18.50 ಲಕ್ಷ ರೂ. ವೆಚ್ಚದ ರುದ್ರಭೂಮಿ ನಾಳೆ ಲೋಕಾರ್ಪಣೆ
Team Udayavani, Dec 1, 2018, 12:54 PM IST
ವೇಣೂರು: ರುದ್ರಭೂಮಿ ಎನ್ನುವುದು ಮಾನವರ ಕೊನೆಯ ಪ್ರಯಾಣವನ್ನು ಘನತೆಯ ರೀತಿಯಲ್ಲಿ ಪೂರ್ಣಗೊಳಿಸಲು ನೆರವಾಗುವ ಪುಣ್ಯಸ್ಥಳ. ಅಂತಹ ಯೋಜನೆಯೊಂದನ್ನು ವೇಣೂರು ಗ್ರಾ.ಪಂ. ಹಾಗೂ ಅನುಷ್ಠಾನ ಸಮಿತಿ ಹಿಂದೂ ರುದ್ರಭೂಮಿ ನಿರ್ಮಿಸುವ ಮೂಲಕ ಗ್ರಾಮಸ್ಥರ ಬೇಡಿಕೆಯನ್ನು ಸಕಾರಗೊಳಿಸಿದೆ.
ಮಿಯಲಾಜೆಯಲ್ಲಿ ನಿರ್ಮಾಣ
ಗ್ರಾಮಸ್ಥರ ಬಹುಕಾಲದ ಬೇಡಿಕೆಯಂತೆ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಗ್ರಾಮದ ಮಿಯಲಾಜೆಯ 1 ಎಕ್ರೆ ಜಾಗದಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿಯ ನಿರ್ಮಾಣ ಆಗಿದ್ದು, ಡಿ. 2ರಂದು ಲೋಕಾ ರ್ಪಣೆಗೊಳ್ಳಲಿದೆ. 2014ರಲ್ಲಿ ವೇಣೂರು ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ಸತೀಶ್ ಹೆಗ್ಡೆಯವರ ಅವಧಿಯಲ್ಲಿ ಅಂದಿನ ಶಾಸಕರಾಗಿದ್ದ ಕೆ. ವಸಂತ ಬಂಗೇರ ಅವರ ಅವಿರತ ಶ್ರಮದಲ್ಲಿ ಜಾಗ ಕಾಯ್ದಿರಿಸಲಾಗಿತ್ತು. 2017ರ ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ಹೊಸ ಆಡಳಿತದಲ್ಲಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದಕ್ಕಾಗಿಯೇ ಹಿಂದೂ ರುದ್ರಭೂಮಿ ಅನುಷ್ಠಾನ ಸಮಿತಿ ರಚಿಸಿ, ವೇಣೂರಿನ ಉದ್ಯಮಿ ಕೆ. ಭಾಸ್ಕರ ಪೈ ಮುಂದಾಳತ್ವದಲ್ಲಿ 18.50 ಲಕ್ಷ ರೂ. ವೆಚ್ಚದಲ್ಲಿ ರುದ್ರಭೂಮಿ ನಿರ್ಮಾಣ ಆಗಿದೆ.
ಅನುದಾನ
ವೇಣೂರು ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಸಹಿತ ರೂ. 9 ಲಕ್ಷದಷ್ಟು ಅನು ದಾನ ವಿನಿಯೋಗಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ದಿಂದ 2 ಲಕ್ಷ ರೂ. ಅನುದಾನ ದೊರೆತಿದೆ. ಉಳಿದಂತೆ ಊರ ಹಾಗೂ ಪರವೂರ ದಾನಿಗಳಿಂದ ಆರ್ಥಿಕ ಸಹಕಾರ ಲಭಿಸಿದೆ.
ವ್ಯವಸ್ಥೆಗಳು
ದಹನ-ಸಿಲಿಕಾನ್ ಚೇಂಬರ್, ವೀಕ್ಷಕರ ಕೊಠಡಿ-ಆಸನ, ಶೌಚಾಲಯ, ಸ್ನಾನ ಗೃಹ, ಗೋಡೌನ್, ನೀರಿನ ಟ್ಯಾಂಕ್, ಇಂಟರ್‌ಲಾಕ್ ನಿರ್ಮಿಸಲಾಗಿದೆ. 25 ಸಾವಿರ ರೂ. ವೆಚ್ಚದಲ್ಲಿ ವೇಣೂರು ಗ್ರಾ.ಪಂ.ನಿಂದ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ.
