಸುತ್ತಿರುವ ದೊಡ್ಡಗಣಪತಿ ದೇವಾಲಯ, ರಸ್ತೆಯಲ್ಲಿನ ಕಡಲೆಕಾಯಿ ಸೊಬಗಿಗೆ ಜಾತ್ರೆಯ ವಾತಾವರಣ… 

ಐತಿಹಾಸಿಕ ಕಡಲೆಕಾಯಿ ಪರಿಷೆ ಇದೇ ಸೋಮವಾರ ಮತ್ತು ಮಂಗಳವಾರ (ಡಿ.3 ಮತ್ತು 4) ಆರಂಭವಾಗಲಿದ್ದು, ಪರಿಷೆಗೆ ಮೊದಲೇ ಬಸವನಗುಡಿಯಾದ್ಯಂತ ಕಂಡುಬಂದ ದೃಶ್ಯಗಳಿವು. ಕಾರ್ತಿಕ ಮಾಸದ ಕೊನೆಯ ಸೋಮವಾರ ಡಿ.3ರಂದು ಅಧಿಕೃತವಾಗಿ ಪರಿಷೆಗೆ ಚಾಲನೆ ದೊರೆಯಲಿದೆ.

ಒಂದೆಡೆ ಸೋಮವಾರದ ಪರಿಷೆಗೆ ದೇವಸ್ಥಾನ ಮಂಡಳಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಪರಿಷೆ ಇನ್ನು ಮೂರು ದಿನ ಬಾಕಿ ಇರುವಾಗಲೇ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ ವ್ಯಾಪಾರ- ವಹಿವಾಟು ಜೋರಾಗಿ ನಡೆಯುತ್ತಿದೆ. ಆಂಧ್ರ, ತಮಿಳುನಾಡು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಭಾಗಗಳಿಂದ ಬಂದ ನೂರಾರು ರೈತರು ಹಾಗೂ ಕಡಲೆಕಾಯಿ ವ್ಯಾಪಾರಿಗಳು ದೊಡ್ಡಗಣೇಶ ದೇವಸ್ಥಾನ ರಸ್ತೆಯುದ್ಧಕ್ಕೂ ಪಾದಚಾರಿ ಮಾರ್ಗದಲ್ಲಿ ಗುರುವಾರ ಸಂಜೆಯಿಂದಲೇ ತಮ್ಮ ಮಳಿಗೆಗಳನ್ನು ಹಾಕಿದ್ದಾರೆ.

ಇವರ ಜತೆಗೆ ಜೋಕಾಲಿ, ಜೈಂಟ್‌ವೀಲ್‌, ಮಕ್ಕಳ ಆಟದ ಸಾಮಾನು, ತಿಂಡಿ ತಿನಿಸುಗಳು ಪೂಜೆ ಸಮಾನುಗಳ ಮಳಿಗೆಗಳು ಆರಂಭವಾಗಿವೆ. ಹೀಗಾಗಿಯೇ ಶುಕ್ರವಾರದಿಂದಲೇ ದೊಡ್ಡಗಣೇಶ ದೇವಸ್ಥಾನದ ಸುತ್ತಮುತ್ತಲ ರಸ್ತೆಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಈ ಬಾರಿ ಪರಿಷೆಗೆ 500ರಿಂದ 600 ಮಂದಿ ಕಡಲೆಕಾಯಿ ವ್ಯಾಪಾರಿಗಳು ಬರಲಿದ್ದು, ಶುಕ್ರವಾರವೇ 200ಕ್ಕೂ ಹೆಚ್ಚು ಮಾರಾಟಗಾರರು ಆಗಮಿಸಿ, ದೇವಸ್ಥಾನದ ಬಳಿ ಜಾಗ ಹಿಡಿದಿದ್ದಾರೆ. ಒಂದು ಲೀಟರ್‌ ಹಸಿ ಕಡಲೆಕಾಯಿ ಬೆಲೆ 25 ರೂ. ಹಾಗೂ ಹುರಿದ ಕಡಲೆಕಾಯಿಗೆ 30 ರೂ. ನಿಗದಿಪಡಿಸಲಾಗಿದೆ. ಇನ್ನು ಬೇಯಿಸಿದ, ಉಪ್ಪು ಹಚ್ಚಿದ, ಮಲಾಸೆ ಕಡಲೆಕಾಯಿ ದರ ಸ್ವಲ್ಪ ಹೆಚ್ಚಿದೆ.

ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ:  ಈ ಬಾರಿಯ ಪರಿಷೆಗೆ ಪ್ರತಿದಿನ 2 -3 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದ್ದು, ಒಟ್ಟಾರೆ ಏಳೆಂಟು ಲಕ್ಷ ಜನ ಭಾಗವಹಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಅನುಗುಣವಾಗಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರವಹಿಸಲು ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಎರಡು ಕೆಎಸ್‌ಆರ್‌ಪಿ ತುಕಡಿ, ಒರ್ವ ಎಸಿಪಿ, 6 ಜನ ಸಿಪಿಐ, 15 ಜನ ಪಿಎಸ್‌ಐ, 20 ಎಎಸ್‌ಐ, 250 ಕಾನ್‌ಸ್ಟೆàಬಲ್‌ ಹಾಗೂ 100 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ 35 ಸಿಸಿ ಕ್ಯಾಮರಾ, ಆರು ಭಾಗಗಳಲ್ಲಿ ವಾಚರ್ ವ್ಯವಸ್ಥೆ ಮಾಡಲಾಗಿದೆ ಎಂದು ಜಯನಗರ ಎಸಿಪಿ ಆರ್‌. ಶ್ರೀನಿವಾಸ್‌ ಮಾಹಿತಿ ನೀಡಿದರು. ಇನ್ನು ಪೊಲೀಸ್‌ ಸಿಬ್ಬಂದಿಗೆ ಶನಿವಾರದಿಂದ ಬುಧವಾರದವರೆಗೂ ದೇವಸ್ಥಾನ ಆಡಳಿತ ಮಂಡಳಿಯಿಂದ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. 

ಪರಿಷೆಗೆ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ, 10 ಇ ಶೌಚಾಲಯಗಳು, ಭಕ್ತಾಧಿಗಳು ಸರತಿ ಸಾಲಿನಲ್ಲಿ ಬರಲು ಬ್ಯಾರಿಗೇಟ್‌ ಹಾಕುವ ಮೂಲಕ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಶನಿವಾರದಿಂದ ಬುಧವಾರದವರೆಗೂ 5 ದಿನಗಳ ಕಾಲ ಸ್ವಚ್ಚತೆಗಾಗಿ ಬಿಬಿಎಂಪಿ ವತಿಯಿಂದ ಸ್ವಚ್ಚತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜನದಟ್ಟಣೆ ಇರುವುದರಿಂದ ದೇವಸ್ಥಾನದ ಸುತ್ತಮುತ್ತ ಬಡಾವಣೆಗಳಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಬಸವನಗುಡಿ ಶಾಸಕ ಎಲ್‌.ಎ.ರವಿ ಸುಬ್ರಮಣ್ಯ ತಿಳಿಸಿದರು.  

ವಾಹನ ಸಂಚಾರ ಸ್ಥಗಿತ: ಕಡಲೆಕಾಯಿ ಪರಿಷೆಗಾಗಿ ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಎನ್‌.ಆರ್‌.ಕಾಲೋನಿ, ಗಣೇಶ್‌ಭವನದವರೆಗೂ ವ್ಯಾಪಾರಿಗಳು ಮಳಿಗೆ ಹಾಕಿರುವುದರಿಂದ ಆಶ್ರಮ ಸರ್ಕಲ್‌ನಿಂದ ಬಸವನಗುಡಿ ರಸ್ತೆಯ ಕಡೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲಿಂದ ಹೋಗುವ ಎಲ್ಲ ವಾಹನಗಳು ಹನುಮಂತನಗರದ ಮೂಲಕ ಸಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪರಿಷೆಗೆ ಬರುವವರ ಗಮನಕ್ಕೆ…
ಪಾರ್ಕಿಂಗ್‌:
ಎಪಿಎಸ್‌ ಕಾಲೇಜು, ಕೋಹಿನೂರು ಮೈದಾನ, ಉದಯಭಾನು ಮೈದಾನ. 
ದೇವಸ್ಥಾನ ಸಮಯ: ಬೆಳಗ್ಗೆ 6 ರಿಂದ ರಾತ್ರಿ 11.
ಧಾರ್ಮಿಕ ಕಾರ್ಯಕ್ರಮ: ಡಿ.3ರ ಬೆಳಗ್ಗೆ 6 ಗಂಟೆಯಿಂದಲೇ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ, ಎಣ್ಣೆ ಮರ್ಜನ ಹಾಗೂ 5 ಮೂಟೆಗಳಷ್ಟು ಕಡಲೆಕಾಯಿ ಅಭಿಷೇಕ ನಡೆಯಲಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಕಡಲೆಕಾಯಿ ಪರಿಷೆಯನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಉದ್ಘಾಟಿಸಲಿದ್ದು, ಅಂದೇ 40 ಕೆ.ಜಿ ತೂಕದ ಬಸವಣ್ಣನ ಮೂರ್ತಿಯೊಂದಿಗೆ ಕಡಲೆಕಾಯಿಯ ತುಲಾಭಾರ ನೆರವೇರಲಿದೆ. 

ಪ್ಲಾಸ್ಟಿಕ್‌ ಮುಕ್ತ ಪರಿಷೆಗೆ ಕ್ರಮ: ಪ್ಲಾಸ್ಟಿಕ್‌ಮುಕ್ತ ಪರಿಷೆ ಮಾಡುವ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರು, ಅಧಿಕಾರಿಗಳು ಸಾರ್ವಜನಿಕರಲ್ಲಿ ಅಗತ್ಯ ಜಾಗೃತಿ ಮೂಡಿಸುತ್ತಿದೆ. ವ್ಯಾಪಾರ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಜತೆಗೆ ಸಾರ್ವಜನಿಕರಿಗೆ ಕಡಲೆಕಾಯಿ ಖರೀದಿಸಲು ಚೀಲ ತನ್ನಿ ಎಂದು ಮನವಿ ಮಾಡಲಾಗುತ್ತಿದೆ. ಈಗಾಗಲೇ ಬಿಎಂಎಸ್‌ ಕಾಲೇಜಿ ವಿದ್ಯಾರ್ಥಿಗಳು 10 ಸಾವಿರ ಪೇಪರ್‌ ಬ್ಯಾಗ್‌ಗಳನ್ನು ಸಿದ್ಧಪಡೆಸಿ ಹಂಚುತ್ತಿದ್ದಾರೆ. ಜನಪ್ರತಿನಿಧಿಗಳು ತಮ್ಮ ಕೈಲಾದಷ್ಟು ಬಟ್ಟೆ ಬ್ಯಾಗ್‌ಗಳನ್ನು ಸಾರ್ವಜನಿಕರಿಗೆ ಹಂಚಲು ಸಿದ್ಧತೆ ನಡೆಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು: ಪ್ರತಿ ವರ್ಷದಂತೆ ಈ ಬಾರಿಯೂ ಕಡಲೆಕಾಯಿ ಪರಿಷೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ಬ್ಯೂಗಲ್‌ ರಾಕ್‌, ನರಸಿಂಹಸ್ವಾಮಿ ಉದ್ಯಾನದಲ್ಲಿ ಡಿ.3 ಹಾಗೂ 4 ರಂದು ಸಂಜೆ 6 ಗಂಟೆಯಿಂದ 10ಗಂಟೆವರೆಗೆ ನಡೆಯಲಿವೆ. ಸೋಮವಾರ ಸಂಗೀತ ಸಂಜೆ, ಹಳೆ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ, ನೃತ್ಯ ಸಂಭ್ರಮ. ಮಂಗಳವಾರ ಜಾನಪದ ಕಾರ್ಯಕ್ರಮ, ಸೀತಾರಾಮ ಮುನಿಕೋಟಿ ಅವರಿಂದ ಹರಿಕತೆ, ಸುರೇಶ್‌ ಹೆಗ್ಡೆ ತಂಡದಿಂದ ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿವೆ.  