ಈ ರುದ್ರಭೂಮಿಗೆ ಆವರಣ ಗೋಡೆ, ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆ ಆಗಬೇಕಿದೆ. ಕಚೇರಿ, ಕಾವಲುಗಾರನ ಮನೆ, ರಸ್ತೆ ಸಂಪರ್ಕಕ್ಕೆ ಡಾಮರು, ಉದ್ಯಾನವನ ಇತ್ಯಾದಿ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಧಾರ್ಮಿಕದತ್ತಿ ಇಲಾಖೆ, ಜಿ.ಪಂ., ತಾ.ಪಂ.ಗೂ ಮನವಿ ಮಾಡಲಾಗಿದ್ದು, ಅನುದಾನದ ನಿರೀಕ್ಷೆಯಲ್ಲಿದೆ.
ವಿಗ್ರಹದ ಕೊಡುಗೆ
ರುದ್ರಭೂಮಿಯಲ್ಲಿ ಬೃಹದಾಕಾರದ ಶಿವನ ವಿಗ್ರಹ ಹಾಗೂ ವೀರಬಾಹು (ಸತ್ಯಹರಿಶ್ಚಂದ್ರ) ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಶಿವನ ವಿಗ್ರಹವನ್ನು ವೇಣೂರಿನ ಉದ್ಯಮಿಗಳಾಗಿದ್ದ ದಿ| ಎಂ.ಎನ್. ಭಟ್ ಸ್ಮರಣಾರ್ಥ ಅವರ ಪುತ್ರ ಯಜ್ಞನಾರಾಯಣ ಭಟ್ ಅವರು ಒದಗಿಸಿದರೆ, ವೀರಬಾಹು ವಿಗ್ರಹವನ್ನು ದಿ| ಕೆ.ಎನ್. ಪೈ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು ಕೊಡುಗೆಯಾಗಿ ನೀಡಿದ್ದಾರೆ.
ಸಿಲಿಕಾನ್ ಚೇಂಬರ್‌ನ ಪ್ರಯೋಜನ
ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್‌ನ ರಚನೆಯಿಂದ ಸೌದೆಯ ಉಳಿತಾಯ ಆಗಲಿದ್ದು, ಸcತ್ಛತೆ ಕಾಪಾಡಲು ಸಹಕಾರಿ ಆಗಲಿದೆ. ಅತ್ಯಲ್ಪ ಸಮಯದಲ್ಲಿ ಸುಡುವಿಕೆ, ಬೀಸುವ ಗಾಳಿಯಿಂದ ರಕ್ಷಣೆ ಮತ್ತು ಶಾಖ ಹರಡುವಿಕೆ ಕಡಿಮೆಯಾದ್ದರಿಂದ ಹತ್ತಿರದಿಂದಲೇ ವೀಕ್ಷಣೆ ಮಾಡಬಹುದು. ಬೂದಿ, ಎಲುಬುಗಳ ಸಂಗ್ರಹ ಟ್ರೇಯಲ್ಲಿ ಸುಲಭವಾಗಿ ಸಾಧ್ಯವಾಗುತ್ತದೆ.
ಸಹಕಾರದಿಂದ ಸಾಧ್ಯವಾಗಿದೆ
ಗ್ರಾಮಸ್ಥರ ಅನುಕೂಲಕ್ಕಾಗಿ ಸಾಕಷ್ಟು ಶ್ರಮವಹಿಸಿ ಹಿಂದೂ ರುದ್ರಭೂಮಿಯನ್ನು ನಿರ್ಮಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ವೇಣೂರು ಗ್ರಾ.ಪಂ.ನಿಂದ ಅತಿ ಹೆಚ್ಚಿನ ಅನುದಾನ ಲಭಿಸಿದ್ದರಿಂದ ಇದು ಸಾಧ್ಯವಾಗಿದೆ. ದಾನಿಗಳು ಆರ್ಥಿಕ ಸಹಕಾರ ನೀಡಿದ್ದಾರೆ.
– ಭಾಸ್ಕರ ಪೈ ಅಧ್ಯಕ್ಷರು, ಹಿಂದೂ
ರುದ್ರಭೂಮಿ ಅನುಷ್ಠಾನ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.