ಅಳತೆಯಲ್ಲಿ ಮೋಸ ಮಾಡಿದವರಿಗೆ ನಿರ್ಬಂಧ: ಕಡಲೆಕಾಯಿ ವ್ಯಾಪಾರವು ಕಾನೂನು ಬದ್ಧವಲ್ಲದ ಮಾಪನಗಳಲ್ಲಿ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಕಡಲೆಕಾಯಿ ವ್ಯಾಪಾರ ಮಳಿಗೆಗಳಲ್ಲಿ ತಪಾಸಣೆ ನಡೆಸಿದರು.

ಈ ವೇಳೆ 10ಕ್ಕೂ ಹೆಚ್ಚು ವ್ಯಾಪಾರಿಗಳು ಒಂದು ಲೀಟರ್‌ ಸೇರು ಗಾತ್ರವನ್ನು ಚಿಕ್ಕದು ಮಾಡಿ ಅದರ ಸಾಮರ್ಥ್ಯವನ್ನು ಅರ್ಧ ಲೀಟರ್‌ಗಿಂತಲೂ ಕಡೆಮೆಗೆ ಇಳಿಸಿ ಅದರ ಮೂಲಕವೇ ಗ್ರಾಹಕರಿಗೆ ಕಡಲೆಕಾಯಿ ಅಳೆತೆ ಮಾಡಿಕೊಟ್ಟು ಮೋಸ ಮಾಡುತ್ತಿರುವುದು ಪತ್ತೆಯಾಯಿತು.

ಅಂತಹ ವ್ಯಾಪಾರಿಗಳು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಯಿತು. ಈ ಕುರಿತು ಗ್ರಾಹಕರಿಗೂ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಅಳತೆಯಲ್ಲಿ ಯಾವುದೇ ಮೋಸ ಕಂಡುಬಂದಲ್ಲಿ ಮೊಬೈಲ್‌ ನಂ.9535305458 ದೂರು ನೀಡುವಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ತೂಕ ಮತ್ತು ಅಳತೆ ವಿಭಾಗ ಅಧಿಕಾರಿ ಬಿ.ಎಂ.ನಾಗೇಶ್‌ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕಳೆದ 35 ವರ್ಷಗಳಿಂದ ಪರಿಷೆ ಬರುತ್ತಿದ್ದು, ಈ ಬಾರಿ ಗುರುವಾರವೇ ಆಗಮಿಸಿದ್ದು, ಬುಧವಾರದವರೆಗೂ ವ್ಯಾಪಾರ ಮಾಡುತ್ತೇವೆ. ಪ್ರತಿ ಬಾರಿ ಕನಿಷ್ಠ ಐದು ಮೂಟೆ ವ್ಯಾಪಾರ ಮಾಡುತ್ತೇವೆ. ಈ ಬಾರಿ ಒಂದು ಲೀಟರ್‌ಗೆ 25 ರೂ. ನಿಗದಿ ಮಾಡಿದ್ದೇವೆ.  
-ವನಿತಾ, ಕಡಲೆಕಾಯಿ ವ್ಯಾಪಾರಿ

ಈ ಬಾರಿ ಪರಿಷೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಹಾಗೂ ಯಕ್ಷಗಾನಕ್ಕೆ ಆದ್ಯತೆ ನೀಡಲಾಗಿದೆ. ಪಾಸ್ಟಿಕ್‌ ಮುಕ್ತ ಪರಿಷೆ ನಮ್ಮ ಗುರಿಯಾಗಿದ್ದು, ಶಾಲೆ, ಕಾಲೇಜು ಸಂಘ ಸಂಸ್ಥೆಗಳಿಂದ ಕಾಗದ ಹಾಗೂ ಬಟ್ಟೆ ಬ್ಯಾಗ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.
-ಎಲ್‌.ಎ.ರವಿ ಸುಬ್ರಹ್ಮಣ್ಯ, ಬಸವನಗುಡಿ ಶಾಸಕ

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.